ಮತಾಂತರ ವಿರೋಧಿ ಕಾನೂನು ಜಾರಿಯಾಗಲು ವಿಹಿಂಪವು ಡಿಸೆಂಬರ 21 ರಿಂದ ದೇಶಾದ್ಯಂತ ಆಂದೋಲನ ಮಾಡಲಿದೆ

ಈ ರೀತಿಯ ಬೇಡಿಕೆ ಮತ್ತು ಆಂದೋಲನ ಮಾಡುವಂತಾಗಬಾರದು ! ಸರಕಾರವು ತಾನಾಗಿ ಈ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು 

ವಿಹಿಂಪನ ಆಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಆಲೋಕ ಕುಮಾರ (ಮಧ್ಯದಲ್ಲಿ)

ನವ ದೆಹಲಿ – ವಿಶ್ವ ಹಿಂದೂ ಪರಿಷತ್ತು ಡಿಸೆಂಬರ 21 ರಿಂದ 31 ಈ ಕಾಲಾವಧಿಯಲ್ಲಿ ದೇಶದಾದ್ಯಂತ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಲು ಆಂದೋಲನವನ್ನು ಮಾಡಲಿದೆ.

ವಿಹಿಂಪನ ಆಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಆಲೋಕ ಕುಮಾರ ಇವರು ಮಾತನಾಡಿ, ಕಳೆದ ವರ್ಷದಲ್ಲಿ ನಾವು ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ಶಾಸಕರನ್ನು ಭೇಟಿಯಾದೆವು. ಇಲ್ಲಿಯವರೆಗೆ 329 ಶಾಸಕರನ್ನು ಭೇಟಿಯಾಗಿದ್ದು ಅದರಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ಶಾಸಕರೂ ಇದ್ದಾರೆ. ಒಂದುವೇಳೆ ಆದಿವಾಸಿಗಳು ಮತಾಂತರವಾಗುತ್ತಿದ್ದರೆ, ಅವರಿಗೆ ಮೀಸಲಾತಿಯ ಸೌಲಭ್ಯ ಸಿಗಬಾರದು. ಅದಕ್ಕಾಗಿ ಸರಕಾರವು ಕಾನೂನನ್ನು ನಿರ್ಮಿಸಬೇಕು. ಆಮಿಷ, ಭಯ ಮತ್ತು ವಂಚನೆಯ ಮೂಲಕ ಮತಾಂತರ ಮಾಡುವವರಿಗೆ ಈ ಕಾನೂನಿನ ಮೂಲಕ ಶಿಕ್ಷೆಯಾಗಬೇಕು ಎಂದು ಹೇಳಿದರು.