ಪಾಕಿಸ್ತಾನದಲ್ಲಿ `ಧರ್ಮನಿಂದನೆ’ಯ ಆರೋಪದಲ್ಲಿ ಶ್ರೀಲಂಕಾದ ನಾಗರಿಕನನ್ನು ಜೀವಂತ ಸುಡಲಾಯಿತು !

ನೂರಕ್ಕೂ ಹೆಚ್ಚು ಜನರ ಬಂಧನ

* ಪಾಕಿಸ್ತಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಅಸ್ತಿತ್ವವೇ ಇಲ್ಲ, ಎಂಬುದನ್ನು ಈ ಘಟನೆಯು ಸ್ಪಷ್ಟಪಡಿಸುತ್ತದೆ !- ಸಂಪಾದಕರು 

*  ಭಾರತದ ತಥಾಕಥಿತ ಅಭಿವ್ಯಕ್ತಿ ಸ್ವಾತಂತ್ರ್ಯದವರು ಶ್ರೀಲಂಕಾದ ನಾಗರಿಕನ ಪರವಾಗಿ ನಿಲ್ಲುವರೇ ? ಅವರು ಮತಾಂಧರ ಈ ಕೃತ್ಯವನ್ನಾದರೂ ಖಂಡಿಸುವರೇ ?- ಸಂಪಾದಕರು 

* ಹಿಂದೂಗಳ ಧಾರ್ಮಿಕ ಭಾವನೆಯನ್ನು ಸತತವಾಗಿ ನೋಯಿಸುತ್ತಿರುವಾಗಲು ಹಿಂದೂಗಳು ಸ್ವಲ್ಪ ಪ್ರಮಾಣದಲ್ಲಿ ಕಾನೂನುಮಾರ್ಗದಿಂದ ವಿರೋಧಿಸಲು ಪ್ರಯತ್ನಿಸುತ್ತಾರೆ ಮತ್ತು ಅದಕ್ಕೂ ಕಸದ ಬುಟ್ಟಿಯನ್ನು ತೋರಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !- ಸಂಪಾದಕರು 

ಸಿಯಾಲಕೋಟ (ಪಾಕಿಸ್ತಾನ) – ಇಲ್ಲಿ `ಧರ್ಮನಿಂದನೆ’ಯ ಆರೋಪದಲ್ಲಿ ಮತಾಂಧರ ಗುಂಪೊಂದು ಶ್ರೀಲಂಕಾದ ಪ್ರಿಯಾಂಥಾ ಕುಮಾರಾ ಎಂಬ ನಾಗರಿಕನ ಕೈಕಾಲು ಮುರಿದು ಸುಟ್ಟುಹಾಕಿರುವ ಘಟನೆ ಡಿಸೆಂಬರ್ 3 ರಂದು ನಡೆದಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್, ಹಾಗೆಯೇ ರಾಷ್ಟ್ರಪತಿ ಆರಿಫ್ ಅಲ್ವಿ ಅವರು ಈ ಘಟನೆಯನ್ನು ಖಂಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು 100 ಜನರನ್ನು ಬಂಧಿಸಿದ್ದಾರೆ. ಪ್ರಿಯಾಂಥಾ ಕುಮಾರಾರವರು ಸಿಯಾಲಕೋಟದ ವಜೀರಾಬಾದ ರಸ್ತೆಯಲ್ಲಿರುವ ಒಂದು ಖಾಸಗಿ ಕಾರ್ಖಾನೆಯಲ್ಲಿ ರಫ್ತು ವ್ಯವಸ್ಥಾಪಕರ ಪದವಿಯಲ್ಲಿ ಕಾರ್ಯನಿರತರಾಗಿದ್ದರು. ಪ್ರಕರಣದಲ್ಲಿ ಶ್ರೀಲಂಕಾದ ವಿದೇಶಾಂಗ ಸಚಿವಾಲಯವು ತನಿಖೆಗಾಗಿ ಆಗ್ರಹಿಸಿದೆ, ಅದೇ `ಅಮ್ನೆಸ್ಟಿ ಇಂಟರ್ ನ್ಯಾಷನಲ್’ ಸ್ವತಂತ್ರ ತನಿಖೆಯ ಬೇಡಿಕೆಯನ್ನು ಆಗ್ರಹಿಸಿದೆ. ಪಾಕಿಸ್ತಾನದಲ್ಲಿ 1990 ರಿಂದ ಇಲ್ಲಿಯವರೆಗೆ ಮತಾಂಧರು ಗುಂಪು ಧರ್ಮ ನಿಂದನೆಯ ಆರೋಪದಲ್ಲಿ 70 ಕ್ಕೂ ಹೆಚ್ಚಿನ ಜನರ ಹತ್ಯೆ ಮಾಡಿದ್ದಾರೆ.

1. ಪ್ರತ್ಯಕ್ಷದರ್ಶಿಗಳ ಮಾಹಿತಿಗನುಸಾರ ಪ್ರಿಯಾಂಥಾರವರು ಧರ್ಮನಿಂದನೆ ಮಾಡಿರುವ ಸುಳ್ಳು ಸುದ್ದಿಯನ್ನು ಅವರ ಕಾರ್ಖಾನೆಯಲ್ಲಿ ಬೆಳಗಿನಿಂದ ಹಬ್ಬಿಸಲಾಗುತ್ತಿದೆ. ಈ ಸುಳ್ಳುಸುದ್ದಿಯು ಬಹಳ ವೇಗದಿಂದ ಸಂಪೂರ್ಣ ಕಾರ್ಖಾನೆಯನ್ನು ಹಬ್ಬಿತು. ಇದನ್ನು ವಿರೋಧಿಸಿ ಕೆಲಸಗಾರರು ಕಾರ್ಖಾನೆಯ ಹೊರಗೆ ಆಂದೋಲನ ಮಾಡಿದರು. ಈ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಕಾರ್ಖಾನೆಯಲ್ಲಿ ನುಗ್ಗಿ ಪ್ರಿಯಾಂಥಾ ಕುಮಾರಾರವರನ್ನು ಹೊಡೆದು ಅವರ ಕೈಕಾಲುಗಳನ್ನು ಮುರಿದು ಅವರನ್ನು ಜೀವಂತವಾಗಿ ಸುಟ್ಟು ಹಾಕಿದರು.

2. ಈ ಘಟನೆಯ ಮಾಹಿತಿ ದೊರೆತ ನಂತರ ಪೊಲೀಸರು ಅಲ್ಲಿ ತಲುಪುವವರೆಗೆ ಪ್ರಿಯಾಂಥಾರವರನ್ನು ಹಿಗ್ಗಾಮುಗ್ಗ ಥಳಿಸಲಾಗಿತ್ತು. ಪೊಲೀಸರ ಸಂಖ್ಯೆಯು ಕಡಿಮೆ ಇದ್ದು ಗುಂಪು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಪ್ರಿಯಾಂಥಾರವರಿಗೆ ಸಹಾಯ ಮಾಡಲು ತಡವಾಯಿತು. ಪೊಲೀಸರು ಪ್ರಿಯಾಂಥಾರವರನ್ನು ರಕ್ಷಿಸಲು ಪ್ರಯತ್ನಿಸಿದರು; ಆದರೆ ಜನಸಂದಣಿಯಿಂದಾಗಿ ಸಾಧ್ಯವಾಗಲಿಲ್ಲ.

3. ಇದು ಪಾಕಿಸ್ತಾನಕ್ಕೆ ಲಜ್ಜಾಸ್ಪದ ದಿನವಾಗಿದೆ. ನಾನು ಸ್ವತಃ ಈ ಘಟನೆಯ ತನಿಖೆಯ ಮೇಲೆ ಗಮನವಿಟ್ಟಿದ್ದೇನೆ. ಈ ಘಟನೆಗೆ ಜವಾಬ್ದಾರರಾಗಿರುವ ವ್ಯಕ್ತಿಗಳಿಗೆ ಶಿಕ್ಷೆ ನೀಡಲಾಗುವುದು. ಈ ಪ್ರಕರಣದಲ್ಲಿ ಅಪರಾಧಿಗಳನ್ನು ಬಂಧಿಸಲಾಗುತ್ತಿದೆ’, ಎಂದು ಪ್ರಧಾನಮಂತ್ರಿ ಇಮ್ರಾನ ಖಾನರವರು ಹೇಳಿದ್ದಾರೆ. (ಪಾಕಿಸ್ತಾನವು ಇಡೀ ಜಗತ್ತಿಗೆ ಲಜ್ಜಾಸ್ಪದವಾಗಿದೆ. ಪಾಕಿಸ್ತಾನವನ್ನು ಈಗ `ಭಯೋತ್ಪಾದಕ’ ಮತ್ತು `ಮತಾಂಧ’ ದೇಶವೆಂದು ಘೋಷಿಸಿ ಜಗತ್ತೇ ಅದನ್ನು ಬಹಿಷ್ಕರಿಸಬೇಕು ! – ಸಂಪಾದಕರು)

ಧರ್ಮನಿಂದನೆ ಅಂದರೆ ಏನು ?

ಧರ್ಮನಿಂದನೆ ಅಂದರೆ ಈಶ್ವರನ ನಿಂದನೆ. ಇದರಲ್ಲಿ ಉದ್ದೇಶಪೂರ್ವಕವಾಗಿ ಶ್ರದ್ಧಾಸ್ಥಾನಗಳಿಗೆ ಹಾನಿ ಮಾಡುವುದು, ಧಾರ್ಮಿಕ ಕಾರ್ಯಗಳಲ್ಲಿ ಅಡಚಣೆ ತರುವುದು, ಧಾರ್ಮಿಕ ಭಾವನೆಗಳ ಅಪಮಾನ ಮಾಡುವುದು ಇತ್ಯಾದಿಗಳು ಬರುತ್ತವೆ. ಜಗತ್ತಿನ ಅನೇಕ ದೇಶಗಳಲ್ಲಿ ಧರ್ಮನಿಂದನೆಯ ಬಗ್ಗೆ ಕಾನೂನು ಇದೆ. ಇದರ ಪ್ರಕಾರ ಕಠೋರ ಶಿಕ್ಷೆಯನ್ನು ನೀಡಲಾಗುತ್ತಿದೆ. ಜಗತ್ತಿನ ಶೇ. 26 ದೇಶಗಳಲ್ಲಿ ಇಂತಹ ಕಾನೂನು ಇದೆ. ಇವುಗಳಲ್ಲಿನ ಶೇ. 70 ರಷ್ಟು ದೇಶಗಳು ಇಸ್ಲಾಮಿ ದೇಶಗಳಿವೆ. ಪಾಕಿಸ್ತಾನದಲ್ಲಿ ಈ ಕಾನೂನಿಗನುಸಾರ ಇಸ್ಲಾಂ ಅಥವಾ ಮಹಮ್ಮದ್ ಪೈಗಂಬರರ ವಿರುದ್ಧ ಏನಾದರೂ ಹೇಳಿದರೆ ಅಥವಾ ಕೃತಿ ಮಾಡಿದರೆ ಅವರಿಗೆ ಗಲ್ಲು ಶಿಕ್ಷೆಯಾಗುತ್ತದೆ. ಗಲ್ಲು ಶಿಕ್ಷೆ ನೀಡದಿದ್ದರೆ ದಂಡ ಸಹಿತ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಈ ಕಾನೂನನ್ನು ಆಂಗ್ಲರ ಕಾಲದಲ್ಲಿ ಮಾಡಲಾಗಿತ್ತು.