ಸೂರ್ಯನ ಪ್ರಭಾವಲಯವನ್ನು ಸ್ಪರ್ಶಿಸಿದ ‘ನಾಸಾ’ ಬಾಹ್ಯಾಕಾಶ ನೌಕೆ !

ವಾಷಿಂಗ್ಟನ ಡಿ.ಸಿ. (ಅಮೇರಿಕಾ) – ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ತಯಾರಿಸಿದ ಮಾನವರಹಿತ ಬಾಹ್ಯಾಕಾಶ ನೌಕೆಯು ಮೊದಲಬಾರಿ ಸೂರ್ಯನನ್ನು ‘ಸ್ಪರ್ಶ’ ಮಾಡಿರುವ ಮಾಹಿತಿ ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಿದೆ. ಈ ನೌಕೆಯನ್ನು ೨೦೧೮ ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.

ಇತಿಹಾಸದಲ್ಲಿ ಇದೇ ಮೊದಲಬಾರಿ ಬಾಹ್ಯಾಯಾಶ ನೌಕೆಯು ಸೂರ್ಯನ ಪ್ರಭಾಮಂಡಲ (‘ಕೊರೋನಾ’ದಲ್ಲಿ) ಪ್ರವೇಶ ಮಾಡಿದೆ. ಪ್ರವೇಶ ಮಾಡಿರುವ ಆ ಕೇಂದ್ರವು ಸೂರ್ಯನ ತಾಪಮಾನದ್ದಾಗಿದ್ದು ಅಲ್ಲಿ ಸೂರ್ಯನ ಆಯಸ್ಕಾಂತೀಯ ಮತ್ತು ಗುರುತ್ವಾಕರ್ಷಣ ತೀವ್ರವಾಗಿದೆ. ಸೂರ್ಯ ಯಾವುದರಿಂದ ಆಗಿದೆ ಎಂದು ತಿಳಿದುಕೊಳ್ಳುವುದು ವೈಜ್ಞಾನಿಕರಿಗೆ ತಮ್ಮ ಹತ್ತಿರ ಇರುವ ನಕ್ಷತ್ರಗಳ ಅತ್ಯಂತ ಮಹತ್ವದ ಮಾಹಿತಿ ಹಾಗೆಯೇ ಸೌರ ಮಂಡಲದಲ್ಲಿ ಅದರ ಪ್ರಭಾವದ ಮಾಹಿತಿ ಲಭ್ಯವಾಗಲು ಸಹಾಯ ಆಗುವುದು. ‘ಪಾರ್ಕರ್ ಸೋಲಾರ್ ಪ್ರೋಬ’ ಎಂದು ಹೆಸರಿರುವ ಈ ನೌಕೆಯು ಮೊದಲೇ ಸೂರ್ಯನ ಹತ್ತಿರ ಹತ್ತು ಸಲ ಹೋಗಿದೆ ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಮಾಹಿತಿ ಸಂಗ್ರಹಿಸಲು ಪಾರ್ಕರ್ ಇನ್ನೂ ಅದರ ಹತ್ತಿರ ಹೋಗಲಿದೆ.