ಭಯೋತ್ಪಾದಕರಿಗೆ ಧರ್ಮ ಇರುತ್ತದೆ, ಎಂಬುದನ್ನು ಗಮನದಲ್ಲಿಡಿರಿ !

೧. ಭಯೋತ್ಪಾದಕರಿಗೆ ಧರ್ಮ ಇರುತ್ತದೆ, ಎಂಬುದನ್ನು ಗಮನದಲ್ಲಿಡಿರಿ !

ಉತ್ತರಪ್ರದೇಶದಲ್ಲಿ ದೀಪಾವಳಿಯಂದು ಪ್ರಮುಖ ೪೬ ರೈಲು ನಿಲ್ದಾಣಗಳನ್ನು ಬಾಂಬ್‌ನಿಂದ ಧ್ವಂಸ ಮಾಡುವುದಾಗಿ ಲಷ್ಕರ-ಎ-ತೊಯಬಾ ಬೆದರಿಕೆಯೊಡ್ಡಿದೆ. ಅನಂತರ ರಾಜ್ಯದ ಎಲ್ಲ ರೈಲು ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

೨.  ಖಲಿಸ್ತಾನಿಗಳ ಅಪಾಯವನ್ನು ತಿಳಿಯಿರಿ !

‘ಸಿಕ್ಖ್ ಫಾರ್ ಜಸ್ಟೀಸ್’ ಎಂಬ ಖಲಿಸ್ತಾನಿ ಸಂಘಟನೆಯು ಜನಾಭಿಪ್ರಾಯ ಸಂಗ್ರಹದ ಮೊದಲ ಹಂತವನ್ನು ಲಂಡನ್‌ನಲ್ಲಿ ಆಯೋಜಿಸಿತ್ತು. ಇದರಲ್ಲಿ ಸಿಕ್ಖ್‌ರಿಗೆ ‘ಪಂಜಾಬ’ವು ಒಂದು ಸ್ವತಂತ್ರ ದೇಶವಾಗಿರಬೇಕೋ ಬೇಡವೋ ? ಎಂದು ಮತದಾನ ಮಾಡಬೇಕಾಗಿತ್ತು.

೩. ಕಾಂಗ್ರೆಸ್ಸಿನ ನಿಜಸ್ವರೂಪವನ್ನು ತಿಳಿಯಿರಿ !

೧೦೦ ವರ್ಷಗಳ ಹಿಂದೆ ಮೋಹನದಾಸ ಗಾಂಧಿಯವರ ಪಕ್ಷದ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ನಿಯಮಾವಳಿಯನ್ನು ರಚಿಸಲಾಗಿತ್ತು. ಈಗ ಅದರಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ‘ಮದ್ಯಪಾನ ಮಾಡಬಾರದು’ ಎಂಬ ನಿಷೇಧದ ನಿಯಮವನ್ನು ಸಡಿಲಿಸುವ ಸಾಧ್ಯತೆಯಿದೆ

೪. ಮಸೀದಿಗಳ ಮೇಲಿನ ಬೋಂಗಾಗಳನ್ನು ನಿಷೇಧಿಸಲು ಅಲೀ ಯಾವಾಗ ಪ್ರಯತ್ನಿಸುವರು ?

ಚಿತ್ರ ನಿರ್ಮಾಪಕಿ ರೋಶನಿ ಅಲೀ ಇವರು ಬಂಗಾಳದಲ್ಲಿ ದೀಪಾವಳಿ ಮತ್ತು ಇನ್ನಿತರ ಸಮಯದಲ್ಲಿ ಪಟಾಕಿಗಳನ್ನು ಸಿಡಿಸಲು ನಿಷೇಧ ಹೇರಬೇಕೆಂದು ಪುನಃ ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಲಿದ್ದಾರೆ. ಅವರ ಈ ಹಿಂದಿನ ಅರ್ಜಿಯಿಂದ ಉಚ್ಚ ನ್ಯಾಯಾಲಯವು ಹೇರಿದ್ದ ನಿರ್ಬಂಧವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿತ್ತು.

೫. ಇಂತಹವರನ್ನು ಗಲ್ಲಿಗೇರಿಸಬೇಕು !

ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಆಡಳಿತವು ಕಾರಾಗೃಹದ ಉಪಅಧೀಕ್ಷಕ ಫಿರೋಜ ಅಹಮದ ಲೋನ ಮತ್ತು ಮುಖ್ಯೋಪಾಧ್ಯಾಯ ಜಾವೇದ ಅಹಮದ ಶಾಹ ಇವರಿಬ್ಬರನ್ನು ನೌಕರಿಯಿಂದ ವಜಾ ಮಾಡಿದೆ. ಇಂತಹ ಪ್ರಕರಣದಲ್ಲಿ ಈ ವರ್ಷ ೨೭ ಸರಕಾರಿ ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.

೬. ಇವರ ಮೇಲೆ ಯಾವಾಗ ಕ್ರಮಕೈಗೊಳ್ಳಲಾಗುವುದು ?

ಗುಪ್ತಚರ ಇಲಾಖೆಯು ನೀಡಿದ ಗೌಪ್ಯ ಮಾಹಿತಿಗನುಸಾರ ಭಾರತ ಮತ್ತು ನೇಪಾಳ ಗಡಿಯಲ್ಲಿ ಕಳೆದ ೨೦ ವರ್ಷಗಳಲ್ಲಿ ಮಸೀದಿ ಮತ್ತು ಮದರಸಾ ಇವುಗಳ ಸಂಖ್ಯೆಯು ೪ ಪಟ್ಟು ಹೆಚ್ಚಳವಾಗಿದೆ.

೭. ಭಾರತದಲ್ಲಿ ಹೀಗೆಂದು ಆಗಲಿದೆ ?

ಗ್ರೀಸ್‌ನ ಸರ್ವೋಚ್ಚ ನ್ಯಾಯಾಲಯವು ‘ಹಲಾಲ್’ ಪದ್ಧತಿಯಲ್ಲಿ ಪ್ರಾಣಿಗಳ ಹತ್ಯೆ ಮಾಡುವುದನ್ನು ನಿಷೇಧಿಸಿದೆ. ಇನ್ನು ಗ್ರೀಸ್‌ನಲ್ಲಿ ಯಾವುದೇ ಪ್ರಾಣಿಯ ಹತ್ಯೆ ಮಾಡುವ ಮುನ್ನ ಅದನ್ನು ಮೂರ್ಛೆಗೊಳಿಸಬೇಕಾಗುವುದು.