ಮಹೊಬಾ (ಉತ್ತರಪ್ರದೇಶ) ಇಲ್ಲಿ ದೇವಸ್ಥಾನದ ಸಾಯಿಬಾಬಾ ಮೂರ್ತಿ ತೆರವುಗೊಳಿಸಿ ದರ್ಗಾ ಕಟ್ಟುವ ಪ್ರಯತ್ನ !

ಪೊಲೀಸರು ಕ್ರಮಕೈಗೊಂಡು ಪುನಃ ಮೂರ್ತಿಯ ಸ್ಥಾಪನೆ !

ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗಲೂ ಸಮಾಜಘಾತಕರು ಹೇಗೆ ಸಾಹಸ ಮಾಡುತ್ತಾರೆ ?- ಸಂಪಾದಕರು 

ಸಾಯಿಬಾಬಾ ಮೂರ್ತಿಯನ್ನು ತೆರವುಗೊಳಿಸಿ ಅಲ್ಲಿ ದರ್ಗಾ ನಿರ್ಮಿಸಲಾಗಿದೆ

ಮಹೊಬ (ಉತ್ತರಪ್ರದೇಶ) – ಇಲ್ಲಿಯ ಬುಹೇರಾ ಗ್ರಾಮದಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ಮೂರ್ತಿಯನ್ನು ತೆರವುಗೊಳಿಸಿ ಅಲ್ಲಿ ರಾತ್ರಿಯ ಸಮಯದಲ್ಲಿ ಅಜ್ಞಾತರಿಂದ ದರ್ಗಾ ಮಾಡಲಾಗಿತ್ತು. ದೇವಸ್ಥಾನಕ್ಕೆ ಹಸಿರು ಬಣ್ಣ ಮತ್ತು ಹಸಿರು ಬಾವುಟಗಳನ್ನು ಕಟ್ಟಿ ದೇವಸ್ಥಾನದ ಸ್ವರೂಪವನ್ನೇ ಬದಲಾಯಿಸಲಾಗಿತ್ತು. ಬೆಳಿಗ್ಗೆ ಈ ಘಟನೆ ಗಮನಕ್ಕೆ ಬಂದ ನಂತರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿ ಪೋಲಿಸರಿಂದ ಕ್ರಮಕೈಗೊಂಡು ದೇವಸ್ಥಾನದಲ್ಲಿ ಪುನಃ ಸಾಯಿಬಾಬಾರವರ ಮೂರ್ತಿ ಸ್ಥಾಪಿಸಲಾಯಿತು ಮತ್ತು ದೇವಸ್ಥಾನಕ್ಕೆ ಬಿಳಿ ಬಣ್ಣ ಹಚ್ಚಿ ಹಸಿರು ಬಾವುಟಗಳನ್ನು ತೆಗೆದುಹಾಕಲಾಯಿತು.