ಪಾಕಿಸ್ತಾನ ದಿವಾಳಿಯಾದ ದೇಶವಾಗಿದೆ !

ಪಾಕಿಸ್ತಾನದ ಕಂದಾಯ ಮಂಡಳಿಯ ಮಾಜಿ ಅಧ್ಯಕ್ಷ ಶಬ್ಬರ ಜ್ಯೆದಿ ಇವರಿಂದ ಕಪಾಳಮೋಕ್ಷ !

ಕರಾಚಿ (ಪಾಕಿಸ್ತಾನ) – ಪಾಕಿನ ಕಂದಾಯ ಮಂಡಳಿಯ ಮಾಜಿ ಅಧ್ಯಕ್ಷ ಶಬ್ಬರ ಜ್ಯೆದಿ ಇವರು ‘ಪಾಕಿಸ್ತಾನ ದೀವಳಿಯಾದ ದೇಶವಾಗಿದೆ. ಯಾವುದೇ ಭ್ರಮೆಯಲ್ಲಿರುವ ಬದಲು ವಸ್ತುಸ್ಥಿತಿಯನ್ನು ಗುರುತಿಸಬೇಕು’, ಎಂದು ಹೇಳಿದ್ದಾರೆ. ಜ್ಯೆದಿ ಇವರು ಚೀನಾ – ಪಾಕಿಸ್ತಾನ ಆರ್ಥಿಕ ಹೆದ್ದಾರಿ ಯೋಜನೆಯ ಮೇಲೆಯೂ ಟೀಕಿಸಿದ್ದಾರೆ. ಅವರು ಒಂದು ವಿಶ್ವವಿದ್ಯಾಲಯದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು.

೧. ಜ್ಯೆದಿ ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಪ್ರಸ್ತುತ ಚೀನಾ ಪಾಕಿಸ್ತಾನ ಆರ್ಥಿಕ ಹೆದ್ದಾರಿ ಎಂದರೆ ಏನು ಎಂದು ಸಂಪೂರ್ಣವಾಗಿ ತಿಳಿಯಲು ಸಾಧ್ಯವಾಗಿಲ್ಲ. ಸರಕಾರದಲ್ಲಿನ ಪ್ರತಿಯೊಬ್ಬರು, ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ.

೨. ಪಾಕಿಸ್ತಾನವು ಚೀನಾ, ಸಂಯುಕ್ತ ಅರಬ್ ಅಮೀರಾತ, ಸೌದಿ ಅರೇಬಿಯಾ, ವಿಶ್ವಬ್ಯಾಂಕ್ ಮತ್ತು ಆಂತರರಾಷ್ಟ್ರೀಯ ಹಣಕಾಸು ನಿಧಿ ಇದರಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದಿದೆ. ಆದ್ದರಿಂದ ಒಬ್ಬ ಪಾಕಿಸ್ತಾನಿ ನಾಗರೀಕನ ಮೇಲೆ ೭೫ ಸಾವಿರ ರೂಪಾಯಿ ಸಾಲವಿದೆ ಎಂದು ಹೇಳಿದರು.