ಕಿನ್ನಿಗೋಳಿಯ ಸಂತ ಪ.ಪೂ. ದೇವಬಾಬಾ ಇವರು ಶಾರೀರಿಕ ತೊಂದರೆಗಳಿಗಾಗಿ ಹೇಳಿದ ಉಪಾಯಗಳು

ಡಿಸೆಂಬರ್ ೨೨ ರಂದು ಕಿನ್ನಿಗೋಳಿಯ ಪ.ಪೂ. ದೇವಬಾಬಾ ಇವರ ಹುಟ್ಟುಹಬ್ಬವಿದೆ. ಆ ನಿಮಿತ್ತ ಅವರು ಶಾರೀರಿಕ ತೊಂದರೆಗಳಿಗಾಗಿ ಹೇಳಿದ ಉಪಾಯವನ್ನು ಇಲ್ಲಿ ನೀಡುತ್ತಿದ್ದೇವೆ.

ಪ.ಪೂ. ದೇವಬಾಬಾ ಇವರ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಪ.ಪೂ. ದೇವಬಾಬಾ

೧. ಹೊಟ್ಟೆನೋವು ನಿಲ್ಲಿಸಲು ಬಾಯಿಯಲ್ಲಿನ ಲಾಲಾರಸ (ಜೊಲ್ಲು)ವು ಸರ್ವೋತ್ತಮ ಔಷಧಿಯಾಗಿದೆ !

‘ನಮ್ಮ ಬಾಯಿಯಲ್ಲಿನ ಲಾಲಾರಸವು (ಜೊಲ್ಲು) ಹೊಟ್ಟೆನೋವಿಗಾಗಿ ಸರ್ವೋತ್ತಮ ಔಷಧಿಯಾಗಿದೆ. ಹೊಟ್ಟೆ ನೋಯುತ್ತಿದ್ದರೆ ನೆಲ್ಲಿಕಾಯಿಯ ತುಂಡನ್ನು ಬಾಯಿಯಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಕಚ್ಚಿ ತಿನ್ನಬಾರದು. ಬಾಯಿಯಲ್ಲಿ ನೆಲ್ಲಿಕಾಯಿಯನ್ನು ಇಟ್ಟುಕೊಂಡಾಗ ಬರುವ ಲಾಲಾರಸ (ಜೊಲ್ಲು)ವನ್ನು ನುಂಗಬೇಕು. ಅದರಿಂದ ಹೊಟ್ಟೆ ನೋವು ನಿಲ್ಲುತ್ತದೆ. ಒಂದು ವೇಳೆ ನೆಲ್ಲಿಕಾಯಿ ಸಿಗದಿದ್ದರೆ, ಯಾವುದೇ ಹಣ್ಣಿನ ತುಂಡು ಬಾಯಿಯಲ್ಲಿ ಇಟ್ಟುಕೊಳ್ಳಬಹುದು.

೨. ಸಂದುನೋವಿಗೆ ಕಪಿಲಾ ಆಕಳ ಸೆಗಣಿಯನ್ನು ಹಚ್ಚಿಕೊಳ್ಳುವುದು

ಶರೀರದ ನೋವಾದ ಭಾಗಕ್ಕೆ ಕಪಿಲಾ ಆಕಳ ಸೆಗಣಿಯನ್ನು ಹಚ್ಚಿಕೊಳ್ಳಬೇಕು. ಲೇಪನವನ್ನು ಹಚ್ಚುವಂತೆ, ಸೆಗಣಿಯ ದಪ್ಪನೆಯ ಪದರನ್ನು ಹಚ್ಚಿಕೊಳ್ಳಬೇಕು. ನಂತರ ಆ ಸೆಗಣಿಯು ಬೀಳದಂತೆ ಅದರ ಮೇಲೆ ಬಟ್ಟೆಯನ್ನು ಕಟ್ಟಬೇಕು ಮತ್ತು ಅದನ್ನು ೬ ಗಂಟೆ ಇಟ್ಟುಕೊಳ್ಳಬೇಕು. ಅದನ್ನು ಹಗಲಿನಲ್ಲಿಯೂ ಹಚ್ಚಿಕೊಳ್ಳಬಹುದು. ಹೀಗೆ ೭ ದಿನ ನಿಯಮಿತವಾಗಿ ಮಾಡಬೇಕು. ನಂತರ ೧ ವಾರ ಹಚ್ಚಿಕೊಳ್ಳಬಾರದು. ಅನಂತರ ಪುನಃ ೭ ದಿನ ಹಚ್ಚಿಕೊಳ್ಳಬೇಕು. ಈ ಉಪಾಯವನ್ನು ನಾವು ಮಂಡಿ ನೋವು, ತಲೆನೋವು ಇತ್ಯಾದಿಗಳಿಗೂ ಮಾಡಬಹುದು. ಕಪಿಲಾ ಆಕಳ ಸೆಗಣಿಯು ಸಿಗದಿದ್ದರೆ ಇತರ ದೇಶಿ(ವಿದೇಶಿ ಅಲ್ಲ) ಆಕಳ ಸೆಗಣಿಯನ್ನೂ ಹಚ್ಚಿಕೊಳ್ಳಬಹುದು. ಅದರಿಂದ ಕಪಿಲಾ ಆಕಳ ಸೆಗಣಿಯಷ್ಟು ಲಾಭವಾಗ ದಿದ್ದರೂ, ಸ್ವಲ್ಪ ಪ್ರಮಾಣದಲ್ಲಿ ಲಾಭವಾಗುತ್ತದೆ.’ – ಪ.ಪೂ. ದೇವಬಾಬಾ, ಕಿನ್ನಿಗೋಳಿ, ಕರ್ನಾಟಕ. (ಜುಲೈ ೨೦೧೯)

೩. ಮಂಡಿ ನೋವಿಗಾಗಿ ಉಪಾಯ ಮಾಡಿದಾಗ ಬಂದ ಅನುಭೂತಿ

‘ಪ.ಪೂ. ದೇವಬಾಬಾ ಇವರು ಹೇಳಿದಂತೆ ನಾನು ಸತತ ೧೨ ದಿನಗಳ ಕಾಲ ನನ್ನ ಮಂಡಿ ನೋವಾದ ಭಾಗಕ್ಕೆ ಸೆಗಣಿಯನ್ನು ಹಚ್ಚಿದೆನು. ಇದರಿಂದ ನನ್ನ ಮೊಣಕಾಲಿಗೆ ಬಂದ ಬಾವು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಯಿತು.’ – ಕು. ರೂಪಾಲಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ.