ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ಮಂಟಪದಲ್ಲಿ ಕುರಾನ ಅನ್ನು ಹಿಂದೂಗಳಲ್ಲ, 35 ವರ್ಷದ ಇಕ್ಬಾಲ ಹುಸೇನ್ ಇಟ್ಟಿದ್ದ ವಿಷಯ ಬಹಿರಂಗ !

* ‘ಹಿಂದೂಗಳೇ ಕುರಾನ್‍ಅನ್ನು ಅವಮಾನಿಸಲಾಗಿದೆ ಎಂದು ದಾಳಿ ಮಾಡುವ ಮತಾಂಧರು ಈಗ ದುರ್ಗಾಪೂಜೆಯ ಮಂಟಪದಲ್ಲಿ ಕುರಾನ ಇಟ್ಟ ತಮ್ಮ ಮತಬಾಂಧವನ ಮೇಲೆ ದಾಳಿ ನಡೆಸುವರೇ?’, ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಅದರಲ್ಲಿ ತಪ್ಪೇನಿದೆ? -ಸಂಪಾದಕರು

* ಹಿಂದೂಗಳ ಮೇಲೆ ದಾಳಿ ಮಾಡಲು ಈ ರೀತಿಯ ಕುತಂತ್ರಗಳನ್ನು ಮತಾಂಧರು ರೂಪಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ಈಗಲಾದರೂ ಎಚ್ಚರಿಕೆಯಿಂದ ಇದ್ದು ತಮ್ಮ ಮೇಲಾಗುವ ದಾಳಿಯನ್ನು ಹಿಮ್ಮೆಟ್ಟಿಸಬೇಕಾಗಿದೆ ! – ಸಂಪಾದಕರು

ಸಿಸಿಟಿವಿ ಫುಟೇಜಿನಲ್ಲಿ ಇಕ್ಬಾಲ ಕುರಾನಿನ ಒಂದು ಪ್ರತಿಯನ್ನು ತೆಗೆದುಕೊಂಡು ಮಸೀದಿಯಿಂದ ದುರ್ಗಾಪೂಜೆಯ ಸ್ಥಳಕ್ಕೆ ತರುತ್ತಿರುವುದು

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಕುರಾನ್ ಅನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಮತಾಂಧರು ಹಿಂದೂಗಳ ಮೇಲೆ ನಡೆಸಿದ ದಾಳಿಯಲ್ಲಿ ಅನೇಕ ಹಿಂದುಗಳು ಸಾವಿಗೀಡಾದರು. ಈಗ ಈ ಪ್ರಕರಣದಲ್ಲಿ ಕೊಮಿಲಾ ನಗರದ ಪೊಲೀಸರು ನಾನುವಾ ದಿಘಿ ಪರಿಸರದಲ್ಲಿ ಶ್ರೀ ದುರ್ಗಾದೇವಿ ಪೂಜೆ ಮಂಟಪದಲ್ಲಿ ಶ್ರೀ ಹನುಮಂತನ ಮೂರ್ತಿಯ ಚರಣದ ಬಳಿ ಕುರಾನ ಇಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. 35 ವರ್ಷದ ಇಕ್ಬಾಲ ಹುಸೇನನೆಂಬ ವ್ಯಕ್ತಿಯು ಕುರಾನ ಅನ್ನು ಮೂರ್ತಿಯ ಚರಣಗಳ ಬಳಿ ಇಟ್ಟಿದ್ದನು. ಹುಸೇನನ ಬಗ್ಗೆ ಮತ್ತಷ್ಟು ವಿಚಾರಣೆ ನಡೆಯುತ್ತಿದೆ. ಅವನು ಮಾನಸಿಕ ದೃಷ್ಟಿಯಿಂದ ಅಸ್ವಸ್ಥನಾಗಿದ್ದಾನೆಂದು ಹೇೀಳಲಾಗುತ್ತಿದೆ. (ಭಾರತವಾಗಿರಲಿ ಅಥವಾ ಬಾಂಗ್ಲಾದೇಶದ ಮತಾಂಧರಾಗಿರಲಿ ಹಿಂದೂಗಳ ಧಾರ್ಮಿಕ ವಿಷಯಗಳನ್ನು ಅವಮಾನಿಸಿದ ಬಳಿಕ ಸಂಬಂಧಪಟ್ಟ ವ್ಯಕ್ತಿಯು ಯಾವಾಗಲೂ ಮಾನಸಿಕವಾಗಿ ಅಸ್ವಸ್ಥನಿದ್ದಾನೆಂದು ಹೇಳಿ ಪೊಲೀಸರು ಆ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು) ಮಂಟಪದಲ್ಲಿ ಹಾಕಿರುವ ಕ್ಯಾಮರಾದಿಂದ ಸಿಕ್ಕಿರುವ ಸಿಸಿಟಿವಿ ಫುಟೇಜನ ಪರಿಶೀಲನೆ ಮಾಡಿದನಂತರ ಹಿಂಸಾಚಾರದಲ್ಲಿಯೂ ಇಕ್ಬಾಲ ಹುಸೇನನು ಭಾಗವಹಿಸಿರುವುದು ಬಹಿರಂಗವಾಗಿದೆ. ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ಫುಟೇಜಿನಲ್ಲಿ ಇಕ್ಬಾಲ ಕುರಾನಿನ ಒಂದು ಪ್ರತಿಯನ್ನು ತೆಗೆದುಕೊಂಡು ಮಸೀದಿಯಿಂದ ದುರ್ಗಾಪೂಜೆಯ ಸ್ಥಳಕ್ಕೆ ತರುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ನಂತರ ಅವನು ಶ್ರೀ ಹನುಮಂತನ ಮೂರ್ತಿಯ ಬಳಿಗೆ ಹೋಗುತ್ತಿರುವುದು ಕೂಡ ಕಾಣಿಸುತ್ತಿದೆ.

ಕೊಮಿಲಾದ ಪೊಲೀಸ ಅಧಿಕ್ಷಕರಾದ ಫಾರೂಕ ಅಹಮದರವರು ಇವರು, ಆರೋಪಿ ಇಕ್ಬಾಲ ಹುಸೇನನು ಅಲೆಮಾರಿಯಾಗಿದ್ದು ಅವನನ್ನು ಇನ್ನೂ ವಶ ಪಡಿಸಿಕೊಂಡಿಲ್ಲಾ. ಕುರಾನನ ತಥಾಕಥಿತ ಅವಮಾನದ ಬಳಿಕ ನಗರದಲ್ಲಾದ ಹಿಂಸಾಚಾರದ ಪ್ರಕರಣದಲ್ಲಿ ಪೊಲೀಸರು 4 ಅಪರಾಧಗಳನ್ನು ನೋಂದಾಯಿಸಿದ್ದು 41 ಜನರನ್ನು ಬಂಧಿಸಿದ್ದಾರೆ. ಬಂಧಿಸಲಾಗಿರುವವರ ಪೈಕಿ ನಾಲ್ವರು ಇಕ್ಬಾಲ ಹುಸೇನನ ಸಹಚರರಾಗಿದ್ದಾರೆ.

ಇಸ್ಲಾಮವಾದಿಗಳು ಹುಸೇನನ್ನೇಕೆ ಜೀವಂತವಾಗಿ ತಿನ್ನುತ್ತಿಲ್ಲ ? – ತಸ್ಲೀಮಾ ನಸರೀನ

ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸರೀನ

ಇಕ್ಬಾಲ ಹುಸೇನನು ಹನುಮಂತನ ಮೂರ್ತಿಯ ತೊಡೆಯ ಮೇಲೆ ಕುರಾನ ಇಟ್ಟನು ಹಾಗೂ ಗದೆಯನ್ನು ಕದ್ದನು. ಇಸ್ಲಾಮವಾದಿಗಳು ಅವನು ಕುರಾನ ಅನ್ನು ಅವಮಾನಿಸಿದ್ದಾನೆಂದು ಹೇಳಿ ಅವನನ್ನೇಕೆ ಜೀವಂತವಾಗಿ ತಿನ್ನುವುದಿಲ್ಲ ? ಮೊದಲೇ ಇಸ್ಲಾಮವಾದಿಗಳು ಹಿಂದೂಗಳನ್ನು ದೂಷಿಸಿದರು ಹಾಗೂ ಅವರು ಮಾಡದೆ ಇರುವ ‘ಅಪರಾಧ’ಕ್ಕಾಗಿ ಅವರ ಆಸ್ತಿಯನ್ನೆಲ್ಲಾ ನಾಶ ಮಾಡಿದರು, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸರೀನರವರು ಟ್ವಿಟ್ ಮಾಡಿ ಮತಾಂಧರನ್ನು ಟೀಕಿಸಿದ್ದಾರೆ.