ರಶಿಯಾ ದಾಳಿ ನಡೆಸಿದರೆ ನಿರ್ಣಾಯಕ ಕ್ರಮ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ ಇವರ ಯುಕ್ರೇನ್ ಗೆ ಆಶ್ವಾಸನೆ

ವಿಲ್ಮಿಂಗ್ಟನ್ (ಯುಕ್ರೇನ್) – ರಶಿಯಾ ಯುಕ್ರೇನ್ ಮೇಲೆ ದಾಳಿ ನಡೆಸಿದರೆ, ಅಮೇರಿಕ ಮತ್ತು ಅದರ ಮಿತ್ರ ದೇಶಗಳು ನಿರ್ಣಾಯಕ ಕ್ರಮ ಕೈಗೊಳ್ಳುವುದು ಎಂದು ಅಮೆರಿಕಾದ ರಾಷ್ಟ್ರಧ್ಯಕ್ಷ ಜೋ ಬಾಯಡೆನ ಇವರು ಇತ್ತೀಚೆಗೆ ಯುಕ್ರೆನಿನ ರಾಷ್ಟ್ರಾಧ್ಯಕ್ಷ ವೋಲೋದಿಮಿರ ಜೆಲೆನ್ಸ್ಕಿ ಇವರಿಗೆ ಆಶ್ವಾಸನೆ ನೀಡಿದರು. ಬಾಯಡೆನ ಇವರು ಅವರ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿ ಆಶ್ವಾಸನೆ ನೀಡಿದರು. ಇವರಿಬ್ಬರಲ್ಲಿ ಯುಕ್ರೇನ್‌ನ ಗಡಿಭಾಗದಲ್ಲಿ ರಷ್ಯಾದ ಸೈನ್ಯದ ಉಪಸ್ಥಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಚರ್ಚೆ ನಡೆಯಿತು. ‘ವೈಟ್ ಹೌಸ್’ ಮೂಲಕ ಸಚಿವ ಜೈನ್ ಸಾಕಿ ಇವರು ಮನವಿಯ ಮೂಲಕ ಮಾಹಿತಿ ನೀಡಿದರು.

೧. ಬಾಯಡೆನ ಇವರು, ರಶಿಯಾವು ಯುಕ್ರೇನ್ ಮೇಲೆ ದಾಳಿ ನಡೆಸಿದರೆ, ಅದರ ಮೇಲೆ ಆರ್ಥಿಕ ನಿರ್ಬಂಧ ಹೇರಲಾಗುವುದು. ಮಿತ್ರ ದೇಶದ ಸಲಹೆ ಪಡೆಯದೆ ಯುರೋಪಿನ ಮೇಲೆ ಪರಿಣಾಮ ಬೀರುವ ಯಾವುದೇ ನಿಲುವಿನ ಬಗ್ಗೆ ಚರ್ಚೆ ನಡೆಸಲ್ಲ. ಎಂದು ಬಾಯಡೆನ ಇವರು ಹೇಳಿದರು.

೨. ಒಂದು ಕಡೆ ಯುಕ್ರೇನ್ ಮತ್ತು ಅಮೇರಿಕಾ ಇವರಲ್ಲಿ ಚರ್ಚೆ ನಡೆಯುತ್ತಿದ್ದು ಇನ್ನೊಂದೆಡೆ ‘ಈ ಸಂಕಷ್ಟದಿಂದ ಅಮೇರಿಕಾ ಜೊತೆಗಿನ ಸಂಬಂಧ ಸಂಪೂರ್ಣವಾಗಿ ಹದಗೆಡಬಹುದು’, ಎಂದು ರಷ್ಯಾ ಬೆದರಿಕೆಯೊಡ್ಡಿದೆ.