ಶ್ರೀರಾಮ ಸೇನೆ, ಹಿಂದೂ ರಾಷ್ಟ್ರ ಸೇನೆ ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಂದಾಗಿ ಬೆಳಗಾವಿಯಲ್ಲಿ ಹಿಂದೂಗಳ ಮತಾಂತರದ ಪ್ರಯತ್ನ ವಿಫಲ !

೨೦೦ ಹಿಂದೂಗಳನ್ನು ಮತಾಂತರಿಸಲಿದ್ದರು !

ಈ ಘಟನೆಯಿಂದ ದೇಶದಾದ್ಯಂತ ಮತಾಂತರ ನಿಷೇಧ ಕಾನೂನು ಜಾರಿ ಮಾಡುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಅನಿಷ್ಠಾನಗೊಳಿಸುವುದರ ಅವಶ್ಯಕತೆಯು ಸ್ಪಷ್ಟವಾಗುತ್ತದೆ !

ಬೆಳಗಾವ – ಶ್ರೀರಾಮ ಸೇನೆ, ಹಿಂದೂ ರಾಷ್ಟ್ರ ಸೇನೆ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಬೆಳಗಾವಿಯಲ್ಲಿ ಹಿಂದೂಗಳ ಮತಾಂತರ ಪ್ರಯತ್ನ ವಿಫಲಗೊಳಿಸಿದ್ದಾರೆ. ಓರ್ವ ಕ್ರೈಸ್ತ ಪಾದ್ರಿಯು ಪ್ರಾರ್ಥನೆಯ ಹೆಸರಿನಲ್ಲಿ ನವೆಂಬರ್ ೭ ರಂದು ಮರಾಠಾ ಕಾಲೋನಿಯಲ್ಲಿ ಒಂದು ಕಟ್ಟಡದಲ್ಲಿ ಗ್ರಾಮೀಣ ಪ್ರದೇಶದ ೨೦೦ ಹಿಂದೂಗಳನ್ನು ಮತಾಂತರಕ್ಕಾಗಿ ಒಟ್ಟುಗೂಡಿಸಿದ್ದನು. ಶ್ರೀರಾಮ ಸೇನೆ, ಹಿಂದೂ ರಾಷ್ಟ್ರ ಸೇನೆ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರಿಗೆ ಈ ಮಾಹಿತಿ ಸಿಕ್ಕಿದ ಕೂಡಲೇ ಅವರು ಈ ಕಟ್ಟಡವನ್ನು ಸುತ್ತುವರಿದರು ಮತ್ತು ಪೊಲೀಸರನ್ನು ಕರೆಸಿದರು. ಪೊಲೀಸರು ಬರುವವರೆಗೆ ಹಿಂದುತ್ವನಿಷ್ಠರು ಈ ಕಟ್ಟಡದಿಂದ ಒಬ್ಬ ವ್ಯಕ್ತಿಗೂ ಹೊರಗೆ ಹೋಗಲು ಬಿಡಲಿಲ್ಲ. ಈ ಪ್ರಕರಣದಲ್ಲಿ ಪಾದ್ರಿ ಲಿಮಾ ಚೆರಿಯನ ಇವನ ವಿರುದ್ಧ ಪ್ರಾಥಮಿಕ ದೂರು ದಾಖಲಿಸಲಾಗಿದೆ. ಅಲ್ಲಿ ನೆರೆದಿರುವ ಜನರ ಪೈಕಿ ಒಬ್ಬನು ಆ ಪಾದ್ರಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾನೆ, ಎಂದು ಶ್ರೀರಾಮ ಸೇನೆ ಮತ್ತು ಹಿಂದೂ ರಾಷ್ಟ್ರ ಸೇನೆಯ ಜಿಲ್ಲಾಧ್ಯಕ್ಷ ಶ್ರೀ. ರವಿ ಕೋಕಿತಕರ ಮಾಹಿತಿ ನೀಡಿದರು.
‘ಪ್ರತಿ ಭಾನುವಾರ ನಿಯಮಿತವಾಗಿ ಇಂತಹ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ’, ಎಂದು ಪೊಲೀಸ್ ಮತ್ತು ಪಾದ್ರಿ ಲಿಮಾ ಚೇರಿಯನ್ ಇವರು ಮಾಹಿತಿ ನೀಡಿದರು.