ಕಾರ್ತಿಕ ಹುಣ್ಣಿಮೆ (೧೮/೧೯.೧೧.೨೦೨೧) ರಂದು ಇರುವ ಖಂಡಗ್ರಾಸ ಚಂದ್ರಗ್ರಹಣ

‘ಶುಕ್ರವಾರ, ಕಾರ್ತಿಕ ಹುಣ್ಣಿಮೆ (೧೮/೧೯.೧೧.೨೦೨೧) ಈ ದಿನದಂದು ಇರುವ ಖಂಡಗ್ರಾಸ ಚಂದ್ರಗ್ರಹಣವು ಭಾರತದಲ್ಲಿ ಕಾಣಿಸದಿರುವುದರಿಂದ ಗ್ರಹಣದ ಯಾವುದೇ ವೇಧಾದಿ ನಿಯಮಗಳನ್ನು ಪಾಲಿಸಬಾರದು.

೧. ಗ್ರಹಣ ಕಾಣಿಸುವ ಪ್ರದೇಶ : ಈ ಚಂದ್ರಗ್ರಹಣವು ಏಶಿಯಾಖಂಡದಲ್ಲಿನ ಪೂರ್ವದ ಕಡೆಗಿನ ಪ್ರದೇಶ, ಯುರೋಪಿನ ಹಲವು ಪ್ರದೇಶ, ಆಫ್ರಿಕಾ ಖಂಡದ ವಾಯುವ್ಯದಿಕ್ಕಿನ ಪ್ರದೇಶ, ಸಂಪೂರ್ಣ ಅಮೇರಿಕಾಖಂಡ ಮತ್ತು ಆಸ್ಟ್ರೇಲಿಯಾ ಪ್ರದೇಶದಲ್ಲಿ ಕಾಣಿಸುವುದು.

೨. ಚಂದ್ರಗ್ರಹಣದ ಸಮಯ (ಭಾರತದ ಸಮಯಕ್ಕನುಸಾರ)

೨ ಅ. ಸ್ಪರ್ಶ (ಆರಂಭ) : ಮಧ್ಯಾಹ್ನ ೧೨.೪೯

೨ ಆ. ಮಧ್ಯ : ಮಧ್ಯಾಹ್ನ ೨.೩೩

೨ ಇ. ಮೋಕ್ಷ (ಸಮಾಪ್ತಿ) : ಸಾಯಂಕಾಲ ೪.೧೭

೨ ಈ. ಗ್ರಹಣಪರ್ವ (ಟಿಪ್ಪಣಿ ೧) (ಗ್ರಹಣದ ಆರಂಭದಿಂದ ಕೊನೆಯವರೆಗಿನ ಒಟ್ಟು ಕಾಲಾವಧಿ) : ೩ ಗಂಟೆ ೨೮ ನಿಮಿಷಗಳು,’ (ಆಧಾರ : ದಾತೆ ಪಂಚಾಂಗ)

ಟಿಪ್ಪಣಿ ೧ – ಪರ್ವ ಎಂದರೆ ಸಂಧಿಕಾಲ ಅಥವಾ ಪುಣ್ಯಕಾಲವಾಗಿದೆ. ಗ್ರಹಣ ಸ್ಪರ್ಶದಿಂದ ಗ್ರಹಣ ಮೋಕ್ಷದ ವರೆಗಿನ ಕಾಲವು ಪುಣ್ಯಕಾಲವಾಗಿದೆ. ‘ಈ ಕಾಲದಲ್ಲಿ ಈಶ್ವರೀ(ಈಶ್ವರನ) ಅನುಸಂಧಾನದಲ್ಲಿದ್ದರೆ ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.’

– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ ವಿಶಾರದ, ರತ್ನಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, ಸರ್ಟಿಫೈಡ್ ಡೌಸರ್, ರಮಲ ಪಂಡಿತ ಮತ್ತು ಹಸ್ತಾಕ್ಷರಗಳ ಮನೋವಿಶ್ಲೇಷಣೆ ಶಾಸ್ತ್ರ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೧೦.೨೦೨೧)