ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಅವರ ಪತ್ನಿ ಎಡ್ವಿನಾ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸಲು ಬ್ರಿಟಿಷ್ ಸರಕಾರದಿಂದ ನಿರಾಕರಣೆ

ದಾಖಲೆಗಳ ಭದ್ರತೆಗಾಗಿ 6 ಕೋಟಿ ರೂಪಾಯಿ ಖರ್ಚು

ಭಾರತದ ವಿಭಜನೆಗೆ ಸಂಬಂಧಿಸಿದ ದಾಖಲೆಗಳನ್ನು ಗೌಪ್ಯವಾಗಿಡಲು ಪ್ರಯತ್ನ

‘ಭಾರತದ ವಿಭಜನೆಗೆ ಸಂಬಂಧಿಸಿದ ದಾಖಲೆಗಳನ್ನು ಭಾರತಕ್ಕೆ ತಂದು ಸತ್ಯವನ್ನು ಜನರ ಮುಂದಿಡಬೇಕು’, ಹೀಗೆ ಸ್ವಾತಂತ್ರ್ಯದ ನಂತರ ಇಲ್ಲಿಯ ವರೆಗಿನ 74 ವರ್ಷಗಳ ಯಾವುದೇ ಸರಕಾರಕ್ಕೆ ಎಂದೂ ಅನಿಸಲಿಲ್ಲವೇ ಹಾಗೂ ಅದಕ್ಕಾಗಿ ಅವರು ಪ್ರಯತ್ನಿಸಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಜನರೇ ಇನ್ನು ಆ ದಾಖಲೆಗಳನ್ನು ತರಿಸಲು ಸರಕಾರದ ಮೇಲೆ ಒತ್ತಡ ಹೇರಬೇಕು !- ಸಂಪಾದಕರು

ಬ್ರಿಟಿಷ್ ಕಾಲದ ಭಾರತದ ಗವರ್ನರ್ ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಅವರ ಪತ್ನಿ ಎಡ್ವಿನಾ ಮೌಂಟ್ ಬ್ಯಾಟನ್

ಲಂಡನ್ (ಬ್ರಿಟನ್) – ಬ್ರಿಟಿಷ್ ಕಾಲದ ಭಾರತದ ಗವರ್ನರ್ ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಅವರ ಪತ್ನಿ ಎಡ್ವಿನಾ ಮೌಂಟ್ ಬ್ಯಾಟನ್ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಗೌಪ್ಯವಾಗಿಡಲು ಬ್ರಿಟನ್ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ ಎಂದು ವರದಿಯಾಗಿದೆ. ಒಂದು ವೇಳೆ ಈ ದಾಖಲೆಗಳು ಮತ್ತು ಪತ್ರಗಳು ಸೋರಿಕೆಯಾದರೆ, ಭಾರತ ವಿಭಜನೆ ಮತ್ತು ಎಡ್ವಿನಾ ಸಂಬಂಧವು ಬಹಿರಂಗವಾಗಲಿದೆ ಮತ್ತು ಭಾರತದೊಂದಿಗೆ ಬ್ರಿಟನ್ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಬ್ರಿಟನ್‍ನಲ್ಲಿನ ಲೇಖಕ ಆಂಡ್ಯೂ ಲೋನಿ ಅವರು ಬ್ರಿಟಿಷ್ ಸರಕಾರದ ಬಳಿ ದಾಖಲೆಗಳನ್ನು ಕೋರಿದ್ದಾರೆ. ಇದಕ್ಕೂ ಮುನ್ನ ಕೆಲವು ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆಗ ಅವರಿಗೆ ಸಿಕ್ಕಿತು; ಆದರೆ, 1947-48 ನೇ ಸಾಲಿನ ದಾಖಲೆಗಳನ್ನು ಅವರಿಗೆ ನೀಡಿಲ್ಲ. ಆ ದಾಖಲೆಗಳು ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಅವರ ಪತ್ನಿಗೆ ಸಂಬಂಧಿಸಿವೆ. ಈ ದಾಖಲೆಗಳು ಸಾರ್ವಜನಿಕವಾಗುವುದನ್ನು ತಡೆಯಲು ಬ್ರಿಟಿಷ್ ಸರಕಾರ ಇದುವರೆಗೆ 6 ಕೋಟಿ ರೂಪಾಯಿ ಖರ್ಚು ಮಾಡಿದೆ.