ರೈತರ ಆಂದೋಲನ ಮತ್ತು ಲಖೀಂಪುರ ಪ್ರಕರಣದ ವೈಭವೀಕರಣ !

ಲಖೀಂಪುರದಲ್ಲಿ ನಡೆದ ಹಿಂಸಾಚಾರ

೧. ಲಖೀಂಪುರದ ರೈತರ ಹತ್ಯೆ ಪ್ರಕರಣದ ಘಟನಾವಳಿಗಳನ್ನು ನೋಡಿದಾಗ ಇದೆಲ್ಲ ಪೂರ್ವನಿಯೋಜಿತ ಎಂಬ ಸಂದೇಹ ಮೂಡುವುದು ಸಹಜ

‘ರೈತರ ಪ್ರತಿಭಟನೆಯ ಸಮಯದಲ್ಲಿ ಲಖೀಂಪುರದಲ್ಲಾದ ಹಿಂಸಾಚಾರದಲ್ಲಿ ಚತುಷ್ಚಕ್ರ ವಾಹನವನ್ನು ಹರಿಸಿದ್ದರಿಂದ ೪ ಮಂದಿ ರೈತರು ಸಾವನ್ನಪ್ಪಿದರು’, ಎಂದು ವರದಿಯಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹರಾಜ್ಯ ಸಚಿವರಾದ ಅಜಯ ಮಿಶ್ರಾರ ಮಗ ಆಶಿಷ ಮಿಶ್ರಾರನ್ನು ಯಾವಾಗ ಬಂಧಿಸುವಿರಿ ?’, ಎಂದು ಸರ್ವೋಚ್ಚ ನ್ಯಾಯಾಲಯವು ವಿಚಾರಿಸಿತು. ತದನಂತರ  ಅಕ್ಟೋಬರ್ ೯ ರ ತಡರಾತ್ರಿ ಆಶಿಷ ಮಿಶ್ರಾ ಪೊಲೀಸರಿಗೆ ಶರಣಾದರು. ಮರುದಿನ ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತು. ಈ ವಿಷಯದ ಮೇಲೆ ದೊಡ್ಡ ಮಟ್ಟದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿವಾಹಿನಿಗಳು ನಿರಂತರವಾಗಿ ಸುದ್ದಿಗಳನ್ನು ಭಿತ್ತರಿಸುತ್ತಿವೆ. ಅಲ್ಲದೇ ಇದನ್ನು ಪ್ರತಿಭಟಿಸಲು ಎಲ್ಲ ವಿಪಕ್ಷಗಳು ಒಟ್ಟಾಗಿವೆ. ಎಲ್ಲ ಘಟನಾವಳಿಗಳನ್ನು ನೋಡಿದರೆ ‘ಈ ಘಟನೆಗಳು ಪೂರ್ವನಿಯೋಜಿತವಾಗಿದೆಯೇ ?’, ಎನ್ನುವ ಸಂಶಯ ಮೂಡುತ್ತದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೨. ಕೃಷಿ ಕಾನೂನಿನ ವಿರುದ್ಧವಲ್ಲ; ರಾಷ್ಟ್ರವಿರೋಧಿ ಎಂದೆನಿಸುವ ರೈತ ಆಂದೋಲನ !

ಕಳೆದ ೧೦ ತಿಂಗಳುಗಳಿಂದ ದೆಹಲಿಯಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳು ಮುಂದುವರಿದಿವೆ. ಈ ಪ್ರತಿಭಟನೆಯ ಭಾಗವೆಂದು ದೆಹಲಿ ನಗರದ ಎಲ್ಲ ಪ್ರವೇಶದ್ವಾರಗಳನ್ನು ಅಡ್ಡಗಟ್ಟಲಾಗಿದೆ. ಜನಸಾಮಾನ್ಯರು ಇದರಿಂದ ವಿನಾಕಾರಣ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮೊದಲು ಕಚೇರಿಯಿಂದ ಮನೆ ಬರಲು ತಗಲುತ್ತಿದ್ದ ೨ ಕಿ.ಮೀ. ಅಂತರ ಈಗ ೨೦ ಕಿ.ಮೀ.ಗಳಷ್ಟು ಆಗಿದೆ. ಈ ತಥಾಕಥಿತ ರೈತ ಆಂದೋಲನಕ್ಕೆ ಸರ್ವೋಚ್ಚ ನ್ಯಾಯಾಲಯವೂ ಅನೇಕ ಬಾರಿ ಛೀಮಾರಿ ಹಾಕಿದೆ. ಈ ವಿಷಯದಲ್ಲಿ ನೇಮಿಸಲಾಗಿದ್ದ ಸಮಿತಿಯೊಂದಿಗೆ ಚರ್ಚಿಸಲು ರೈತ ಮುಖಂಡರನ್ನು ಅನೇಕ ಸಲ ಆಹ್ವಾನಿಸಲಾಗಿದ್ದರೂ ಅವರು ಬರಲಿಲ್ಲ. ಅವರು ಒಂದು ರೀತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತಿಲ್ಲ, ಬದಲಾಗಿ ಅವಮಾನಿಸಿದ್ದಾರೆ.

ಸರದಾರ ವಲ್ಲಭಭಾಯಿ ಪಟೇಲರು ಬ್ರಿಟಿಷರ ಆಳ್ವಿಕೆಯ ವಿರುದ್ಧ ಬಾರಡೊಲಿಯಲ್ಲಿ ನಡೆಸಿದ ರೈತ ಆಂದೋಲನವನ್ನು ನಾವು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕಾಗಿದೆ. ಸರದಾರ ಪಟೇಲರು ಶೇ. ೮೦ ರಷ್ಟು ರೈತರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಲು ಈ ಆಂದೋಲನವನ್ನು ಮಾಡಿದ್ದರು. ಎಲ್ಲಿ ಆ ಆಂದೋಲನ ಮತ್ತು ಎಲ್ಲಿ ಈಗ ನಡೆದಿರುವ ಖಲಿಸ್ತಾನಿ ಭಯೋತ್ಪಾದಕ ಪ್ರಾಯೋಜಿತ ಆಂದೋಲನ ? ಇವೆರಡೂ ಆಂದೋಲನಗಳನ್ನು ಹೋಲಿಸಿದಾಗ ಗಮನಕ್ಕೆ ಬರುವುದೆಂದರೆ, ವಿರೋಧಿಗಳಿಗೆ ಭಾರತವು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಈ ಕಾರಣದಿಂದ ಕಳೆದ ೧೦ ತಿಂಗಳುಗಳಿಂದ ದೇಶದಲ್ಲಿ ಮತ್ತು ಹಿಂದೂಗಳ ವಿರುದ್ಧ ಈ ಹಿಂಸಾಚಾರ ಮುಂದುವರೆದಿದೆ.

೩. ದೇಶದಲ್ಲಿ ಭಯೋತ್ಪಾದಕರಿಂದ ಹತ್ಯಾಸರಣಿಯೇ ನಡೆಯುತ್ತಿರುವಾಗ ಲಖೀಂಪುರ ಪ್ರಕರಣಕ್ಕೆ ಮಾತ್ರ ವಿಶೇಷ ಮಹತ್ವವನ್ನು ನೀಡುತ್ತಿರುವುದು

ಲಖೀಂಪುರ ಹಿಂಸಾಚಾರದ ವಿರುದ್ಧ ೧೮ ಅಕ್ಟೋಬರ್ ೨೦೨೧ ರಂದು ದೇಶವ್ಯಾಪಿ ‘ರೈಲು ತಡೆ’ ಆಂದೋಲನವನ್ನು ಆಯೋಜಿಸಲಾಗಿತ್ತು. ಕಳೆದ ೮ ದಿನಗಳಿಂದ ಜಮ್ಮೂ-ಕಾಶ್ಮೀರದಲ್ಲಿ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಲಾಗುತ್ತಿದೆ. ಅಲ್ಲಿ ೩ ದಿನಗಳಲ್ಲಿ ೭ ವ್ಯಕ್ತಿಗಳನ್ನು ಹತ್ಯೆ ಮಾಡಲಾಯಿತು. ಹತ್ಯೆಗೀಡಾದವರಲ್ಲಿ ‘ಮೆಡಿಕಲ್ ಅಸೋಸಿಯೇಷನ್ನ’ ಹಿಂದೂ ಗೃಹಸ್ಥರೂ ಒಬ್ಬರಾಗಿದ್ದರು. ಅವರ ಕುಟುಂಬವು ಕಳೆದ ೮೦ ರಿಂದ ೯೦ ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ವಾಸಿಸುತ್ತಿತ್ತು. ೧೯೯೦ ನೇ ಇಸವಿಯಲ್ಲಿ ನಡೆದ ಹಿಂದೂಗಳ ನರಮೇಧದ ಸಮಯದಲ್ಲಿ ಲಕ್ಷಾಂತರ ಹಿಂದೂಗಳು ತಮ್ಮ ಕರ್ಮಭೂಮಿ ಮತ್ತು ಮಾತೃಭೂಮಿಯಿಂದ ಪಲಾಯನ ಮಾಡಬೇಕಾಯಿತು. ಆಗಲೂ ಈ ಧರ್ಮಾಭಿಮಾನಿ ಗೃಹಸ್ಥರು ಕಾಶ್ಮೀರವನ್ನು ಬಿಟ್ಟಿರಲಿಲ್ಲ. ಈ ಕಾರಣದಿಂದ ಅವರನ್ನು ಹತ್ಯೆ ಮಾಡಲಾಯಿತು. ಒಂದು ಶಾಲೆಯ ಸಿಕ್ಖ್ ಮಹಿಳಾ ಮುಖ್ಯೋಪಾದಾಯಿನಿ ಸುಖವಿಂದರ ಕೌರ ಮತ್ತು ಹಿಂದೂ ಸಹಶಿಕ್ಷಕ ಇವರ ಹತ್ಯೆಯಾಯಿತು. ಸುಮಾರು ೭ ಅಮಾಯಕ ಹಿಂದೂಗಳ ಹತ್ಯೆಯನ್ನು ಮಾಡಲಾಯಿತು. ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮಾಡಲಾಗಿದೆ.

ಇದರಿಂದ ಗಮನಕ್ಕೆ ಬರುವುದೆಂದರೆ, ಯಾವ ರೀತಿ ಅಮೇರಿಕಾದ ಸೈನ್ಯವು ಅಫಘಾನಿಸ್ತಾನದಿಂದ ಹಿಂದಿರುಗಿದ ಬಳಿಕ ಆಸುರಿ ಪ್ರವೃತ್ತಿಯ ಮತಾಂಧರು ಅಲ್ಪಸಂಖ್ಯಾತರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಾರಂಭಿಸಿದರೋ, ಅದೇ ರೀತಿ ಮತಾಂಧ ಜಿಹಾದಿ ಭಯೋತ್ಪಾದಕರು ಭಾರತದ ವಿರುದ್ಧ ಪರೋಕ್ಷವಾಗಿ ಯುದ್ಧವನ್ನೇ ಸಾರಿದ್ದಾರೆ. ತಾಲಿಬಾನಿಗಳ ಕುಮ್ಮಕ್ಕಿನಿಂದ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗಳಾಗುತ್ತಿವೆ.

೪. ಲಖೀಂಪುರ ಪ್ರಕರಣದಲ್ಲಿ ‘ಭಾರತ ಬಂದ್’ ನಡೆಸುವ ವಿರೋಧಿಗಳು ಭಯೋತ್ಪಾದಕರು ಸೈನಿಕರನ್ನು ಹತ್ಯೆ ಮಾಡಿದಾಗ ಏಕೆ ಬಂದ್ ಘೋಷಿಸುವುದಿಲ್ಲ ?

ಅಕ್ಟೋಬರ್ ೧೧ ರಂದು ಕಾಶ್ಮೀರದ ಪೂಂಛ ಸೆಕ್ಟರ್‌ದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಘರ್ಷಣೆಯಲ್ಲಿ ಒಬ್ಬ ನಾಯಕ ಸುಬೇದಾರನ ಸಹಿತ ೫ ಜನ ಸೈನಿಕರು ಹುತಾತ್ಮರಾದರು. ತದನಂತರ ಎರಡು ದಿನಗಳಲ್ಲಿ ಪುನಃ ಇಬ್ಬರು ಭಾರತೀಯ ಸೈನಿಕರು ಹುತಾತ್ಮರಾದರು. ಇದು ಭಾರತದಂತಹ ಬಲಿಷ್ಠ ರಾಷ್ಟ್ರಕ್ಕೆ ಸವಾಲೊಡ್ಡುವ ಉದ್ದೇಶದಿಂದ ನಡೆಸಿದ ಆಕ್ರಮಣವೇ ಆಗಿದೆ. ತಾಲಿಬಾನ್‌ಗೆ ಅಫಘಾನಿಸ್ತಾನದ ಅಧಿಕಾರ ಸಿಕ್ಕ ಬಳಿಕ ಅದು ‘ಮಿಷನ ಇಂಡಿಯಾ’ ಮೂಲಕ ಹಿಂದೂ ಮತ್ತು ಭಾರತದ ವಿರುದ್ಧ ಸಮರ ಸಾರಿದೆ. ಇದರಿಂದ ಭಾರತದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿವೆ. ಕಲಂ ೩೭೦ ನ್ನು ರದ್ದುಗೊಳಿಸಿದ ಬಳಿಕ ಹಿಂದೂಗಳಿಗೆ ಅವರ ಭೂಮಿ ಮರಳಿ ಸಿಗುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಇದರ ಸೇಡು ತೀರಿಸಿಕೊಳ್ಳಲು ಭಯೋತ್ಪಾದಕರು ಇಂತಹ ದಾಳಿ ನಡೆಸುತ್ತಿದ್ದಾರೆ. ದೇಶದ ೭ ಸೈನಿಕರು ಹುತಾತ್ಮರಾಗುವುದು, ದೇಶಕ್ಕಾದ ಬಹುದೊಡ್ಡ ಹಾನಿಯಾಗಿದೆ. ಈ ಬಗ್ಗೆ ವಿರೋಧಿಗಳು ಏಕೆ ಭಾರತ ಬಂದ್ ಮಾಡುತ್ತಿಲ್ಲ ? ಎಲ್ಲ ಪಕ್ಷದವರು ‘ರೈಲು ತಡೆ’ ಏಕೆ ಮಾಡುತ್ತಿಲ್ಲ ?ಈ ಘಟನೆಯ ವಿರುದ್ಧ ದೇಶಾದ್ಯಂತ ಪ್ರಜಾಪ್ರಭುತ್ವದ ಮಾರ್ಗದಿಂದ ಏಕೆ ಖಂಡಿಸುತ್ತಿಲ್ಲ ? ಕಾರಣ ಬಹಳ ಸರಳವಾಗಿದೆ. ಈ ಹೋರಾಟ ಮತಾಂಧರೊಂದಿಗೆ ಇದೆ. ಅವರನ್ನು ಓಲೈಸಿ ಅಧಿಕಾರಕ್ಕೆ ಬರುವುದೊಂದೇ ಗುರಿಯನ್ನು ಹೊಂದಿರುವಾಗ ಅವರ ವಿರುದ್ಧ ‘ಚಕಾರ’ ಎತ್ತಲು ಬರುವುದಿಲ್ಲ. ಕಳೆದ ೭೫ ವರ್ಷಗಳಲ್ಲಿ ಕೇವಲ ಒಬ್ಬ ಸೈನಿಕ ಹುತಾತ್ಮನಾದರೂ ಆ ಬಗ್ಗೆ ದೇಶಾದ್ಯಂತ ಪ್ರಜಾಪ್ರಭುತ್ವ ಮಾರ್ಗದಿಂದ ಖಂಡನೆ ವ್ಯಕ್ತವಾಗಿದ್ದಿದ್ದರೆ, ಇಂದು ಈ ಕಾಶ್ಮೀರ ಸಮಸ್ಯೆ ಇರುತ್ತಿರಲಿಲ್ಲ ಹಾಗೂ ಮತಾಂಧರ ಭಯೋತ್ಪಾದಕ ಕೃತ್ಯಗಳು ಜರುಗುತ್ತಿರಲಿಲ್ಲ.

೫. ಮಾದಕ ದ್ರವ್ಯ ನಿಗ್ರಹ ಸಂಸ್ಥೆ (ಎನ್.ಸಿ.ಬಿ) ಮತಾಂಧ ನಟನ ಮಗನನ್ನು ಬಂಧಿಸಿತು; ಆದರೆ ಯಾರೂ ಮಾದಕ ದ್ರವ್ಯ ನಿಗ್ರಹ ಸಂಸ್ಥೆಯನ್ನು ಬೆಂಬಲಿಸದಿರುವುದು

ಮಹಾರಾಷ್ಟ್ರದಲ್ಲಿ ನಟ ಶಾರೂಖ ಖಾನನ ಪುತ್ರನನ್ನು ಐಷಾರಾಮಿ ಕ್ರೂಝ್‌ನಲ್ಲಿ ಮಾದಕ ದ್ರವ್ಯ ಸೇವನೆಯ ಪ್ರಕರಣದಲ್ಲಿ ಮಾದಕ ದ್ರವ್ಯ ನಿಗ್ರಹ ಸಂಸ್ಥೆಯು ಬಂಧಿಸಿತು. ಈ ವಿಷಯದಲ್ಲಿ ಮತಾಂಧರು ಗಲಾಟೆ ಮಾಡಿದರು. ಈ ಪ್ರಕರಣದಲ್ಲಿ ಶಾರೂಖನ ಸಮರ್ಥಕರು, ತಥಾಕಥಿತ ಪ್ರಗತಿಪರರು, ಸ್ವಯಂಘೋಷಿತ ಇತಿಹಾಸ ತಜ್ಞರು, ಸುದ್ದಿವಾಹಿನಿಗಳು ಮತ್ತು ವಿಪಕ್ಷದ ಮುಖಂಡರು ಇದನ್ನು ಕೇವಲ ಖಂಡಿಸಿ ಸುಮ್ಮನಾಗದೇ ‘ಚಲನಚಿತ್ರ ನಟನ ಪುತ್ರ ಅನ್ಯ ಮತೀಯನಾಗಿದ್ದಾನೆ; ಆದ್ದರಿಂದ ಅವನನ್ನು ಬಂಧಿಸಲಾಗಿದೆ’ ಎಂದು ಅಪಸ್ವರವೆತ್ತಿದರು. ಇಲ್ಲಿ ಮಾದಕ ದ್ರವ್ಯ ನಿಗ್ರಹ ಸಂಸ್ಥೆಯು ಒಂದು ‘ರೇವ್ ಪಾರ್ಟಿ’ಯನ್ನು ತಡೆಯಿತು ಎನ್ನುವುದನ್ನು ಗಮನಿಸಬೇಕಾಗಿದೆ. ದುರ್ದೈವವೆಂದರೆ ಮತಾಂಧರ ಪುತ್ರನ ಬಂಧನವು ಸರಿಯಾದ ಕ್ರಮವಾಗಿದೆ ಎನ್ನುವ ವಿಷಯದಲ್ಲಿ ಯಾರೂ ಮಾದಕ ದ್ರವ್ಯ ನಿಗ್ರಹ ದಳವನ್ನು ಬೆಂಬಲಿಸಿರುವುದು ಕಂಡು ಬರುತ್ತಿಲ್ಲ.

೬. ೧೯೯೬ ನೇ ಇಸವಿಯಲ್ಲಿ ಭಯೋತ್ಪಾದಕರು ಕೇಂದ್ರ ಗೃಹಸಚಿವರ ಮತಾಂಧ ಮಗಳನ್ನು ಒತ್ತೆಯಾಳಾಗಿರಿಸಿ ೪ ಭಯೋತ್ಪಾದಕರನ್ನು ಬಿಡುಗಡೆಗೊಳಿಸಿಕೊಂಡಿದ್ದು ಮತ್ತು ಅನೇಕ ಹಂತಗಳಲ್ಲಿ ಹಿಂದೂಗಳನ್ನು ಮುಗಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಗಳು ನಡೆದಿರುವಾಗ ಯಾರೂ ಈ ಬಗ್ಗೆ ಮಾತನಾಡದಿರುವುದು

೧೯೯೬ ನೇ ಇಸವಿಯಲ್ಲಿ ಭಯೋತ್ಪಾದಕರು ಭಾರತದ ಒಂದು ವಿಮಾನವನ್ನು ಅಪಹರಿಸಿದ್ದರು. ಅವರು ಆಗಿನ ಮತಾಂಧ ಗೃಹಸಚಿವರ ಮಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದರು. ಅವರು ಮಗಳನ್ನು ಮರಳಿಸಲು ಭಾರತ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತದ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದ ಮಸೂದ ಅಝಹರ, ಅಹಮದ್ ಜರಗರ, ಶೇಖ ಅಹಮದ್ ಮತ್ತು ಉಮರ ಸೈದ ಈ ೪ ಭಯೋತ್ಪಾದಕರನ್ನು ಬಿಡುಗಡೆಗೊಳಿಸಿಕೊಂಡಿದ್ದರು. ಇವರೆಲ್ಲರಿಗೂ ಅಫಘಾನಿಸ್ತಾನದೊಂದಿಗೆ ನಂಟಿದೆ; ಆದ್ದರಿಂದ ಈ ಊಹಾಪೋಹ ವ್ಯಕ್ತಪಡಿಸಬೇಕಾಗುತ್ತಿದೆ. ಮೊದಲು ಮತಾಂಧರು, ನಂತರ ಆಂಗ್ಲರು ಮತ್ತು ಕಳೆದ ೭೫ ವರ್ಷಗಳ ಪ್ರಜಾಪ್ರಭುತ್ವದ ಆಡಳಿತಾವಧಿಯಲ್ಲಿ ಹಿಂದೂಗಳನ್ನು ಮುಗಿಸುವ ಉದ್ದೇಶಪೂರ್ವಕ ಪ್ರಯತ್ನಗಳು ನಡೆದಿವೆ. ಈ ವಿಷಯದಲ್ಲಿ ಯಾರೂ ಏನೂ ಮಾತನಾಡುವುದಿಲ್ಲ ಇದು ಸತ್ಯವಾಗಿದೆ.

೭. ಮತಾಂಧ ಮಂತ್ರಿಗಳ ಕುಕೃತ್ಯಗಳು ಬಹಿರಂಗಗೊಳ್ಳುತ್ತಿರುವಾಗ ಅವರನ್ನು ಸಮರ್ಥಿಸಲು ಮತಾಂಧರು ಒಂದಾಗುವುದು

೨೦೧೯ ನೇ ಇಸವಿಯಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯಲ್ಲಿ ೨ ಹಿಂದುತ್ವನಿಷ್ಠ ಪಕ್ಷಗಳ ಶಾಸಕರು ಬಹುಮತದಿಂದ ಆಯ್ಕೆಗೊಂಡಿದ್ದರು; ಆದರೆ ಅವರಿಂದ ಒಗ್ಗಟ್ಟಿನ ಆಡಳಿತ ಸ್ಥಾಪನೆಯಾಗಲಿಲ್ಲ. ಪ್ರಾರಂಭದಲ್ಲಿ ಅಸಂಗತರೊಂದಿಗೆ ಸಾಂಗತ್ಯ ಎಂಬುದು ಎದುರು ಬಂದಿತು. ಸದ್ಯ ‘ಜ್ಯಾರಿ ನಿರ್ದೇಶನಾಲಯ’ವು ಕೆಲವು ಭ್ರಷ್ಟ ಸಚಿವರನ್ನು ವಿಚಾರಣೆಗೆ ಕರೆಸಿತು. ಇದರಿಂದ ಕೆಲವು ಸಚಿವರು ರಾಜೀನಾಮೆ ಕೊಡಬೇಕಾಯಿತು. ಅವರನ್ನು ಯಾರೂ ವಿಶೇಷವಾಗಿ ಬೆಂಬಲಿಸಲಿಲ್ಲ; ಆದರೆ ಒಂದು ಜಿಲ್ಲೆಯ ಮತಾಂಧ ಸಚಿವನನ್ನು ಅನೇಕ ಜನರು ಬೆಂಬಲಿಸಿದರು. ಈ ಮತಾಂಧನನ್ನು ವಿರೋಧಿಸಲು ಹಿಂದುತ್ವನಿಷ್ಠ ಪಕ್ಷಗಳ ಜನಪ್ರತಿನಿಧಿಗಳು ಕೊಲ್ಹಾಪುರಕ್ಕೆ ಹೋಗುವವರಿದ್ದರು. ಪೊಲೀಸರು ಅವರ ಕೊಲ್ಹಾಪುರ ಪ್ರವಾಸವನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಆಗ ರಾಜ್ಯದ ಅನೇಕ ಮತಾಂಧ ಜನಪ್ರತಿನಿಧಿಗಳು ಒಂದುಗೂಡಿದರು.

ಕೊಲ್ಹಾಪುರದಲ್ಲಿ ಅನೇಕ ಮತಾಂಧರು ಬೃಹತ್ ಸಂಖ್ಯೆಯಲ್ಲಿ ಪೊಲೀಸ್ ಠಾಣೆಯ ಹತ್ತಿರ ಜಮಾಯಿಸಿದರು. ಇದರಿಂದ ಆ ಜನಪ್ರತಿನಿಧಿಗೆ ಕೊಲ್ಹಾಪುರಕ್ಕೆ ಹೋಗಲು ಆಗಲಿಲ್ಲ. ಇಲ್ಲಿ ಆ ಜನಪ್ರತಿನಿಧಿಯ ಕೃತಿಯನ್ನು ಸಮರ್ಥಿಸುತ್ತಿಲ್ಲ; ಆದರೆ ಅನೇಕ ಬಾರಿ ಸಿದ್ಧಗೊಂಡಿರುವುದೇನೆಂದರೆ ತಥಾಕಥಿತ ಶಾಂತಿಪ್ರಿಯ ಸಮಾಜವು ಅಪರಾಧಗಳಲ್ಲಿ ಮೊದಲ ಕ್ರಮಾಂಕದಲ್ಲಿದೆ. ಯಾವಾಗಲಾದರೂ ಯಾವುದೇ ಮತಾಂಧನ ಕುಕೃತ್ಯಗಳು ಬಹಿರಂಗಗೊಳ್ಳುವುದು ಕಂಡು ಬಂದಾಗ, ಎಲ್ಲ ಮತಾಂಧರು ತನಿಖಾ ದಳದ ಪ್ರಯತ್ನವನ್ನು ನಿಷ್ಕ್ರಿಯಗೊಳಿಸಲು ಒಂದು ಗೂಡುತ್ತಾರೆ. ಇದು ಹಿಂದೂಗಳು ವಿಚಾರ ಮಾಡಬೇಕಾದ ವಿಷಯವಾಗಿದೆ. ಒಂದು ವೇಳೆ ಪರಕೀಯರ ಆಕ್ರಮಣವಾದರೆ, ಈ ಗುಂಪುಗಳು ಸುರಕ್ಷಾದಳಗಳಿಗೆ ಕೆಲಸ ಮಾಡಲು ಬಿಡುವರೇ ? ಮತಾಂಧರು ಮತ್ತು ಜಿಹಾದಿ ಶಕ್ತಿ ಹಿಂದೂಗಳನ್ನು ಇಲ್ಲಿ ಸುಖದಿಂದ ಇರಲು ಬಿಡುವುದೇ ಅಥವಾ ಕಾಶ್ಮೀರ, ಅಸ್ಸಾಂ ಮತ್ತು ಬಂಗಾಳದ ಹಿಂದೂಗಳಂತೆ ನಮ್ಮ ಸ್ಥಿತಿಯಾಗಲಿದೆಯೇ ?

೮. ಮಾತೃಭೂಮಿಗಾಗಿ ಎಲ್ಲ ರೋಷ, ದ್ವೇಷಗಳನ್ನು ಬದಿಗಿಟ್ಟು ಸೈನಿಕರನ್ನು ಬೆಂಬಲಿಸುವುದು ಆವಶ್ಯಕ !

ಭಾರತವು ಒಂದು ಸಾಮರ್ಥ್ಯಶಾಲಿ ಮಹಾಶಕ್ತಿಯಾಗಲು ಪ್ರಯತ್ನಿಸುತ್ತಿದೆ. ಈ ದೃಷ್ಟಿಯಿಂದ ಸಂಪೂರ್ಣ ವಿಶ್ವವೂ ನಮ್ಮ ಕಡೆಗೆ ನೋಡುತ್ತಿದೆ. ಇಂತಹ ಸ್ಥಿತಿಯಲ್ಲಿ ನಾವು ಮಾತೃಭೂಮಿಗಾಗಿ ಪಕ್ಷ ರಾಜಕಾರಣ ಮತ್ತು ನಮ್ಮೊಳಗಿನ ಹೊಡೆದಾಟವನ್ನು ನಿಲ್ಲಿಸಿ ಭಾರತೀಯ ರಕ್ಷಣಾ ದಳವನ್ನು ಬೆಂಬಲಿಸಬೇಕು !

 ಶ್ರೀಕೃಷ್ಣಾರ್ಪಣಮಸ್ತು |

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (೧೭.೧೦.೨೦೨೧)