ಶ್ರೀಲಂಕಾದ ನೌಕಾದಳದಿಂದ ಕಳೆದ ಎರಡು ದಿನಗಳಲ್ಲಿ 55 ಭಾರತೀಯ ಮೀನುಗಾರರ ಬಂಧನ ಮತ್ತು 8 ದೋಣಿಗಳು ವಶಕ್ಕೆ

ಶ್ರೀಲಂಕಾದ ಸಮುದ್ರ ಗಡಿ ಉಲ್ಲಂಘಿಸಿದ ಆರೋಪ

ಭಾರತ ಸರಕಾರವು ಭಾರತೀಯ ಮೀನುಗಾರರಿಗೆ ಭಾರತದ ಸಮುದ್ರಗಡಿ ಎಲ್ಲಿವರೆಗೆ ಇದೆ, ಇದರ ಮಾಹಿತಿ ತಿಳಿಯಲು ಅಲ್ಲಿ ಫಲಕ (ಗುರುತು) ಹಾಕುವುದು ಅವಶ್ಯಕವಾಗಿದೆ. ಹಾಗೆ ಮಾಡದೇ ಇದ್ದರಿಂದ ಮೀನುಗಾರರು ಅನವಶ್ಯಕ ತೊಂದರೆ ಸಹಿಸಬೇಕಾಗುತ್ತಿದೆ ! -ಸಂಪಾದಕರು 

ಕೊಲಂಬೊ (ಶ್ರೀಲಂಕಾ ) – ಶ್ರೀಲಂಕಾದ ನೌಕಾದಳವು 12 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಹಾಗೂ ಅವರ 2 ನೌಕೆಗಳನ್ನು ವಶ ಪಡಿಸಿಕೊಂಡಿವೆ. `ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಅವರು ಮೀನುಗಳನ್ನು ಹಿಡಿಯುತ್ತಿದ್ದರು’, ಎಂದು ನೌಕಾದಳವು ಆರೋಪಿಸಿದೆ. ಕಳೆದ ಎರಡು ದಿನಗಳಲ್ಲಿ ಶ್ರೀಲಂಕಾದ ನೌಕಾದಳವು ಒಟ್ಟು 55 ಭಾರತೀಯ ಮೀನುಗಾರನನ್ನು ಬಂಧಿಸಿದೆ ಮತ್ತು ಒಟ್ಟು 8 ನೌಕೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.