ಕಳೆದ ೫ ವರ್ಷಗಳಿಂದ ಸಾಧಕರಿಗೆ ಆನ್‌ಲೈನ್‌ನಲ್ಲಿ ಭಾವವೃದ್ಧಿ ಸತ್ಸಂಗಗಳನ್ನು ಆಯೋಜಿಸಲಾಗುತ್ತಿದೆ. (ಸತ್ಸಂಗದ ಪ್ರಯಾಣ ಈಗ ಭಾವದಿಂದ ಭಕ್ತಿಗೆ ಆಗಿರುವುದರಿಂದ ಈಗ ಈ ಸತ್ಸಂಗಕ್ಕೆ ‘ಭಕ್ತಿಸತ್ಸಂಗ’ ಎಂದು ಮರುನಾಮಕರಣ ಮಾಡಲಾಗಿದೆ.)
೧. ವೃದ್ಧರಾಗಿದ್ದರೂ ಸತ್ಸಂಗಗಳನ್ನು ಕೇಳಲು ತೀವ್ರ ತಳಮಳವಿರುವ ಪೂ. (ಶ್ರೀಮತಿ) ರಾಧಾ ಪ್ರಭು ಅಜ್ಜಿ (೮೪ ವರ್ಷ) !
ಪೂ. (ಶ್ರೀಮತಿ) ರಾಧಾ ಪ್ರಭು ಅಜ್ಜಿ ಯಾವುದೇ ಭಕ್ತಿಸತ್ಸಂಗವನ್ನು ತಪ್ಪಿಸುವುದಿಲ್ಲ. ಅವರಿಗೆ ರಾತ್ರಿ ಬೇಗ ಮಲಗುವ ಅಭ್ಯಾಸವಿದೆ; ಆದರೆ ರಾತ್ರಿ ೯.೪೫ ಕ್ಕೆ ಭಕ್ತಿಸತ್ಸಂಗವಿರುತ್ತದೆ. ಆ ದಿನ ಪೂ. ಅಜ್ಜಿಯವರು ಬೇಗನೇ ಊಟ ಮಾಡಿ ಸ್ವಲ್ಪ ವಿಶ್ರಾಂತಿ ಪಡೆದು ಸತ್ಸಂಗಕ್ಕೆ ೧೫ ನಿಮಿಷ ಮೊದಲು ಏಳುತ್ತಾರೆ. ಸತ್ಸಂಗವನ್ನು ಕೇಳುವ ತೀವ್ರವಾದ ತಳಮಳದಿಂದಾಗಿ, ಅವರು ಸತ್ಸಂಗದ ಸಮಯದಲ್ಲಿ ಎಂದಿಗೂ ನಿದ್ರಿಸುವುದಿಲ್ಲ. ಇಲ್ಲಿಯವರೆಗೆ ಅವರು ಸತ್ಸಂಗದ ಒಂದೇ ಒಂದು ವಾಕ್ಯವನ್ನು ತಪ್ಪಿಸಿಕೊಂಡಿಲ್ಲ. ಅವರು ಸಂತ ಪದವಿಯನ್ನು ಪಡೆದಿದ್ದರೂ ಅವರ ಸತ್ಸಂಗದ ಕುರಿತಾದ ಭಾವ ಮತ್ತು ಸತ್ಸಂಗದ ತೀವ್ರ ತಳಮಳ ಕಲಿಯುವಂತಹದ್ದಾಗಿದೆ.
೨. ಚಿಕ್ಕ ವಯಸ್ಸಿನಲ್ಲೂ ಸತ್ಸಂಗದ ಮಹಿಮೆಯನ್ನು ಅರಿತು ನಿಯಮಿತವಾಗಿ ಭಕ್ತಿಸತ್ಸಂಗವನ್ನು ಕೇಳುವ ಸನಾತನ ಸಂಸ್ಥೆಯ ಮೊದಲ ಬಾಲಕ ಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ) !
ಪೂ. ಭಾರ್ಗವರಾಮ ಪ್ರಭು ಅವರು ನಿಯಮಿತವಾಗಿ ಪೂರ್ಣ ಭಕ್ತಿಸತ್ಸಂಗವನ್ನು ಕೇಳುತ್ತಾರೆ. ಸತ್ಸಂಗದ ಕೊನೆಯಲ್ಲಿ, ‘ಸತ್ಸಂಗ ಏಕೆ ಕೊನೆಗೊಂಡಿತು ? ಪುನಃ ಹಾಕಿ. ನಾನು ಇನ್ನೂ ಕೇಳಲು ಬಯಸುತ್ತೇನೆ’, ಎಂದು ಅವರು ಹೇಳುತ್ತಾರೆ. ಸತ್ಸಂಗ ನಡೆಯುತ್ತಿರುವಾಗ ಮನೆಯವರು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರೆ ಅಥವಾ ಯಾರಾದರೂ ಮಲಗಿದ್ದರೆ ಪೂ. ಭಾರ್ಗವರಾಮ ಅವರಿಗೆ ಜಾಗರೂಕರಾಗಿದ್ದು, “ಸತ್ಸಂಗ ನಡೆಯುತ್ತಿದೆ. ನಾವೆಲ್ಲರೂ ಸತ್ಸಂಗಗಳನ್ನು ಕೇಳಲಿಕ್ಕಿದೆ.” ಎಂದು ಹೇಳುತ್ತಾರೆ. ‘ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ಅವರಿಗೆ ಸತ್ಸಂಗದ ಮಹಿಮೆ ತಿಳಿಯುತ್ತದೆ’, ಎಂಬುದು ಇಲ್ಲಿ ಗಮನಕ್ಕೆ ಬರುತ್ತದೆ ಮತ್ತು ಅವರಲ್ಲಿ ಸತ್ಸಂಗದ ಬಗ್ಗೆ ಇರುವ ಭಾವವು ಕಲಿಯಲು ಸಿಗುತ್ತದೆ. ಭಕ್ತಿಸತ್ಸಂಗದ ಬಗ್ಗೆ ಪೂ. (ಶ್ರೀಮತಿ) ರಾಧಾ ಪ್ರಭು ಅಜ್ಜಿ ಮತ್ತು ಪೂ. ಭಾರ್ಗವರಾಮ ಇವರಲ್ಲಿರುವಂತಹ ತಳಮಳ ಮತ್ತು ಭಾವವು ಎಷ್ಟು ಸಾಧಕರಲ್ಲಿದೆ ?
ಸಾಧಕರೇ, ಮುಂದಿನ ಘೋರ ಆಪತ್ಕಾಲದಲ್ಲಿ ನಮಗೆ ಈ ಸತ್ಸಂಗಗಳು ಸಿಗುತ್ತವೋ ಇಲ್ಲವೋ ಗೊತ್ತಿಲ್ಲ. ಆದುದರಿಂದ, ನೀವು ಈಗ ಪಡೆಯುತ್ತಿರುವ ಈ ದೈವೀ ಭಕ್ತಿ ಸತ್ಸಂಗಗಳ ಮತ್ತು ಅವುಗಳಲ್ಲಿನ ಪ್ರತಿಯೊಂದು ಅಂಶಗಳ ಲಾಭವನ್ನು ಮನಃಪೂರ್ವಕವಾಗಿ ಪಡೆದುಕೊಳ್ಳಿ ಮತ್ತು ಆನಂದದಿಂದ ಗುರುಕೃಪೆಯನ್ನು ಪಡೆಯಲು ದೈವೀ ಭಕ್ತಿಯ ಮಾರ್ಗವನ್ನು ಅನುಸರಿಸಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೧೮.೧೨.೨೦೨೧)