೧. ಸಾಧಕಿಗೆ ಗಂಟಲಿನ ತೊಂದರೆ ಪ್ರಾರಂಭವಾಗುವುದು ಮತ್ತು ಆ ಅವಧಿಯಲ್ಲಿ ಪೂ. ಭಾರ್ಗವರಾಮ ಇವರು ರಾಮನಾಥಿ ಆಶ್ರಮದಲ್ಲಿ ಕೆಲವು ದಿನ ವಾಸ್ತವ್ಯಕ್ಕೆ ಬರುವುದು
‘ಡಿಸೆಂಬರ್ ೨೦೧೯ ರಲ್ಲಿ ಪೂ. ಭಾರ್ಗವರಾಮ ಪ್ರಭು ಇವರು ರಾಮನಾಥಿ ಆಶ್ರಮದಲ್ಲಿ ಕೆಲವು ದಿನಗಳ ಕಾಲ ಕುಟುಂಬದವರೊಂದಿಗೆ ವಾಸ್ತವ್ಯದಲ್ಲಿದ್ದರು. ಅದೇ ಸಮಯದಲ್ಲಿ ನನಗೆ ಗಂಟಲು ನೋವು ಪ್ರಾರಂಭವಾಗಿತ್ತು. ನನಗೆ ಸ್ವಲ್ಪವೂ ಮಾತನಾಡಲು ಆಗುತ್ತಿರಲಿಲ್ಲ. ಸನ್ನೆಯಿಂದ ಅಥವಾ ಸ್ಪರ್ಶ ಮಾಡಿಯೇ ನನಗೆ ಹೇಳಬೇಕಾಗುತ್ತಿತ್ತು. ಗಂಟಲು ತಜ್ಞರು ‘ಮಾತನಾಡಬೇಡಿ’, ಎಂದು ಸಲಹೆಯನ್ನೂ ನೀಡಿದ್ದರು. ಆದುದರಿಂದ ನಾನು ಅವಶ್ಯಕವಿದ್ದಷ್ಟೇ ಹಗುರವಾಗಿ ಮಾತನಾಡುತ್ತಿದ್ದೆನು.
೨. ಪೂ. ಭಾರ್ಗವರಾಮ ಇವರ ತಾಯಿಯು ‘ಸಾಧಕಿಯ ಗಂಟಲು ನೋಯುತ್ತಿದೆ’, ಎಂದು ಹೇಳಿದ ತಕ್ಷಣ ಅವರು ಸಾಧಕಿಯ ಆರೋಗ್ಯ ವಿಚಾರಿಸುವುದು ಮತ್ತು ಸಾಧಕಿಯ ಗಂಟಲಿನ ಮೇಲೆ ಕೈ ಆಡಿಸುವುದು
‘ನನ್ನ ಗಂಟಲು ನೋಯುತ್ತಿದೆ’, ಎಂದು ಪೂ. ಭಾರ್ಗವರಾಮ ಇವರ ಗಮನಕ್ಕೆ ಬಂದಿತು. ಅವರು ತಮ್ಮ ತಾಯಿಯನ್ನು, “ಇವರು ಏಕೆ ಹೀಗೆ ಮಾತನಾಡುತ್ತಾರೆ ?” ಎಂದು ಕೇಳಿದರು. ಆಗ ಅವರ ತಾಯಿಯು ‘ಅವರ ಗಂಟಲು ನೋಯುತ್ತಿದೆ. ಅವರಿಗೆ ಮಾತನಾಡಲು ಆಗುತ್ತಿಲ್ಲ’, ಎಂದು ಹೇಳಿದರು. ಅವರು ಪ್ರತಿದಿನ ಭೇಟಿಯಾಗುವಾಗ ಸನ್ನೆ ಮಾಡಿ ನನಗೆ “ಈಗ ಸರಿ ಎನಿಸುತ್ತದೆಯೇ ?” ಎಂದು ಕೇಳುತ್ತಿದ್ದರು. ನಾನು ನಮಸ್ಕಾರ ಮಾಡಿದರೆ ಅವರೂ ತಕ್ಷಣ ನನಗೆ ನಮಸ್ಕಾರವನ್ನು ಮಾಡುತ್ತಿದ್ದರು. ಒಂದು ದಿನ ಅವರು ನನಗೆ ಅವರ ಕೊಂಕಣಿ ಭಾಷೆಯಲ್ಲಿ, “ನಾಳೆ ಮಾತನಾಡಲು ಆಗಲಿದೆ ನಿಮಗೆ !” ಎಂದು ಹೇಳಿದರು. ‘ಸಂತರ ಈ ಮಾತುಗಳೆಂದರೆ ನನಗಾಗಿ ಸಂಕಲ್ಪವೇ ಆಗಿದೆ,’ ಎಂದೆನಿಸಿತು. ಒಂದು ದಿನ ಅವರ ತಾಯಿಯು ಹೇಳಿದ ಕೂಡಲೇ ಅವರು ನನ್ನ ಗಂಟಲಿನ ಮೇಲೆ ಕೈ ಆಡಿಸಿದರು.
೩. ‘ಬಾಲಕ ಸಂತರೂ ಸಹ ನಿರಪೇಕ್ಷವಾಗಿ ಪ್ರೀತಿಸುತ್ತಾರೆ’, ಎಂಬುದು ಗಮನಕ್ಕೆ ಬರುವುದು
ಈ ಎಲ್ಲ ಘಟನೆಗಳ ಸಮಯದಲ್ಲಿ ನನಗೆ ಹೃದಯವು ತುಂಬಿಬಂದಿತು. ನಮ್ಮ ದೃಷ್ಟಿಯಲ್ಲಿ ಆ ಜೀವವು ಚಿಕ್ಕದಾಗಿ ಕಾಣಿಸುತ್ತದೆ; ಆದರೆ ಅವರಿಗೆ ಎಲ್ಲವೂ ತಿಳಿಯುತ್ತದೆ. ಇದರಿಂದ ನನಗೆ ಅವರಲ್ಲಿನ ‘ಪ್ರೇಮಭಾವ, ನಿರೀಕ್ಷಣೆ, ಇತರರ ವಿಚಾರ, ಹಿರಿಯರಿಗೆ ಗೌರವ ಕೊಡುವುದು ಮತ್ತು ಇತರರಿಗೆ ಆಧಾರ ಕೊಡುವುದು’, ಈ ಗುಣಗಳು ಕಂಡುಬಂದವು. ‘ಬಾಲಕ ಸಂತರ ಪ್ರೀತಿಯು ಸಹ ನಿರಪೇಕ್ಷವಾಗಿರುತ್ತದೆ’, ಎಂದು ನನ್ನ ಗಮನಕ್ಕೆ ಬಂದಿತು. ಪೂ. ಭಾರ್ಗವರಾಮ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರಿಗೆ ವಂದನೆಗಳನ್ನು ಸಲ್ಲಿಸಿ ಈ ೪ ಶಬ್ದಗಳನ್ನು ಅವರ ಚರಣಗಳಲ್ಲಿ ಅರ್ಪಿಸುತ್ತೇನೆ.’
– ಶ್ರೀಮತಿ ರಜನಿ ನಗರಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೧.೨೦೨೦)
ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |