Indian Origin Canadian MP’s : ಕೆನಡಾದ ಕ್ಯಾಬಿನೆಟ್‌ನಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳಾ ಸಂಸದರ ಸೇರ್ಪಡೆ !

ಭಾರತೀಯ ಮೂಲದ ಕಮಲ ಖೇರಾ (ಎಡ) ಮತ್ತು ಅನಿತಾ ಆನಂದ (ಬಲ)

ಒಟ್ಟಾವಾ (ಕೆನಡಾ) – ಕೆನಡಾದ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭ ಇತ್ತೀಚೆಗೆ ನಡೆಯಿತು. ಇದರಲ್ಲಿ ಭಾರತೀಯ ಮೂಲದ ಅನಿತಾ ಆನಂದ ಮತ್ತು ಕಮಲ ಖೇರಾ ಎಂಬ ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಲಾಗಿದೆ. 58 ವರ್ಷದ ಅನಿತಾ ಆನಂದ ಅವರನ್ನು ನಾವೀನ್ಯತೆ, ವಿಜ್ಞಾನ ಮತ್ತು ಕೈಗಾರಿಕಾ ಸಚಿವರನ್ನಾಗಿ ನೇಮಿಸಲಾಗಿದೆ ಹಾಗೂ 36 ವರ್ಷದ ಕಮಲ ಖೇರಾ ಅವರನ್ನು ಆರೋಗ್ಯ ಸಚಿವರನ್ನಾಗಿ ನೇಮಿಸಲಾಗಿದೆ.

ಕಮಲ ಖೇರಾ ಮತ್ತು ಅನಿತಾ ಆನಂದ್ ಯಾರು?

ಕೆನಡಾದ ಪ್ರಧಾನ ಮಂತ್ರಿಗಳ ವೆಬ್‌ಸೈಟ್‌ನಲ್ಲಿನ ದಾಖಲೆಗಳ ಪ್ರಕಾರ, ದೆಹಲಿಯಲ್ಲಿ ಜನಿಸಿದ ಕಮಲ ಖೇರಾ ಕೆನಡಾದ ಸಂಸತ್ತಿಗೆ ಆಯ್ಕೆಯಾದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿದ್ದಾರೆ. ಅವರು 2015 ರಲ್ಲಿ ಬ್ರಾಂಪ್ಟನ್ ವೆಸ್ಟ್‌ನಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ನೊವಾ ಸ್ಕಾಟಿಯಾದಲ್ಲಿ ಜನಿಸಿದ ಮತ್ತು ಅಲ್ಲಿಯೇ ಬಾಲ್ಯ ಕಳೆದ ಅನಿತಾ ಆನಂದ್ ಅವರು ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ನಂತರ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದರು. ಅನಿತಾ ಆನಂದ್ 2019 ರಲ್ಲಿ ಓಕ್ವಿಲ್ಲೆಯ ವಿಶೇಷ ಸ್ಥಾನ ಪಡೆದರು. ಅವರು ಈ ಹಿಂದೆ ರಾಷ್ಟ್ರೀಯ ರಕ್ಷಣಾ ಸಚಿವರು, ಸಾರ್ವಜನಿಕ ಸೇವೆ ಮತ್ತು ಖರೀದಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಪಾದಕೀಯ ನಿಲುವು

ಅಮೆರಿಕದ ನಂತರ ಕೆನಡಾದ ಹೊಸ ಸರಕಾರದಲ್ಲಿ ಭಾರತೀಯ ಮೂಲದ ಜನರು ಸೇರಿರುವುದು ಜಗತ್ತಿನಲ್ಲಿ ಭಾರತದ ಸ್ಥಾನ ಬಲವಾಗುತ್ತಿದೆ ಎಂಬುದರ ಸಂಕೇತವಾಗಿದೆ!