ಚೀನಾದ ತೀವ್ರ ವಿರೋಧಿಗಳಾದ ತೈವಾನ್‌ನ ಸೇನಾ ಮುಖ್ಯಸ್ಥರು ಮತ್ತು ಬಿಪಿನ್ ರಾವತ್ ಇವರಿಬ್ಬರಿಗಾದ ಹೆಲಿಕಾಪ್ಟರ್ ಅಪಘಾತಗಳಲ್ಲಿನ ಸಾಮ್ಯತೆಗಳು

ರಕ್ಷಣಾ ತಜ್ಞರಿಂದ ಚೀನಾದ ಪಾತ್ರದ ಬಗ್ಗೆ ಪ್ರಶ್ನೆಗಳು

(ಎಡದಿಂದ) ಜನರಲ್ ಬಿಪಿನ್ ರಾವತ್ ಮತ್ತು ತೈವಾನ್‌ನ ಸೇನಾ ಮುಖ್ಯಸ್ಥ ಶೆನ್ ಯೀ ಮಿಂಗ್

ತೈಪೆ (ತೈವಾನ್) – ಭಾರತದ ಮೊದಲ ಸಿಡಿಎಸ್ (ಚೀಫ್ ಆಫ್‌ ಡಿಫೆನ್ಸ್ ಸ್ಟಾಫ್) ಎಂದರೆ ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರು ತಮಿಳುನಾಡಿನ ಕುನ್ನೂರಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಚೀನಾದ ವಿರೋಧಕರಾಗಿದ್ದ ತೈವಾನ್‌ನ ಸೇನಾ ಮುಖ್ಯಸ್ಥ ಶೆನ್ ಯೀ ಮಿಂಗ್ ಕೂಡ ಇದೇ ರೀತಿಯ ಅಪಘಾತಕ್ಕೊಳಗಾಗಿದ್ದರು ಮತ್ತು ಅವರೂ ಅದರಲ್ಲಿ ಸಾವನ್ನಪ್ಪಿದ್ದರು. ರಕ್ಷಣಾ ತಜ್ಞರು ಹಾಗೂ ಪ್ರಸಾರ ಮಾಧ್ಯಮದವರು ಇವೆರಡನ್ನು ತುಲನೆ ಮಾಡುತ್ತಿದ್ದಾರೆ.

2020 ರ ಜನವರಿಯಲ್ಲಿ ಶೆನ್ ಯಿ ಮಿಂಗ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು. ಮಿಂಗ್ ಇವರ ’ಬ್ಲ್ಯಾಕ್ ಹಾಕ’ ಹೆಲಿಕಾಪ್ಟರ್ ತೈಪೆ ಸಮೀಪದ ಪರ್ವತ ಪ್ರದೇಶದಲ್ಲಿ ಪತನಗೊಂಡಿತ್ತು. ’ಬ್ಲ್ಯಾಕ್ ಹಾಕ’ ಅನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಯಾರಿಸಲಾದ ಅತ್ಯಂತ ಆಧುನಿಕ ಹಾಗೂ ಸುರಕ್ಷಿತ ಹೆಲಿಕಾಪ್ಟರ್‌ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.
ಭಾರತದಲ್ಲಿನ ಸಂರಕ್ಷಣಾ ತಜ್ಞ ಬ್ರಹ್ಮಾ ಚೆಲಾನಿಯವರು ಜನರಲ್ ರಾವತರವರ ಹೆಲಿಕಾಪ್ಟರ್ ಅಪಘಾತವನ್ನು ತೈವಾನಿನ ಸೈನ್ಯದಳ ಪ್ರಮುಖರ ಅಪಘಾತದೊಂದಿಗೆ ಹೋಲಿಸಿದ್ದಾರೆ. ಚೀನಾದ ಅಕ್ರಮಣಶೀಲತೆಯ ವಿರುದ್ಧ ಹೋರಾಡುವ ಸಂರಕ್ಷಣಾ ವಿಭಾಗದಲ್ಲಿನ ಪ್ರಮುಖ ವ್ಯಕ್ತಿಗಳು ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳಬೇಕಾಗುತ್ತಿದೆ. ಇವೆರಡೂ ಅಪಘಾತಗಳಲ್ಲಿನ ಸಮಾನತೆಯ ಅರ್ಥವೆಂದರೆ, ಇವುಗಳ ನಡುವೆ ಏನಾದರೂ ಸಂಬಂಧವಿದೆ ಅಥವಾ ಇವುಗಳಲ್ಲಿ ಹೊರಗಿನ ಶಕ್ತಿಗಳ ಕೈವಾಡವಿದೆ’, ಎಂದು ಚೇಲಾನಿಯವರು ಹೇಳಿದ್ದಾರೆ.

’ಜನರಲ್ ರಾವತರವರ ಅಪಘಾತದ ಹಿಂದೆ ಅಮೇರಿಕಾ ಕೂಡ ಇರಬಹುದು !’ (ಅಂತೆ !) – ಚೀನಾ ಸರಕಾರದ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್ ‘ ನ ಸುಳ್ಳು ಆರೋಪ

ಬೀಜಿಂಗ್ (ಚೀನಾ) – ಬ್ರಹ್ಮಾ ಚೆಲಾನಿಯವರು ಜನರಲ್ ಬಿಪಿನ ರಾವತರವರ ಮತ್ತು ತೈವಾನಿನ ಸೈನ್ಯದಳ ಪ್ರಮುಖರಾದ ಶೇನ್ ಯಿ ಮಿಂಗ ರವರ ಹೆಲಿಕಾಪ್ಟರ್ ಅಪಘಾತಗಳಲ್ಲಿನ ಸಾಮ್ಯತೆಯ ಬಗ್ಗೆ ಮತ್ತು ಇಬ್ಬರೂ ಚೀನಾ ವಿರೋಧಿಗಳಾಗಿರುವುದಾಗಿ ಹೇಳಿದ ನಂತರ ಚೀನಾದ ಸರಕಾರಿ ವಾರ್ತಾಪತ್ರಿಕೆಯಾದ ‘ಗ್ಲೋಬಲ್ ಟೈಮ್ಸ್’ ಇದಕ್ಕೆ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದೆ. ‘ಗ್ಲೋಬಲ್ ಟೈಮ್ಸ್’ ಈ ವಿಷಯದಲ್ಲಿ ಟ್ವೀಟ್ ಮೂಲಕ ‘ಹೀಗಿದ್ದರೆ ಜನರಲ್ ಬಿಪಿನ ರಾವತರ ಮೃತ್ಯುವಿನ ಹಿಂದೆ ಅಮೇರಿಕಾದ ಕೈವಾಡವೂ ಇರಬಹುದು. ಏಕೆಂದರೆ ಭಾರತ ಮತ್ತು ರಷ್ಯ ಎಸ್ – 400 ಕ್ಷಿಪಣಿಯ ಬಗ್ಗೆ ಒಪ್ಪಂದ ಮಾಡುತ್ತಿದ್ದರು ಮತ್ತು ಅಮೇರಿಕಾ ಈ ಒಪ್ಪಂದವನ್ನು ವಿರೋಧಿಸುತ್ತಿತ್ತು’ ಎಂದು ಹೇಳಿದೆ.

 ‘ಗ್ಲೋಬಲ್ ಟೈಮ್ಸ್ ನ’ ಈ ಹೇಳಿಕೆಯು ಚೀನಾದ ಸರಕಾರದಲ್ಲಿನ ಭ್ರಷ್ಟ ಮಾನಸಿಕತೆಯನ್ನು ದರ್ಶಿಸುತ್ತದೆ ! – ಬ್ರಹ್ಮಾ ಚೆಲಾನಿ

ಬ್ರಹ್ಮಾ ಚೆಲಾನಿ

”ಗ್ಲೋಬಲ್ ಟೈಮ್ಸ್” ಮಾಡಿದ ಈ ಟ್ವೀಟ್ ಗೆ ಬ್ರಹ್ಮಾ ಚೆಲಾನಿಯವರು ತಕ್ಷಣ ಪ್ರತ್ಯುತ್ತರ ನೀಡುತ್ತ ಹೀಗೆ ಟ್ವೀಟ್ ಮಾಡಿದಾರೆ – ‘ ಚೀನಾದ ಸರಕಾರಿ ವಾರ್ತಾಪತ್ರಿಕೆಯು ಹೇಗೆ ನನ್ನ ಟ್ವೀಟ್ ಮೇಲೆ ತಪ್ಪು ತಿಳುವಳಿಕೆಯನ್ನು ಹರಡಲು ಪ್ರಯತ್ನಿಸುತ್ತಿದೆ ಮತ್ತು ರಾವತರವರ ಅಪಘಾತದ ಹಿಂದೆ ಅಮೇರಿಕಾ ಇದೆ ಎಂದು ಹೇಳಲು ಪ್ರಯತ್ನಿಸುತ್ತಿದೆ, ಇದನ್ನು ನೋಡಿ! ಈ ಟ್ವೀಟ್ ಚೀನಾ ಸರಕಾರದ ಭ್ರಷ್ಟ ಮಾನಸಿಕತೆಯನ್ನು ತೋರಿಸುತ್ತದೆ’’

ಚೆಲಾನಿ ಯವರು ಎರಡನೇಯ ಟ್ವೀಟ್ ನಲ್ಲಿ ‘ಸ್ಪಷ್ಟವಾಗಿ ವಿಚಾರ ಮಾಡಲು ಸಕ್ಷಮರೂ, ಸ್ಪಷ್ಟ ವಕ್ತಾರರೂ ಆಗಿದ್ದ ಜನರಲ್ ರಾವತರವರು ಚೀನಾದ ಆಕ್ರಮಣಶೀಲತೆಯ ವಿರುದ್ಧ ಭಾರತದ ಮುಖವಾಗಿದ್ದರು. ರಾಜಕೀಯ ನೇತೃತ್ವವು ಚೀನಾದ ಹೆಸರನ್ನು ಉಚ್ಚರಿಸಲು ಕೂಡ ಹಿಂಜರಿಯುತ್ತಿದ್ದಾಗ ರಾವತರು ಜನರಿಗೆ ಚೀನಾದ ಮುಖವನ್ನು ಬಹಿರಂಗವಾಗಿ ತೋರಿಸುತ್ತಿದ್ದರು. ಆದುದರಿಂದ ಜನರಲ್ ರಾವತರ ಹಾನಿಯನ್ನು ಭರಿಸಲು ಸಾಧ್ಯವಿಲ್ಲ’ಎಂದು ಹೇಳಿದರು.