ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ವಾತಂತ್ರ್ಯಕ್ಕಾಗಿ ಸ್ಥಳೀಯ ಪಕ್ಷಗಳಿಂದ ಮೆರವಣಿಗೆಯ ಆಯೋಜನೆ

ಮೆರವಣಿಗೆ ನಡೆಸಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಲಾರದು, ಅದಕ್ಕಾಗಿ ಅಲ್ಲಿಯ ನಾಗರಿಕರು ಪಾಕಿಸ್ತಾನದ ವಿರುದ್ಧ ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಳ್ಳಬೇಕು ! ಭಾರತಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಕ್ರಾಂತಿಕಾರಕರಿಂದಲೇ ಸ್ವಾತಂತ್ರ್ಯ ಸಿಕ್ಕಿದೆ, ಇದು ಇತಿಹಾಸವಾಗಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫ್ಫರಾಬಾದ್‌ನಲ್ಲಿ ‘ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ’ಯು ೭೫ ವರ್ಷದ ಮೊದಲು ಪಾಕಿಸ್ತಾನವು ಜಮ್ಮು-ಕಾಶ್ಮೀರದ ಮೇಲೆ ನಡೆಸಿರುವ ದಾಳಿಯನ್ನು ಖಂಡಿಸಿ ಮೆರವಣಿಗೆ ನಡೆಸಿತು. ಈ ಮೆರವಣಿಗೆಯಲ್ಲಿ ಸಹಭಾಗಿಯಾಗಿರುವವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವಂತೆ ಘೋಷಣೆ ನೀಡಿದರು, ಹಾಗೂ ‘ಪಾಕಿಸ್ತಾನ ಸೈನ್ಯ ಮತ್ತು ಸರಕಾರ ಇದರ ವಶದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮುಕ್ತಗೊಳಿಸಿ’, ಎಂದು ಬೇಡಿಕೆಯನ್ನೂ ಇಟ್ಟಿದ್ದಾರೆ.
ಈ ಸಂಘಟನೆಯ ಅಧ್ಯಕ್ಷ ಸರ್ದಾರ್ ಶೌಕತ್ ಅಲಿ ಕಾಶ್ಮೀರಿ ಇವರು, ಅಕ್ಟೋಬರ್ ೨೨, ೧೯೪೭ ರಲ್ಲಿ ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲು ಇಲ್ಲಿಯ ನೀಲಂ ಸೇತುವೆಯ ಮೇಲೆ ಮೇಣದಬತ್ತಿ ಮೆರವಣಿಗೆ ನಡೆಸಲಾಯಿತು. ಪಾಕಿಸ್ತಾನವು ಸಾವಿರಾರು ಅಮಾಯಕರ ಹಂತಕವಾಗಿದೆ ಎಂದು ಹೇಳಿದರು.