ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯನಕ್ಕೆ 50 ದಿನದ ಸಂಭ್ರಮ

ಅಭಿಯಾನಕ್ಕೆ 50 ದಿನ ಪೂರ್ಣವಾದ ನಿಮಿತ್ತ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡ ಇವರ ಅಮೃತಹಸ್ತದಿಂದ ‘ಡಿಪಿ’ಯನ್ನು ಸಹ ಉದ್ಘಾಟಿಸಲಾಯಿತು.

ಸನಾತನ ನಿರ್ಮಿತ ಗ್ರಂಥಗಳೆಂದರೆ ಈಶ್ವರೀ ಚೈತನ್ಯ, ಹಾಗೆಯೇ ಆನಂದ ಮತ್ತು ಶಾಂತಿಯ ಅನುಭೂತಿಯನ್ನು ನೀಡುವ ಸಾಹಿತ್ಯವಾಗಿವೆ. ಸನಾತನದ ಗ್ರಂಥಗಳಲ್ಲಿನ ದಿವ್ಯ ಜ್ಞಾನವನ್ನು ಸಮಾಜದವರೆಗೆ ತಲುಪಿಸಲು ಸನಾತನದ ವತಿಯಿಂದ ರಾಜ್ಯದಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನವನ್ನು ಹಮ್ಮಿಕೊಂಡಿದೆ. ಸನಾತನದ ಗ್ರಂಥಗಳು ಸಮಾಜದ ಪ್ರತಿಯೊಬ್ಬ ಜಿಜ್ಞಾಸು, ಮುಮುಕ್ಷು ಮುಂತಾದವರವರೆಗೆ ತಲುಪಿ ಅವರಿಗೂ ಈ ಜ್ಞಾನಶಕ್ತಿಯ ಲಾಭವಾಗಬೇಕೆಂಬುದು ಈ ಅಭಿಯಾನದ ಉದ್ದೇಶವಾಗಿದೆ. ಜಗದ್ಗುರು ಭಗವಾನ್ ಶ್ರೀಕೃಷ್ಣ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಸಂತರ ಆಶೀರ್ವಾದದಿಂದ ಅಲ್ಲದೇ ಇದಕ್ಕೆ ಪ್ರೋತ್ಸಾಹಿಸಿದ ಸಮಸ್ತ ಹಿಂದೂ ಬಾಂಧವರ ಸಂಘಟಿತ ಪ್ರಯತ್ನದಿಂದ ಈ ಅಭಿಯಾನವು 50 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಈ ಮೂಲಕ ತಿಳಿಸಲು ಹರ್ಷವಾಗುತ್ತಿದೆ.

ಸಂತರು ಹಾಗೂ ಗಣ್ಯರಿಂದ ಅಭಿಯಾನದ ಬಗ್ಗೆ ಶ್ಲಾಘನೆ

ಈ ನಿಮಿತ್ತ ಅನೇಕ ವಕೀಲರು, ಉದ್ಯಮಿಗಳು, ಗಣ್ಯರು ಮತ್ತು ಸಂತರನ್ನು ಭೇಟಿಯಾದಾಗ ಶ್ಲಾಘನೆ ವ್ಯಕ್ತವಾಯಿತು. ಶಾಲಾ-ಕಾಲೇಜು, ಭಜನಾ ಮಂದಿರ, ದೇವಸ್ಥಾನಗಳು ಅಲ್ಲದೇ ಮನೆ ಮನೆಗೂ ಈ ಗ್ರಂಥಗಳ ಮಹತ್ವವನ್ನು ತಿಳಿಸಲಾಯಿತು. ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಈ ಅಭಿಯಾನಕ್ಕೆ ಆಶೀರ್ವದಿಸುತ್ತಾ, ‘ಸನಾತನ ಸಂಸ್ಥೆಯು ಮೊದಲಿನಿಂದಲೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ಇದು ತುಂಬಾ ಒಳ್ಳೆಯದಿದೆ. ಇದಕ್ಕೆ ನಮ್ಮ ಸಹಕಾರ ಖಂಡಿತ ಇರುವುದು’ ಎಂದು ಹೇಳಿದರು. ವಿಧಾನಪರಿಷತ್ತಿನ ಮಾಜಿ ಸಭಾಪತಿಗಳಾದ ಶ್ರೀ. ಡಿ.ಎಚ್. ಶಂಕರಮೂರ್ತಿಯವರು ಪ್ರತಿಕ್ರಿಯಿಸುತ್ತಾ ‘ಈ ಅಭಿಯಾನದ ಮೂಲಕ ಜನತೆಗೆ ಜ್ಞಾನಶಕ್ತಿಯನ್ನು ತಲುಪಿಸುತ್ತಿರುವುದು ಅತ್ಯಂತ ಅದ್ಭುತ ಹಾಗೂ ಅಚ್ಚರಿಯ ಕಾರ್ಯ, ಈ ಅಭಿಯಾನಕ್ಕೆ ಯಶಸ್ಸು ಸಿಗಲಿ !’ ಎಂದು ಹಾರೈಸಿದ್ದಾರೆ. ಅದೇ ರೀತಿ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೂ. ಸ್ವಾಮಿ ವಿನಯಾನಂದ ಸರಸ್ವತಿಯವರು ಮಾತನಾಡುತ್ತಾ, ‘ಸನಾತನದ ಗ್ರಂಥಗಳಲ್ಲಿ ಮಕ್ಕಳಲ್ಲಿ ಸ್ವಭಾವದೋಷಗಳನ್ನು ಹೇಗೆ ದೂರಗೊಳಿಸಬೇಕು ಮತ್ತು ನಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ?, ನಮ್ಮ ನಿಜವಾದ ಅರಿವನ್ನು ಹೇಗೆ ಪಡೆಯಬೇಕು ? ಈ ರೀತಿಯ ಅನೇಕ ಮಾಹಿತಿ ಈ ಗ್ರಂಥಗಳಲ್ಲಿವೆ. ಈ ಅಭಿಯಾನವು ಅತ್ಯಂತ ಮಹತ್ವದ್ದಾಗಿದ್ದು ಇದರ ಲಾಭವು ಪ್ರತಿಯೊಬ್ಬ ಭಾರತೀಯನಿಗೂ ಸಿಗಬೇಕು !’, ಎಂದು ಶ್ಲಾಘಿಸಿದ್ದಾರೆ.

‘ಈ ಅಭಿಯಾನದಲ್ಲಿ ಇಲ್ಲಿಯವರೆಗೆ ತಮ್ಮ ಯೋಗದಾನ ನೀಡಿದ ಎಲ್ಲ ಧರ್ಮಬಾಂಧವರಿಗೆ ಅತ್ಯಂತ ಆಭಾರಿಯಾಗಿದ್ದೇವೆ. ಈ ಅಭಿಯಾನದ ಅಂತರ್ಗತ ಇದುವರೆಗೆ ಸಾವಿರಾರು ಮಂದಿ ಗ್ರಂಥಗಳ ಲಾಭ ಪಡೆದಿದ್ದಾರೆ. ಈಗ ಈ ಗ್ರಂಥಗಳನ್ನು ಪಡೆದ ಪ್ರತಿಯೊಬ್ಬರೂ ಅವುಗಳನ್ನು ಪೂರ್ಣ ರೀತಿಯಲ್ಲಿ ಅಧ್ಯಯನ ಮಾಡಿದಾಗಲೇ ಅಭಿಯಾನದ ಆಯೋಜನೆಯ ಉದ್ದೇಶವು ಸಫಲವಾಗುವುದು, ಆದ್ದರಿಂದ ಎಲ್ಲರೂ ಈ ಗ್ರಂಥಗಳನ್ನು ತಪ್ಪದೇ ಓದೋಣ ಮತ್ತು ಇತರರಿಗೂ ಗ್ರಂಥವನ್ನು ಓದುವಂತೆ ತಿಳಿಸೋಣ’ ಎಂದು ಸನಾತನ ಸಂಸ್ಥೆಯು ಕರೆ ನೀಡಿದೆ.

ವಿಶೇಷ : ಅಭಿಯಾನಕ್ಕೆ 50 ದಿನ ಪೂರ್ಣವಾದ ನಿಮಿತ್ತ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡ ಇವರ ಅಮೃತಹಸ್ತದಿಂದ ‘ಡಿಪಿ’ಯನ್ನು ಸಹ ಉದ್ಘಾಟಿಸಲಾಯಿತು.

ಈ ಗ್ರಂಥ ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಸ್ವತಃ ಈ ಗ್ರಂಥಗಳ ಲಾಭ ಪಡೆಯಲು 9379771771 ಈ ಕ್ರಮಾಂಕವನ್ನು ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.