೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ !

ಲಂಡನ್ (ಬ್ರಿಟನ್) – ಉತ್ತರಪ್ರದೇಶದ ಬಾಂದಾ ಜಿಲ್ಲೆಯ ಲೋಕಾರಿ ಗ್ರಾಮದ ಮಂದಿರದಿಂದ ೪೦ ವರ್ಷಗಳ ಹಿಂದೆ ಕಳ್ಳತನ ಮಾಡಿದ್ದ ಶ್ರೀ ಯೋಗಿನಿ ದೇವಿಯ ಪ್ರಾಚೀನ ಮೂರ್ತಿಯನ್ನು ಬ್ರಿಟನ್ ಭಾರತಕ್ಕೆ ಹಿಂತಿರುಗಿಸಲಿದೆ. ಈ ಮೂರ್ತಿ ೮ನೇ ಶತಮಾನದ್ದಾಗಿದೆಯೆಂದು ಹೇಳಲಾಗುತ್ತಿದ್ದು, ‘ಈ ಮೂರ್ತಿಯನ್ನು ಭಾರತಕ್ಕೆ ಹಿಂತಿರುಗಿಸುವ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿದೆ, ಈ ಮಾಹಿತಿಯನ್ನು ಲಂಡನ್‌ನ ಭಾರತೀಯ ಉಚ್ಚಾಯುಕ್ತರು ನೀಡಿದ್ದಾರೆ.

‘ಆರ್ಟ ರಿಕವರಿ ಇಂಟರನ್ಯಾಶನಲ್ ಈ ಸಂಸ್ಥೆಯ ಸಂಸ್ಥಾಪಕರಾದ ಮಾರಿನೆಲೊ ಇವರು ಬ್ರಿಟನ್‌ನ ಒಬ್ಬ ಮಹಿಳೆ ತನ್ನ ಪತಿಯ ಮೃತ್ಯುವಿನ ಬಳಿಕ ಮನೆಯ ವಸ್ತುಗಳನ್ನು ಮಾರಾಟ ಮಾಡುತ್ತಿರುವಾಗ ಈ ಮೂರ್ತಿ ದೊರಕಿತ್ತು. ತದನಂತರ ಮಾರಿನೆಲೊ ಇವರು ಭಾರತದಿಂದ ಕಳ್ಳತನ ಮಾಡಿದ್ದ ಸಾಂಸ್ಕೃತಿಕ ವಸ್ತುಗಳ ಮರಳಿ ದೊರಕಿಸುವ ಕಾರ್ಯದಲ್ಲಿರುವ ‘ಇಂಡಿಯಾ ಪ್ರೈಡ್ ಪ್ರೊಜೆಕ್ಟನ ಸಹ ಸಂಸ್ಥಾಪಕರಾದ ವಿಜಯ ಕುಮಾರ ಇವರನ್ನು ಸಂಪರ್ಕಿಸಿದರು. ಅವರು ಈ ಮೂರ್ತಿಯನ್ನು ಗುರುತಿಸಿದ ಬಳಿಕ ಈ ಮೂರ್ತಿಯನ್ನು ಮರಳಿ ಪಡೆದುಕೊಳ್ಳಲು ಪ್ರಯತ್ನಿಸಲಾಗಿತ್ತು.