ಕಜಕಿಸ್ತಾನದಲ್ಲಿ ತೈಲ ಬೆಲೆ ಹೆಚ್ಚಾದ ನಂತರ ನಡೆದ ಹಿಂಸಾಚಾರದಿಂದಾಗಿ ಸರಕಾರದಿಂದ ರಾಜಿನಾಮೆ

ಜನವರಿ ೧೯ ರವರೆಗೆ ತುರ್ತು ಪರಿಸ್ಥಿತಿ ಜಾರಿ

ಅಲ್ಮಾಟಿ (ತಜಿಕಿಸ್ತಾನ್) – ಇಲ್ಲಿಯ ಕೇಂದ್ರ ಸರಕಾರವು ತೈಲ ದರ ಹೆಚ್ಚಿಸುವಂತೆ ನಿರ್ಧಾರ ಕೈಗೊಂಡ ನಂತರ ದೇಶದಲ್ಲಿ ನಡೆದಿರುವ ಹಿಂಸಾಚಾರದ ನಂತರ ಸರಕಾರವು ರಾಜಿನಾಮೆ ನೀಡಿದೆ. ಸರಕಾರ ಪೆಟ್ರೋಲಿಯಂ ಪದಾರ್ಥ, ಮನೆಬಳಕೆ ಗ್ಯಾಸ್, ಮತ್ತು ಗ್ಯಾಸೋಲಿನ್ ಇದರ ಬೆಲೆ ಏರಿಕೆ ಮಾಡಿತ್ತು. ಇದರ ವಿರುದ್ಧ ದೇಶಾದ್ಯಂತ ಪ್ರದರ್ಶನಗಳು ಮತ್ತು ಹಿಂಸಾಚಾರ ನಡೆಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಲಾಠಿ ಏಟು ಮತ್ತು ಅಶ್ರುವಾಯು ಉಪಯೋಗಿಸಿತು. ಈ ಹಿಂಸಾಚಾರದಲ್ಲಿ ೧೦೦ ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಸರಕಾರವು ರಾಜಿನಾಮೆ ನೀಡಿದ ನಂತರ ದೇಶದಲ್ಲಿ ಜನವರಿ ೧೯ ರವರೆಗೆ ತುರ್ತುಪರಿಸ್ಥಿತಿ ಜಾರಿ ಮಾಡಿದೆ. ಆರ್ಥಿಕ ರಾಜಧಾನಿ ಅಲ್ಮಾಟಿ ಮತ್ತು ಮಂಗಿಸ್ಟಾಯು ಪ್ರಾಂತದಲ್ಲಿ ರಾತ್ರಿ ೧೧ ರಿಂದ ಬೆಳಿಗ್ಗೆ ೭ ವರೆಗೂ ಸಂಚಾರ ನಿಷೇಧ ಇರಲಿದೆ.