ಇಂಗ್ಲೆಂಡನಲ್ಲಿ ಸಾಕು ಪಕ್ಷಿಗಳ ರಕ್ಷಣೆಗಾಗಿ ಕಾಡು ಪಕ್ಷಿಗಳಿಗೆ ಗುಂಡಿಟ್ಟು ಕೊಲ್ಲಬಹುದು !

ಲಂಡನ (ಇಂಗ್ಲೆಂಡ) – ಇಂಗ್ಲೆಂಡನಲ್ಲಿ ಈಗ ಜನರು ಭೇಟೆಗಾಗಿ ಸಾಕಿರುವ ಪಕ್ಷಿಗಳ ರಕ್ಷಣೆಗಾಗಿ ಕಾಡು ಪಕ್ಷಿಗಳನ್ನು ಗುಂಡಿಟ್ಟು ಕೊಲ್ಲಬಹುದು. ಪಕ್ಷಿಗಳ ಜೊತೆಗೆ ಬೇಟೆಯಾಡಬಹುದು, ಅದಕ್ಕಾಗಿ ಪ್ರತಿವರ್ಷ ದೇಶದಲ್ಲಿ ಕೋಟ್ಯಾಂತರ ಸುಂದರ ಪಕ್ಷಿಗಳನ್ನು ಸಾಕುತ್ತಾರೆ. ಈ ಪಕ್ಷಿಗಳಿಗೆ ಪ್ರತಿದಿನ ಆಹಾರ ನೀಡಿ ಅವುಗಳನ್ನು ದಷ್ಟಪುಷ್ಟ ಮಾಡಲಾಗುತ್ತಿದೆ, ಇದರಿಂದ ಅವುಗಳ ವೇಗ ಕಡಿಮೆಯಾಗುತ್ತದೆ ಮತ್ತು ಬೇಟೆಯ ಸಮಯ ಬಂದರೆ, ಅವುಗಳನ್ನು ಗುರಿಯಾಗಿಸುವುದು ಸುಲಭವಾಗುತ್ತದೆ; ಆದರೆ ಕಾಡು ಪಕ್ಷಿಗಳು ಅವುಗಳ ಮೇಲೆ ಕಣ್ಣಿಟ್ಟು ಅವುಗಳನ್ನು ಬೇಟೆಯಾಡುತ್ತವೆ. `ದಿ ಗಾರ್ಡಿಯನ್’ ಈ ಇಂಗ್ಲೆಂಡಿನ ದಿನ ಪತ್ರಿಕೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ ಸಾಕುಪಕ್ಷಿಗಳನ್ನು ಕಾಪಾಡಲು ಕಾಡು ಪಕ್ಷಿಗಳನ್ನು ಕೊಲ್ಲುವ ಅಧಿಕಾರ ನೀಡಬೇಕೋ ಅಥವಾ ಬೇಡವೋ, ಈ ವಿವಾದ ಅನೇಕ ವರ್ಷಗಳಿಂದ ದೇಶದಲ್ಲಿ ನಡೆಯುತ್ತಿದೆ. ಈಗ ಮೇಲಿನ ಆದೇಶದಿಂದ ಕಾಡು ಪಕ್ಷಿಗಳ ಬೇಟೆಯಾಡಲು ಅನುಮತಿ ನೀಡಲಾಗಿದೆ.