‘ಜಿಹಾದಿ ಭಯೊತ್ಪಾದಕರ ಪ್ರವೇಶದ್ವಾರಗಳಲ್ಲಿ ಒಂದು’ ಮತ್ತು ‘ಸಮಾಜಕ್ಕಾಗಿ ಅಪಾಯಕಾರಿಯಾಗಿದೆ’ ಎಂದು ಹೇಳಿ ನಿರ್ಬಂಧ ಹೇರಲಾಗಿದೆ !
ಮುಸಲ್ಮಾನರಿಗೆ ಅತ್ಯಂತ ಮಹತ್ವದ ದೇಶವಾಗಿರುವ ಸೌದಿ ಅರೇಬಿಯಾಗೆ ’ ತಬಲಿಗೀ ಜಮಾತ’ ಸಂಘಟನೆಯು ಭಯೋತ್ಪಾದಕರ ಪ್ರವೇಶ ದ್ವಾರವಾಗಿದೆ’ ಎಂದು ಅನಿಸುತ್ತದೆ ಮತ್ತು ಆ ದೇಶವು ಅದರ ಮೇಲೆ ನಿರ್ಬಂಧ ಹೇರುತ್ತದೆ, ಹೀಗಿರುವಾಗ ಭಾರತವೇಕೆ ನಿರ್ಬಂಧ ಹೇರಲು ಹಿಂಜರಿಯುತ್ತಿದೆ ? ಸೌದಿ ಅರೇಬಿಯಾದ ಮಾದರಿಯಂತೆ ಭಾರತವು ಇಂತಹ ಕಾರ್ಯಾಚರಣೆಯನ್ನು ಯಾವಾಗ ಮಾಡಲಿದೆ ? ಈ ಸಂಘಟನೆಯು ಭಾರತದಲ್ಲಿ ಕಾರ್ಯಾಚರಣೆಯನ್ನು ಮಾಡಿದ ಮೇಲೆ ಭಾರತವು ಜಾಗೃತಗೊಳ್ಳುವುದೇ ?
ರಿಯಾಧ (ಸೌದಿ ಅರೇಬಿಯಾ) – ‘ತಬಲಿಗೀ ಜಮಾತ’ ಎಂಬ ಸುನ್ನಿ ಮುಸಲ್ಮಾನರ ಧಾರ್ಮಿಕ ಸಂಘಟನೆಯ ಮೇಲೆ ನಿರ್ಬಂಧ ಹೇರುವ ಬಗ್ಗೆ ಸೌದಿ ಅರೇಬಿಯಾದ ಇಸ್ಲಾಮಿ ವ್ಯವಹಾರಗಳ ಮಂತ್ರಿಗಳಾದ ಡಾ. ಅಬ್ದುಲ ಲತೀಫ ಅಲ್-ಅಲಶೇಕರವರು ಸಾಮಾಜಿಕ ಮಾಧ್ಯಮಗಳ ಮೂಲಕ ಘೋಷಿಸಿದ್ದಾರೆ. ’ಜಿಹಾದಿ ಭಯೋತ್ಪಾದಕರ ಪ್ರವೇಶ ದ್ವಾರಗಳಲ್ಲಿ ಒಂದು’ ಮತ್ತು ’ಸಮಾಜಕ್ಕಾಗಿ ಅಪಾಯಕಾರಿ’ ಎಂಬ ಹೆಸರನ್ನು ಈ ಸಂಘಟನೆಗೆ ಇಡಲಾಗಿದೆ. ಇಸ್ಲಾಮಿ ವ್ಯವಹಾರ ಮಂತ್ರಾಲಯವು ಮಸೀದಿಗಳಿಗೆ ಈ ವಿಷಯದಲ್ಲಿ ಜನರವರೆಗೆ ಮಾಹಿತಿಯನ್ನು ತಲುಪಿಸಲು ಸೂಚಿಸಿದೆ.
Saudi Arabia has banned the Tablighi Jamaat, terming it a “danger to society” and “one of the gates of terrorism”.https://t.co/zbISsWkq7F
— Hindustan Times (@htTweets) December 12, 2021
ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರ ಮಂತ್ರಾಲಯವು ಮಸೀದಿ ಮತ್ತು ಮೌಲ್ವಿ (ಇಸ್ಲಾಮಿನ ಧಾರ್ಮಿಕ ನೇತಾರರು)ಗಳಿಗೆ ನೀಡಿರುವ ಸೂಚನೆಯ ಅನುಸಾರ, ಶುಕ್ರವಾರದ ನಮಾಜು ಪಠಣದ ನಂತರ ಮಾರ್ಗದರ್ಶನ ಮಾಡುವಾಗ ಮುಂದಿನ ವಿಷಯಗಳನ್ನು ಸೇರಿಸಲು ಹೇಳಿದೆ. ೧. ’ತಬಲಿಗೀ ಜಮಾತ’ ಜನರ ತಲೆ ಕೆಡಿಸಿ ಅವರನ್ನು, ಮುಖ್ಯವಾಗಿ ಯುವಕರನ್ನು ಭಯೋತ್ಪಾದನೆಯ ಜಾಲದಲ್ಲಿ ಸೆಳೆಯುತ್ತದೆ. ೨. ಈ ಸಂಘಟನೆಯ ಎಲ್ಲಕ್ಕಿಂತ ಮಹತ್ವದ ತಪ್ಪುಗಳನ್ನು ಉಲ್ಲೇಖಿಸಬೇಕು. ೩. ’ಈ ಸಂಘಟನೆಯು ಜನತೆಗಾಗಿ ಅಪಾಯಕಾರಿಯಾಗಿದೆ’ ಎಂಬುದನ್ನು ಜನರವರೆಗೆ ತಲುಪಿಸಬೇಕು. ೪. ಸೌದಿ ಅರೇಬಿಯಾದಲ್ಲಿ ’ತಬಲಿಗೀ’ಯೊಂದಿಗೆ ಇತರ ಅಪಾಯಕಾರಿ ಗುಂಪುಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿದೆ’ ಎಂಬುದನ್ನೂ ಜನತೆಗೆ ಹೇಳಬೇಕು. |
ಭಾರತದಲ್ಲಿ ಕೊರೋನಾದ ಮೊದಲ ಅಲೆಯ ಪ್ರಸಾರದ ಹಿಂದೆ ’ತಬಲಿಗೀ ಜಮಾತ’ ಇತ್ತು ಎಂದು ಆರೋಪಿಸಲಾಗಿತ್ತು !
೨೦೨೦ರಲ್ಲಿ ಭಾರತದಲ್ಲಿ ಕೊರೋನಾದ ಮೊದಲನೆಯ ಅಲೆಗೆ ’ತಬಲಿಗೀ ಜಮಾತ’ನ ಸದಸ್ಯರು ಕಾರಣವಾಗಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ದೆಹಲಿಯಲ್ಲಿನ ನಿಜಮುದ್ದಿನನಲ್ಲಿರುವ ಈ ಸಂಘಟನೆಯ ಪ್ರಮುಖ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದ ನಂತರ ವಿವಿಧ ರಾಜ್ಯಗಳಲ್ಲಿ ಹರಡಿದ ಜಮಾತಿನ ಸದಸ್ಯರಿಂದ ಕೊರೋನಾ ಎಲ್ಲ ಕಡೆ ತಕ್ಷಣ ಹಬ್ಬಿತು ಎಂದು ಹೇಳಲಾಗಿತ್ತು. ಈ ಪ್ರಕರಣದಲ್ಲಿ ಅನೇಕ ಸದಸ್ಯರನ್ನು ಪ್ರತ್ಯೇಕವಾಗಿ ಇಡಲಾಗಿತ್ತು, ಈ ಸಮಯದಲ್ಲಿ ಅವರು ಪರಿಚಾರಿಕೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದರೊಂದಿಗೆ ಡಾಕ್ಟರರಿಗೆ ಹೊಡೆದಿರುವ ಘಟನೆಗಳು ಬಹಿರಂಗವಾಗಿದ್ದವು. ಹಾಗೆಯೇ ಕೆಲವು ಕಡೆಗಳಲ್ಲಿ ಮಸೀದಿಗಳಲ್ಲಿ ಅಡಗಿ ಕುಳಿತಿದ್ದ ಸದಸ್ಯರನ್ನು ಹುಡುಕಲು ಹೋಗಿದ್ದ ಪೊಲೀಸರ ಮೇಲೆಯೂ ಆಕ್ರಮಣ ಮಾಡಲಾಗಿತ್ತು. ಭಾರತದಲ್ಲಿನ ಈ ಸಂಘಟನೆಯ ಪ್ರಮುಖನನ್ನೂ ಇಂದಿನವರೆಗೆ ಪೊಲೀಸರು ಈ ಪ್ರಕರಣದಲ್ಲಿ ಬಂಧಿಸಿಲ್ಲ.
ತಬಲಿಗೀ ಜಮಾತ’ನ ಇತಿಹಾಸ
ದೇವಬಂದಿ ಮೌಲಾನ (ಇಸ್ಲಾಮಿ ವಿದ್ವಾಂಸ) ಮಹಮ್ಮದ ಇಲಿಯಾಸ ಕಾಂಧಲವಿಯವರು ೧೯೨೬ರಲ್ಲಿ ಸುನ್ನಿ ಮುಸಲ್ಮಾನರ ’ತಬಲಿಗೀ ಜಮಾತ’ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಈ ಸಂಘಟನೆಯು ವಿಶೇಷವಾಗಿ ಇಸ್ಲಾಮಿನ ಅನುಯಾಯಿಗಳಿಗೆ ಧಾರ್ಮಿಕ ಪ್ರವಚನಗಳನ್ನು ನೀಡುವ ಕಾರ್ಯ ಮಾಡುತ್ತಿತ್ತು. ಅರಾಜಕತೆಯಿಂದ ಕೂಡಿದ ಈ ಸಂಘಟನೆಯ ಉದ್ದೇಶವು ಕೇವಲ ’ಇಸ್ಲಾಮಿನ ೫ ಮೂಲಭೂತ ತತ್ವಗಳನ್ನು ತಿಳಿಸಿ ಹೇಳುವುದು’ ಮಾತ್ರ ಆಗಿತ್ತು. ಆದರೆ ಈಗ ಈ ಸಂಘಟನೆಯು ಜಿಹಾದಿ ಭಯೋತ್ಪಾದಕ ಕೃತ್ಯಗಳಿಗಾಗಿ ಪರಿಚಿತವಾಗಿದೆ. ಈ ಸಂಘಟನೆಯು ಇಡೀ ಜಗತ್ತಿನಲ್ಲಿ ಹರಡಿದೆ. ಸಂಘಟನೆಯಲ್ಲಿ ಜಗತ್ತಿನಾದ್ಯಂತ ೪೦ ಕೋಟಿ ಸದಸ್ಯರಿದ್ದಾರೆ.