ಭಾರತಕ್ಕೆ 248 ಪ್ರಾಚೀನ ವಸ್ತುಗಳನ್ನು ಮರಳಿಸಿದ ಅಮೇರಿಕಾ !

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾವು ಭಾರತಕ್ಕೆ 248 ಪ್ರಾಚೀನ ವಸ್ತುಗಳನ್ನು ಮರಳಿಸಿದೆ. ಈ ವಸ್ತುಗಳನ್ನು ಅನೇಕ ವರ್ಷಗಳ ಹಿಂದೆ ಕಳ್ಳತನ ಮಾಡಲಾಗಿತ್ತು. ಈ ವಸ್ತುಗಳಲ್ಲಿ 12 ನೇಯ ಶತಮಾನದ ಕಂಚಿನ ನಟರಾಜ ಮೂರ್ತಿಯೂ ಇದೆ. 1960 ನೇ ಇಸವಿಯಲ್ಲಿ ಭಾರತದಲ್ಲಿನ ಒಂದು ದೇವಾಲಯದಿಂದ ಈ ಮೂರ್ತಿಯನ್ನು ಕಳ್ಳತನ ಮಾಡಲಾಗಿತ್ತು. ನಟರಾಜನ ಮೂರ್ತಿಯಂತೆ ನಂದಿಕೇಶ್ವರ ಮತ್ತು ಕಂಕಲ ಮೂರ್ತಿಯನ್ನು ಕೂಡ ಕಳ್ಳತನ ಮಾಡಲಾಯಿತು.

ಅಮೇರಿಕಾವು ಈ ಹಿಂದೆಯೂ ಭಾರತದ ಪ್ರಾಚೀನ ವಸ್ತುಗಳನ್ನು ಮರಳಿ ನೀಡಿತ್ತು; ಆದರೆ ಇದೇ ಮೊದಲ ಬಾರಿ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಮರಳಿ ನೀಡಿದೆ. ಮರಳಿ ನೀಡಿರುವ 248 ವಸ್ತುಗಳ ಪೈಕಿ 235 ವಸ್ತುಗಳನ್ನು ಕಳ್ಳಸಾಗಣೆದಾರನಾದ ಸುಭಾಷ ಕಪೂರನ ಬಳಿ ಸಿಕ್ಕಿತು. ಸದ್ಯ ಆತ ಅಮೇರಿಕಾದ ಸೆರೆಮನೆಯಲ್ಲಿದ್ದಾನೆ. ಅವನ ಮತ್ತೋರ್ವ ಸಹಚರನನ್ನೂ ಬಂಧಿಸಲಾಗಿದೆ. ಆತ ಭಾರತ ಸಹಿತ, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ ಥೈಲ್ಯಾಂಡ ಇತ್ಯಾದಿ ದೇಶಗಳಿಂದ ಪ್ರಾಚೀನ ವಸ್ತುಗಳನ್ನು ಕದ್ದಿದ್ದಾನೆ.