ಚೀನಾದಲ್ಲಿ ಕೊರೊನಾದ ಸೋಂಕು ಹೆಚ್ಚಾದುದಕ್ಕೆ 26 ಅಧಿಕಾರಿಗಳು ತಪ್ಪಿತಸ್ಥರು

ಪಾಕಿಸ್ತಾನದಿಂದ ಬಂದಿದ್ದ ಜನರನ್ನು ಸರಿಯಾಗಿ ಪರೀಕ್ಷಿಸದ ದೋಷಾರೋಪಣೆ

ಬೀಜಿಂಗ(ಚೀನಾ) – ಚೀನಾದಲ್ಲಿ ಕೊರೊನಾದ ಸೋಂಕು ಹೊಸದಾಗಿ ಹೆಚ್ಚಾಗಿದ್ದರಿಂದ ಚೀನಾದ ಒಂದು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಶಿಯಾನ ನಗರದಲ್ಲಿ ಸಂಚಾರ ನಿರ್ಬಂದ ಜಾರಿ ಮಾಡಲಾಗಿದೆ. ಹೆಚ್ಚುತ್ತಿರುವ ಸೋಂಕಿಗೆ ಚೀನಾವು ತನ್ನ 26 ಅಧಿಕಾರಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ, ಅವರಿಗೆ ಶೀಘ್ರದಲ್ಲಿ ಶಿಕ್ಷೆ ನೀಡಲಾಗುವುದು. ಚೀನಾದಲ್ಲಿನ ಕೊರೊನಾ ಸೋಂಕು ಹೆಚ್ಚಾಗಲು ಪಾಕಿಸ್ತಾನ ಕಾರಣವಾಗಿರುವುದು ಸ್ಪಷ್ಟವಾಗಿದೆ. ಪಾಕಿಸ್ತಾನದಿಂದ ಬಂದಿರುವ ಜನರನ್ನು ಸರಿಯಾಗಿ ಪರೀಕ್ಷಿಸದೆ ಇದ್ದುದರಿಂದ ಅವರ ಮೂಲಕ ಸೋಂಕು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಚೀನಾ ನೀಡಿರುವ ಮಾಹಿತಿಗನುಸಾರ ಸರಕಾರಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸುವುದು ಅಪೇಕ್ಷಿತವಾಗಿತ್ತು; ಆದರೆ ಅವರು ಹಾಗೆ ಮಾಡಲಿಲ್ಲ. ಈಗ ಇಂತಹ ಕೆಲವು ಅಧಿಕಾರಿಗಳಿಂದ ಶಿಯಾನ ನಗರದಲ್ಲಿ ಸಂಚಾರ ನಿರ್ಬಂದ ಜಾರಿ ಮಾಡಬೇಕಾಯಿತು. ಶಿಯಾನ್‍ನಿಂದ ಹೊರ ಹೋಗುವ ಮತ್ತೆ ಒಳಬರುವ ವಿಮಾನ ಸೇವೆ ಮತ್ತು ರೈಲು ಸೇವೆಯನ್ನು ನಿಲ್ಲಿಸಲಾಗಿದೆ.