ಅಪಹರಣವಾದ ಬಾಲಕಿಯ ಕುಟುಂಬದವರಿಗೇ, ಅಪಹರಣಕಾರರ ಸ್ಥಳ ಮತ್ತು ವಿಳಾಸ ನೀಡಿ ಬಾಲಕಿಯನ್ನು ಕರೆತರಲು ಹೇಳುವ ಮತ್ತು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳುವ ಭ್ರಷ್ಟ ಪೊಲೀಸರು ಮತ್ತು ಹಿಂದುತ್ವನಿಷ್ಠ ಸಂಘಟನೆಯು ಮಾಡಿದ ಪ್ರಯತ್ನ !

ಮತಾಂಧನು ಅಪಹರಿಸಿದ ಅಪ್ರಾಪ್ತ ಹಿಂದೂ ಬಾಲಕಿಯ ಬಿಡುಗಡೆ ಪ್ರಕರಣದಲ್ಲಿ ಪೊಲೀಸರ ಬಗ್ಗೆ ಬಂದ ಕಹಿ ಅನುಭವ

‘ಒಂದು ರಾಜ್ಯದ ನಗರವೊಂದರಲ್ಲಿ ಮತಾಂಧ ವ್ಯಕ್ತಿಯು ಓರ್ವ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿದನು. ‘ಲವ್ ಜಿಹಾದ್’ನ ಈ ಪ್ರಕರಣದಲ್ಲಿ ಪೀಡಿತ ಹಿಂದೂ ಬಾಲಕಿಯ ಕುಟುಂಬದವರು ಪೊಲೀಸರಲ್ಲಿ ದೂರು ನೀಡಿದಾಗ ಪೊಲೀಸರು ಅವರಿಗೆ ಸಹಾಯ ಮಾಡುವ ಬದಲು, ತನಿಖೆಯನ್ನು ಮಾಡಲು ಮೈಗಳ್ಳತನ ಮಾಡಿ ಒಂದು ರೀತಿಯಲ್ಲಿ ‘ಲವ್ ಜಿಹಾದ್’ಗೆ ಕುಮ್ಮಕ್ಕು ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ಪೀಡಿತ ಹಿಂದೂ ಬಾಲಕಿಯನ್ನು ತತ್ಪರತೆಯಿಂದ ಹುಡುಕಲೇ ಇಲ್ಲ; ಅಲ್ಲದೇ ಮತಾಂಧನ ವಿರುದ್ಧ ‘ಪೊಕ್ಸೋ’ (Protection of Children from Sexual Abuse), ಬಾಲಲೈಂಗಿಕ ಶೋಷಣೆ ಪ್ರತಿಬಂಧಕ) ಕಾನೂನಿನ ಅಂತರ್ಗತ ಸಾಮಾನ್ಯ ಅಪರಾಧವನ್ನೂ ದಾಖಲಿಸಲಿಲ್ಲ. ಬದಲಾಗಿ ‘ಬಾಲಕಿ ತಾನಾಗಿಯೇ ಮತಾಂಧನೊಂದಿಗೆ ಓಡಿ ಹೋಗಿದ್ದಾಳೆ’, ಎಂದು ಸುಳ್ಳು ಹೇಳಿ ಪ್ರಕರಣದ ಗಾಂಭೀರ್ಯವನ್ನು ಕಡಿಮೆ ಮಾಡಿದರು, ಹಾಗೆಯೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ನುಣುಚಿಕೊಂಡರು. ಒಟ್ಟಾರೆ ಇವೆಲ್ಲ ಘಟನಾವಳಿಗಳಲ್ಲಿ ಹಿಂದೂ ಬಾಲಕಿಯ ಕುಟುಂಬದವರಿಗೆ ಪೊಲೀಸರ ಬಗ್ಗೆ ಬಂದ ಕಹಿ ಅನುಭವವನ್ನು ಇಲ್ಲಿ ನೀಡುತ್ತಿದ್ದೇವೆ.

೧. ಪೊಲೀಸರು ಅಪಹರಣವಾಗಿರುವ ಬಾಲಕಿಯ ಸಂಬಂಧಿಕರಿಗೆ ಅಪಹರಣಕಾರನ ಸ್ಥಳ ಮತ್ತು ವಿಳಾಸವನ್ನು ನೀಡಿ ಬಾಲಕಿಯನ್ನು ಕರೆತರಲು ಹೇಳುವುದು

ಅಪ್ರಾಪ್ತ ಬಾಲಕಿಯ ಅಪಹರಣದ ಪ್ರಕರಣದಲ್ಲಿ ಬಾಲಕಿಯ ಪಾಲಕರು ಓರ್ವ ಮತಾಂಧನ ಬಗ್ಗೆ ಸಂದೇಹ ವ್ಯಕ್ತಪಡಿಸಿದಾಗ ಪೊಲೀಸರು ಆ ಮತಾಂಧನಿರುವ ಸ್ಥಳ ಮತ್ತು ವಿಳಾಸವನ್ನು ಹುಡುಕಿದರು; ಆದರೆ ತಾವು ಸ್ವತಃ ಹೋಗಿ ತನಿಖೆಯನ್ನು ಮಾಡದೇ ಬಾಲಕಿಯ ಸಂಬಂಧಿಕರಿಗೇ ವಿಳಾಸವನ್ನು ನೀಡಿ ಅಲ್ಲಿಂದ ಬಾಲಕಿಯನ್ನು ಕರೆದುಕೊಂಡು ಬರಲು ಹೇಳಿದರು. ಬಾಲಕಿಯ ಅಸಹಾಯಕ ಸಂಬಂಧಿಕರು ಪೊಲೀಸರು ಹೇಳಿದ ಸ್ಥಳಕ್ಕೆ ಹೋದರು, ಆದರೆ ಅಲ್ಲಿದ್ದ ವ್ಯಕ್ತಿಯು ಬಾಲಕಿಯು ಅಲ್ಲಿ ಇಲ್ಲವೆಂದು ಹೇಳಿ ಸಂಬಂಧಿಕರನ್ನು ಹಿಂದೆ ಕಳುಹಿಸಿದನು.

ಹೀಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸದಿರುವ ಪೊಲೀಸರು ಜನರಿಗೆ ಆಧಾರವೆನಿಸಬಹುದೇ ? ಅಪಹರಣಕಾರರು ಪೊಲೀಸರಿಗೆ ಬೆಲೆ ಕೊಡುವರೋ ಅಥವಾ ಸರ್ವಸಾಮಾನ್ಯ ನಾಗರಿಕರಿಗೆ ಬೆಲೆ ಕೊಡುವರೋ ? ‘ಅಪ್ರಾಪ್ತ ಬಾಲಕಿಯ ಅಪಹರಣದ ಸಂಶಯವಿರುವ ವ್ಯಕ್ತಿಯನ್ನು ಕೇಳಿದರೆ, ಅವನು ‘ಹೌದು, ‘ಬಾಲಕಿ ನಮ್ಮ ಬಳಿ ಇದ್ದಾಳೆ’, ಎಂದು ಹೇಳಿ ಅವಳನ್ನು ಸಂಬಂಧಿಕರಿಗೆ ಒಪ್ಪಿಸುವನು’ ಎಂದು ತಿಳಿಯುವ ಪೊಲೀಸರ ಹುಚ್ಚು ತಿಳುವಳಿಕೆಗೆ ಏನು ಹೇಳಬೇಕು ? ಅಥವಾ ಇದು ಸಾಮಾನ್ಯಜ್ಞಾನದ (ಕಾಮನ್‌ಸೆನ್ಸ) ಅಭಾವ ಎಂದು ಹೇಳಬೇಕೇ ?, ಎಂಬ ಪ್ರಶ್ನೆಯು ಯಾರಿಗಾದರೂ ಮೂಡಬಹುದು !

೨ . ಬಾಲಕಿಯ ಕುಟುಂಬದವರು ಮನವಿಯನ್ನು ನೀಡಿದ ನಂತರವೂ ಪೊಲೀಸರು ಬಾಲಕಿಯನ್ನು ಹುಡುಕಿ ತರಲು ಅವರಿಗೇ ಹೇಳುವುದು

ಈ ಸಂದರ್ಭದಲ್ಲಿ ಕೆಲವು ದಿನಗಳ ನಂತರ ಬಾಲಕಿಯ ಕುಟುಂಬದವರು ಪುನಃ ಪೊಲೀಸ್ ಠಾಣೆಗೆ ಹೋಗಿ ಮತಾಂಧನನ್ನು ಹುಡುಕಲು ಮನವಿಯನ್ನು ನೀಡಿದರು ಮತ್ತು ಇನ್ನೋರ್ವ ಮತಾಂಧನ ಬಗ್ಗೆ ಸಂಶಯವನ್ನು ವ್ಯಕ್ತಪಡಿಸಿದರು. ಅದಕ್ಕೆ, ತನಿಖೆಗೆ ವೇಗ ನೀಡುವ ಬದಲು ಪೊಲೀಸರು ಬಾಲಕಿಯ ಕುಟುಂದವರಿಗೇ ‘ಒಂದು ವಾಹನದ ವ್ಯವಸ್ಥೆ ಮಾಡಿಕೊಂಡು ನೀವು ಬಾಲಕಿಯನ್ನು ಕರೆದುಕೊಂಡು ಬನ್ನಿ’, ಎಂದು ಹೇಳಿದರು. ‘ನಾವೂ ಪ್ರಯತ್ನಿಸುತ್ತಿದ್ದೇವೆ. ನೀವು ಸಹ ಪ್ರಯತ್ನಿಸಿರಿ’, ಎಂದು ಹೇಳಿ ಬಾಲಕಿಯ ಕುಟುಂಬದವರನ್ನು ಕಳುಹಿಸಿದರು.

ವಾಸ್ತವದಲ್ಲಿ ಆರೋಪಿಗೆ ಬೇಡಿಯನ್ನು ತೊಡಿಸಲು ಹೋಗಲು ಪೊಲೀಸರ ಬಳಿ ವಾಹನವಿಲ್ಲವೇ ? ಒಂದು ವೇಳೆ ಕುಟುಂಬದವರೇ ಬಾಲಕಿಯನ್ನು ಹುಡುಕುವುದಿದ್ದರೆ ಮತ್ತು ಅಲ್ಲಿಯವರೆಗೆ ತಲುಪಲು ಕುಟುಂಬದವರೇ ಪ್ರಯತ್ನಿಸಬೇಕಿದ್ದರೆ, ಪೊಲೀಸರ ಕೆಲಸವೇನು ? ಇಂತಹ ಮೈಗಳ್ಳ ಪೊಲೀಸರಿಂದಾಗಿಯೇ ಪೊಲೀಸ್ ದಳದ ತೇಜೋವಧೆಯಾಗುತ್ತಿದೆ, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ?

೩. ಹಿಂದುತ್ವನಿಷ್ಠ ಸಂಘಟನೆಯು ಹಿರಿಯ ಪೊಲೀಸರಲ್ಲಿ ಈ ಪ್ರಕರಣದ ಬಗ್ಗೆ ಹೇಳಿದ ನಂತರವೂ ಪೊಲೀಸರು ವಾಹನದ ವ್ಯವಸ್ಥೆ ಮಾಡಿಕೊಡಲು ಬಾಲಕಿಯ ಕುಟುಂಬದವರಿಗೇ ಹೇಳುವುದು

ಪೊಲೀಸರಿಂದ ನ್ಯಾಯ ದೊರಕುವ ಯಾವುದೇ ಸಾಧ್ಯತೆ ಕಾಣಿಸದಿದ್ದಾಗ ಬಾಲಕಿಯ ಕುಟುಂಬದವರು ಓರ್ವ ಹಿಂದುತ್ವನಿಷ್ಠ ಸಂಘಟನೆಯ ಬಳಿ ಅಡಚಣೆಯನ್ನು ಹೇಳಿದರು. ಸಂಘಟನೆಯ ಓರ್ವ ಕಾರ್ಯಕರ್ತನು ಸಾಮಾಜಿಕ ಮಾಧ್ಯಮಗಳ ಮೂಲಕ ಹಿರಿಯ ಪೊಲೀಸರ ಬಳಿ ಈ ಪ್ರಕರಣದ ಬಗ್ಗೆ ತಿಳಿಸಿದಾಗ ಸ್ಥಳೀಯ ಪೊಲೀಸರು ಸಕ್ರಿಯರಾದರು; ಆದರೆ ಅವರು ಪುನಃ ಕುಟುಂಬದವರಿಗೇ ವಾಹನದ ವ್ಯವಸ್ಥೆಯನ್ನು ಮಾಡಲು ಹೇಳಿದರು.

೪. ಮತ್ತೊಮ್ಮೆ ಮನವಿಯನ್ನು ನೀಡಿದ ಬಳಿಕ ಪೊಲೀಸರು ವಿಷಯವನ್ನು ಗಾಂಭೀರ್ಯದಿಂದ ತೆಗೆದುಕೊಂಡು ಆರೋಪಿಯನ್ನು ಪತ್ತೆ ಹಚ್ಚುವುದು

ಆ ಸಮಯದಲ್ಲಿ ಮತಾಂಧನ ವಾಸ್ತವ್ಯದ ಸ್ಥಳವು ಬಾಲಕಿಯ ಊರಿನಿಂದ ೧ ಸಾವಿರ ಕಿಲೋಮೀಟರನಷ್ಟು ದೂರವಿತ್ತು. ಅಲ್ಲಿಗೆ ಹೋಗಲು ವಾಹನದ ವ್ಯವಸ್ಥೆಯನ್ನು ಮಾಡಲು ಕುಟುಂಬದವರ ಆರ್ಥಿಕ ಕ್ಷಮತೆ ಇಲ್ಲದಿರುವ ಬಗ್ಗೆ ಮನವಿಯನ್ನು ನೀಡಿದ ನಂತರ ಹಿರಿಯ ಪೊಲೀಸರು ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ಪೊಲೀಸರು ೨ ತಂಡಗಳನ್ನು ರಚಿಸಿ ಮತಾಂಧ ಆರೋಪಿಯನ್ನು ಪತ್ತೆ ಹಚ್ಚಿದರು ಮತ್ತು ಅಪ್ರಾಪ್ತ ಬಾಲಕಿಯನ್ನು ಮತಾಂಧನ ಬಂಧನದಿಂದ ಮುಕ್ತ ಮಾಡಿದರು. ಈ ಪ್ರಕರಣದಲ್ಲಿ ಮುಂದಿನ ಕಾನೂನು ಕಾರ್ಯಾಚರಣೆ ನಡೆದಿದೆ.

೫. ಬಾಲಕಿಯ ಅಪಹರಣವಾಗಿದ್ದರೂ ಪೊಲೀಸರು ತನಿಖೆ ಮಾಡುವುದನ್ನು ತಪ್ಪಿಸಲು ಸುಳ್ಳು ಹೇಳುವುದು

ಎಲ್ಲಕ್ಕಿಂತ ಗಂಭೀರ ವಿಷಯವೆಂದರೆ, ‘ಈ ಪ್ರಕರಣ ಬೆಳೆಯ ಬಾರದೆಂದು, ಬಾಲಕಿಯು ತಾನಾಗಿಯೇ ಹುಡುಗನೊಂದಿಗೆ ಹೋಗಿದ್ದಳು’, ಎಂದು ಪೊಲೀಸರು ಹೇಳಿದರು. ವಾಸ್ತವದಲ್ಲಿ ಅಪ್ರಾಪ್ತ ಬಾಲಕಿಯು ಮತಾಂಧನೊಂದಿಗೆ ಓಡಿ ಹೋದ ತಕರಾರು ಬಂದಾಗ ಪೊಲೀಸರು ಮತಾಂಧನ ವಿರುದ್ಧ ‘ಪೋಕ್ಸೊ’ ಕಾಯದೆಯ ಅಡಿ ಅಪರಾಧವನ್ನು ದಾಖಲಿಸಿ ತತ್ಪರತೆಯಿಂದ ತನಿಖೆಯನ್ನು ಮಾಡುವುದು ಅಪೇಕ್ಷಿತವಿತ್ತು. ಯಾವುದೇ ಅಪ್ರಾಪ್ತ ಬಾಲಕಿಯು ಸ್ವತಃ ನಿರ್ಣಯವನ್ನು ತೆಗೆದುಕೊಳ್ಳಲು ಸಕ್ಷಮವಿರುವುದಿಲ್ಲ. ಇಂತಹ ಸಮಯದಲ್ಲಿ ಅಪ್ರಾಪ್ತ ಬಾಲಕಿಯು ತಾನಾಗಿಯೇ ಓಡಿಹೋಗಿದ್ದಾಳೆ ಎಂದು ಹೇಳುವುದಕ್ಕೆ ಪೊಲೀಸರ ಕಾನೂನಿನ ಬಗೆಗಿನ ಅಜ್ಞಾನವೆನ್ನಬೇಕೇ ಅಥವಾ ಪರಾಕಾಷ್ಠೆಯ ಸಂವೇದನಾಶೂನ್ಯತೆ ಎನ್ನಬೇಕೇ ? ಪೊಲೀಸರ ಇಂತಹ ವೃತ್ತಿಯಿಂದ ಜನತೆಗೆ ಎಂದಾದರೂ ಪೊಲೀಸರ ಆಧಾರವೆನಿಸಬಹುದೇ ? ಈ ಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದು ಆವಶ್ಯಕ.’

– ಓರ್ವ ಧರ್ಮಪ್ರೇಮಿ

ಸಾಧಕರಿಗೆ ಸೂಚನೆ ಮತ್ತು ವಾಚಕರು ಮತ್ತು ಹಿತಚಿಂತಕರಿಗೆ ವಿನಂತಿ !

ಪೊಲೀಸರು ಮತ್ತು ಆಡಳಿತದವರ ಬಗ್ಗೆ ಬರುವ ಕಟು ಅನುಭವಗಳನ್ನು ತಿಳಿಸಿರಿ !

ಪೊಲೀಸರು ಮತ್ತು ಆಡಳಿತದವರ ಬಗ್ಗೆ ಕಟು ಅನುಭವಗಳು ಬಂದಿದ್ದರೆ ಅವುಗಳನ್ನು ಕೆಳಗೆ ನೀಡಿದ ವಿಳಾಸಕ್ಕೆ ಕಳುಹಿಸಿರಿ.

ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ, ಛಿ/o ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ.

ಸಂಪರ್ಕ ಕ್ರಮಾಂಕ : 9595984844

ವಿ-ಅಂಚೆ : [email protected]