ಸೂರ್ಯ ಹುಟ್ಟುವ ಮೊದಲು ಎಲ್ಲೆಡೆಯು ಕತ್ತಲೆಯು ಆವರಿಸಿರುತ್ತದೆ. ಆದರೆ ಸೂರ್ಯೋದಯವಾಗುತ್ತಲೆ ಕತ್ತಲೆಯು ತನ್ನಷ್ಟಕ್ಕೆ ನಾಶವಾಗುತ್ತದೆ, ವಾತಾವರಣದಲ್ಲಿಯ ಒತ್ತಡವು ಹೋಗಿ ಲಘುತನದ ಅರಿವಾಗುತ್ತದೆ. ಕತ್ತಲೆಗೆ ನೀನು ದೂರ ಹೋಗು ಸೂರ್ಯನ ಉದಯವಾಗುತ್ತಿದೆ ಎಂದು ಹೇಳಬೇಕಾಗುವುದಿಲ್ಲ. ಇದೆಲ್ಲ ತನ್ನಿಂದತಾನೆ ನಡೆಯುತ್ತದೆ. ಅದರಂತೆ ಇಂದು ಭಾರತದಲ್ಲಿ ಹರಡಿದಂತಹ ವಿವಿಧ ಸಮಸ್ಯೆಗಳ ಕತ್ತಲೆಯು ಹಿಂದೂ ರಾಷ್ಟ್ರದ ಸ್ಥಾಪನೆಯಾಗುತ್ತಲೆ ನಾಶವಾಗುತ್ತದೆ. ಧರ್ಮಾಚರಣಿ ರಾಜಕಾರಣಿಗಳಿಂದ ಭಾರತದ ಮುಂದಿರುವ ಎಲ್ಲಾ ಸಮಸ್ಯೆಗಳು ಸರಿಯಾಗುವುದು ಹಾಗೂ ಒಳ್ಳೆಯ ಆಚರಣೆಯಿಂದ ಜನರೆಲ್ಲರೂ ಸುಖಿಗಳಾಗುವರು. ಹಿಂದೂ ರಾಷ್ಟ್ರದ ಉದಯ ನೋಡುವುದಕ್ಕಾಗಿ ನಾವೆಲ್ಲರೂ ಸಿದ್ಧರಾಗೋಣ.