ಭಾರತದಲ್ಲಿ ಅಲ್ಪಸಂಖ್ಯಾತರೇ ಸುರಕ್ಷಿತರು! – ನಟ ಜಾನ್ ಅಬ್ರಹಾಂ

ನವದೆಹಲಿ – ನಾನು ಅಲ್ಪಸಂಖ್ಯಾತ, ಆದರೆ ಭಾರತದಲ್ಲಿ ನಾನು ಯಾವಾಗಲೂ ಸುರಕ್ಷಿತವಾಗಿ ಭಾವಿಸಿದ್ದೇನೆ, ಎಂದು ನಟ ಜಾನ್ ಅಬ್ರಹಾಂ ಅವರು ಇಂಗ್ಲಿಷ್ ಸುದ್ದಿ ವಾಹಿನಿಯ ಪ್ರತಿನಿಧಿಯೊಂದಿಗೆ ಸಂದರ್ಶನದಲ್ಲಿ ಹೇಳಿದ್ದಾರೆ.

ಜಾನ್ ಅಬ್ರಹಾಂ ಅವರು ಮಾತು ಮುಂದುವರೆಸಿ, “ನಾನು ಭಾರತೀಯನಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನು ನಟನಾಗಿರುವುದರಿಂದ ಜನರು ನನ್ನ ಬಗ್ಗೆ ವಿವಾದ ಸೃಷ್ಟಿಸುತ್ತಿರಬಹುದು. ನಾನು ಅಲ್ಪಸಂಖ್ಯಾತನಾಗಿದ್ದೇನೆ. ನನ್ನ ತಾಯಿ ಝೋರಾಸ್ಟ್ರಿಯನ್ ಮತ್ತು ನನ್ನ ತಂದೆ ಸಿರಿಯನ್ ಕ್ರಿಶ್ಚಿಯನ್. ನಾನು ಭಾರತೀಯನಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ. ನಾನು ನನ್ನ ದೇಶದಲ್ಲಿ ಯಾವಾಗಲೂ ಸುರಕ್ಷಿತವಾಗಿ ಭಾವಿಸುತ್ತೇನೆ.”, ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಭಾರತದ ಅಲ್ಪಸಂಖ್ಯಾತರು ಅಸುರಕ್ಷಿತರು ಮತ್ತು ಭಯಭೀತರಾಗಿದ್ದಾರೆ’, ಎಂದು ಯಾವಾಗಲೂ ಕೂಗುವ ಮುಸಲ್ಮಾನರು, ಕಾಂಗ್ರೆಸ್ಸಿಗರು, ಪ್ರಗತಿ(ಅಧೊಗತಿ)ಪರರು, ಹಾಗೆಯೇ ಅಮೆರಿಕದ ‘ಪ್ಯೂ ರಿಸರ್ಚ್ ಸೆಂಟರ್’, ‘ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ’ ದಂತಹ ಸಂಸ್ಥೆಗಳು ಇದರ ಬಗ್ಗೆ ಏನು ಹೇಳಲು ಬಯಸುತ್ತವೆ?