ಸಾಧನೆ ಮಾಡಿದರೆ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಆನಂದದಲ್ಲಿರಬಹುದು  – ಸೌ. ರೇವತಿ ಹರಗಿ

ಶಿವಮೊಗ್ಗದಲ್ಲಿ ಸನಾತನ ಸಂಸ್ಥೆ ವತಿಯಿಂದ ಯುವಾ ಶಿಬಿರ

ಸೌ. ರೇವತಿ ಹರಗಿ

‘ಸಾಧನೆ ಮಾಡುವುದರಿಂದ ಆಧ್ಯಾತ್ಮಿಕ ಬಲವು ಸಿಗುತ್ತದೆ. ಆದುದರಿಂದ ಪ್ರತಿ ದಿನ ನಾಮಜಪ ಪ್ರಾರ್ಥನೆ ಮಾಡಬೇಕು. ಇದರಿಂದ ನಮ್ಮಲ್ಲಿ ಚೈತನ್ಯ ಹೆಚ್ಚಾಗುತ್ತದೆ. ಸಾಧನೆ ಮಾಡುವುದರಿಂದ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಆನಂದದಲ್ಲಿರಬಹುದು’ ಎಂದು ಸನಾತನ ಸಂಸ್ಥೆಯ ಸೌ. ರೇವತಿ ಹರಗಿ ಇವರು ಮಾರ್ಗದರ್ಶನ ಮಾಡಿದರು. ಅವರು ಅಕ್ಟೋಬರ್ ೩೧ ರಂದು ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಯುವ ಸಾಧನ ಶಿಬಿರದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿಯ ಜಿಲ್ಲಾಸಮನ್ವಯಕರಾದ ಶ್ರೀ. ರಮೇಶ ಹೊಸನಗರ. ಹಿಂದೂ ಜನಜಾಗೃತಿ ಸಮಿತಿಯ ಸೌ. ಸೌಮ್ಯ ಮೊಗೇರ ಇವರು ಉಪಸ್ಥಿತರಿದ್ದರು. ಕು. ಅನ್ನಪೂರ್ಣಾ ಇವರು ಶಿಬಿರದ ನಿರೂಪಣೆಯನ್ನು ಮಾಡಿದರೆ ಕು. ಭವ್ಯಾ ನಾಯಕ ಇವರು ಪರಾತ್ಪರ ಗುರು ಡಾ. ಜಯಂತ ಆಠವಲೆ ಅವರ ದೈವೀ ಕಾರ್ಯದ ಬಗ್ಗೆ ಆನ್‌ಲೈನ್ ಮೂಲಕ ತಿಳಿಸಿದರು. ಈ ಸಮಯದಲ್ಲಿ ಸೌ. ಸೌಮ್ಯ ಮೊಗೇರ ಇವರು ‘ಹಿಂದೂ ಧರ್ಮದ ಮೇಲೆ ಆಗುತ್ತಿರುವ ಆಘಾತಗಳ’ ಬಗ್ಗೆ ತಿಳಿಸಿದರು.

ಗಮನಾರ್ಹ ಅಂಶಗಳು

೧. ಶಿಬಿರದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕೆಂದು ಪ್ರಾಯೋಗಿಕ ಭಾಗವೆಂದು ಧರ್ಮಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಂಡಿಸಲು ನೀಡಲಾಯಿತು.

೨. ಕೊರೊನಾದಿಂದ ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರದಿಂದ ಹೇಗೆ ಹೊರಬರಬೇಕು ಹಾಗೂ ಏನೆಲ್ಲ ಕಾಳಜಿ ವಹಿಸಬೇಕು ಎಂಬ ಬಗ್ಗೆ ಗುಂಪು ಚರ್ಚೆ ಮೂಲಕ ತಿಳಿಸಲಾಯಿತು.

ಅಭಿಪ್ರಾಯ

೧. ಈ ಶಿಬಿರದಿಂದ ನನಗೆ ನಮ್ಮ ರಾಷ್ಟ್ರಪುರುಷರ ತ್ಯಾಗದ ಬಗ್ಗೆ ಮಾಹಿತಿ ತಿಳಿಯಿತು. ಇಲ್ಲಿ ಹೇಳಿದಂತಹ ಪ್ರಯತ್ನ ಮಾಡುತ್ತೇನೆ. – ಕು. ಕಾವ್ಯಶ್ರೀ ಮಂಜುನಾಥ (೨೧ ವರ್ಷ), ಸಾಗರ.

೨. ಈ ಕಲಿಯುಗದಲ್ಲಿ ನಾಮಜಪ ಮಾಡುವುದರ ಮಹತ್ವ ತಿಳಿಯಿತು. ಇಂತಹ ಶಿಬಿರ ವಾರಕ್ಕೊಮ್ಮೆಯಾದರೂ ಆಯೋಜಿಸಿದರೆ ಸಾಧನೆಗೆ ಪ್ರೋತ್ಸಾಹ ಸಿಗುತ್ತದೆ.

– ಶ್ರೀ. ಲೋಕಪ್ರಸಾದ್ ವೇಲುಸ್ವಾಮಿ (೧೯ ವರ್ಷ), ಶಿವಮೊಗ್ಗ.