`ಸಿಬರ್ಡ್ ಟ್ರಾನ್ಸಪೋರ್ಟ್’ನ ಸಿಬ್ಬಂದಿಗಳಿಗೆ ಸನಾತನ ಸಂಸ್ಥೆಯ ವತಿಯಿಂದ `ಒತ್ತಡಮುಕ್ತ ಜೀವನಕ್ಕಾಗಿ ಅಧ್ಯಾತ್ಮ’ ಈ ಕುರಿತು ಶಿಬಿರ

ಬೆಂಗಳೂರು – ಸನಾತನ ಸಂಸ್ಥೆಯ ವತಿಯಿಂದ ಇಲ್ಲಿಯ `ಸಿಬರ್ಡ್ ಟ್ರಾನ್ಸಪೋರ್ಟ್’ನ ಸಿಬ್ಬಂದಿಗಳಿಗೆ `ಒತ್ತಡಮುಕ್ತ ಜೀವನಕ್ಕಾಗಿ ಅಧ್ಯಾತ್ಮ’ ಈ ಕುರಿತು 14.11.2021 ರಂದು ಶಿಬಿರವನ್ನು ತೆಗೆದುಕೊಳ್ಳಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ, ಸನಾತನ ಸಂಸ್ಥೆಯ ಸೌ. ಶಾರದಾ ಯೋಗಿಶ, ಶ್ರೀ. ನವೀನ ಗೌಡ ಮತ್ತು `ಸಿಬರ್ಡ್’ನ ಮಾಲೀಕರಾದ ಶ್ರೀ. ನಾಗರಾಜಯ್ಯ ಮತ್ತು ಸೌ. ರೂಪಾ ಇವರು ಉಪಸ್ಥಿತರಿದ್ದರು. ಈ ಸಂಸ್ಥೆಯ 30 ಸಿಬ್ಬಂದಿಗಳು ಶಿಬಿರದ ಲಾಭವನ್ನು ಪಡೆದುಕೊಂಡರು.

ನಿಜವಾದ ಆನಂದವು ಭಗವಂತನ ನಾಮಜಪದಲ್ಲಿದೆ ! – ಸೌ. ಶಾರದಾ ಯೋಗಿಶ, ಸನಾತನ ಸಂಸ್ಥೆ

ಸೌ. ಶಾರದಾ ಇವರು ಎಲ್ಲರಿಗೆ ಮಾರ್ಗದರ್ಶನ ಮಾಡುತ್ತಾ, “ಮನುಷ್ಯನು ಆನಂದವನ್ನು ಪಡೆಯಲು ಜನ್ಮಕ್ಕೆ ಬರುತ್ತಾನೆ; ಆದರೆ ಮಾಯೆಯ ವಿವಿಧ ಆಕರ್ಷಣೆಗಳಲ್ಲಿ ಸಿಲುಕುವುದರಿಂದ, ಅದೇ ರೀತಿ ಪ್ರಾಪಂಚಿಕ ಜೀವನದಲ್ಲಿ ಮುಳುಗಿರುವುದರಿಂದ ಜನ್ಮಕ್ಕೆ ಬಂದಿರುವ ಉದ್ದೇಶ ಮರೆಯುತ್ತಾನೆ. ಕ್ಷಣಿಕ ಸುಖವನ್ನು ಪಡೆಯಲು ಪರಾಕಾಷ್ಠೆಯ ಪ್ರಯತ್ನ ಮಾಡುತ್ತಾನೆ; ಆದರೆ ಇದರಿಂದ ನಿಜವಾದ ಆನಂದದಿಂದ ವಂಚಿತನಾಗುತ್ತಾನೆ. ನಿಜವಾದ ಆನಂದ ಭಗವಂತನ ನಾಮಜಪದಲ್ಲಿದೆ. ಅದಕ್ಕಾಗಿ ನಾವು ಆಧ್ಯಾತ್ಮಿಕ ಮತ್ತು ಲೌಕಿಕ ಪ್ರಗತಿಗಾಗಿ ನಮ್ಮ ಕುಲದೇವತೆಯ ನಾಮಜಪ ಮಾಡಬೇಕು. ನಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ, ಭಗವಂತನ ಕೃಪೆಯಾಗಿ ವ್ಯವಹಾರಿಕ ಮತ್ತು ಕೌಟುಂಬಿಕ ಜೀವನದಲ್ಲಿ ಯಶಸ್ಸು ಸಿಗುತ್ತದೆ” ಎಂದು ಹೇಳಿದರು.

ಶ್ರೀ. ನಾಗರಾಜಯ್ಯ ಅವರು ಮಾತನಾಡುತ್ತಾ, ‘ಸಿ ಬರ್ಡ್’ನ ಮಾರ್ಗಕ್ರಮಣದ ಬಗ್ಗೆ ಸಿಬ್ಬಂದಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ‘ನಾವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ `ಸಿಬರ್ಡ್’ ಸಾರಿಗೆ ಸಂಸ್ಥೆ ಸ್ಥಾಪಿಸಿದ್ದೇವೆ. ಇಂದು ಸಂಸ್ಥೆಯ ವಹಿವಾಟು ಕೋಟಿಗಟ್ಟಲೆ ಇದೆ. ಕಠಿಣ ಪರಿಸ್ಥಿತಿಯಲ್ಲಿ ಯಶಸ್ಸನ್ನು ಪಡೆಯಲು ನಾವೆಲ್ಲರೂ ಒಟ್ಟಾಗಿ ಒಂದು ಮನಸ್ಸಿನಿಂದ ಭಗವಂತನ ನಾಮಜಪ ಮಾಡಲು ಪ್ರಯತ್ನಿಸೋಣ’, ಎಂದು ಕರೆ ನೀಡಿದರು.