ಪೊಲೀಸ್ ಅಧಿಕಾರಿಯೆಂದು ಕರ್ತವ್ಯವನ್ನು ನಿರ್ವಹಿಸುವಾಗ ಮೃತದೇಹ ಬಿದ್ದಿರುವ ಸ್ಥಳಕ್ಕೆ ಹೋದಾಗ ಅರಿವಾದ ತೊಂದರೆದಾಯಕ ಅಂಶಗಳು

ಸುರಾಜ್ಯ ಸ್ಥಾಪನೆಯ ಒಂದು ಅಂಗ : ಆದರ್ಶ ಪೊಲೀಸರು

ಪೊಲೀಸರ ಬಗ್ಗೆ ಓದಿದ ವಾರ್ತೆಗಳು, ಅವರ ಚಲನಚಿತ್ರಗಳಲ್ಲಿ ತೋರಿಸಲಾಗುವ ಖಳನಾಯಕನ ಪಾತ್ರ ಇವುಗಳಿಂದ ಮತ್ತು ಅನೇಕ ಬಾರಿ ಸ್ವತಃ ನಮ್ಮ ಅನುಭವಗಳಿಂದ ಪೊಲೀಸರು ಮತ್ತು ಸಮಾಜದ ನಡುವೆ ಅಂತರ ನಿರ್ಮಾಣವಾಗಿರುವುದು ಕಂಡುಬರುತ್ತದೆ. ಇದು ನಿಜವಾಗಿಯೂ ಬದಲಾಗಬೇಕು. ಸಮಾಜವು ಆದರ್ಶವಾಗಿದ್ದರೆ, ಪೊಲೀಸರು ಆದರ್ಶರಾಗುವರು ಮತ್ತು ಪೊಲೀಸರು ಆದರ್ಶರಾದರೆ ಸಮಾಜವೂ ಆದರ್ಶದ ಕಡೆಗೆ ಹೋಗುತ್ತದೆ. ಹೀಗೆ ಪರಸ್ಪರಾವಲಂಬಿ ಚಿತ್ರಣವಿರುವುದರಿಂದ ಜಾಗೃತಿಗಾಗಿ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ.

೧. ಪೊಲೀಸ್ ಅಧಿಕಾರಿಯೆಂದು ಕರ್ತವ್ಯ ನಿರ್ವಹಿಸುವಾಗ ವಿವಿಧ ಶವಗಳ ವಿಲೇವಾರಿ ಮಾಡಬೇಕಾಗುವುದು ಮತ್ತು ಘಟನಾಸ್ಥಳಕ್ಕೆ ಹೋದಾಗ ಒಳ್ಳೆಯ-ಕೆಟ್ಟ ಸ್ಪಂದನಗಳು ಗಮನಕ್ಕೆ ಬಂದು, ಅರಿವಾದ ಜಡತ್ವ ೨-೩ ದಿನಗಳ ಕಾಲ ಉಳಿಯುವುದು

‘ಪೊಲೀಸ್ ಇಲಾಖೆ’ಯಲ್ಲಿ ನೌಕರಿ ಮಾಡುವಾಗ ನನಗೆ ಹತ್ಯೆ, ಹಾಗೆಯೇ ಆಕಸ್ಮಿಕವಾಗಿ ಆಗುವ ಮೃತ್ಯು, ರೈಲು ಮತ್ತು ವಾಹನ ಅಪಘಾತಗಳಲ್ಲಾಗುವ ಮೃತ್ಯು ಇಂತಹ ಎಲ್ಲ ರೀತಿಯ ಶವಗಳ ವಿಲೇವಾರಿಯ ಕೆಲಸವನ್ನು ನಿಭಾಯಿಸಬೇಕಾಯಿತು. ಸಾಧನೆಗೆ ಬಂದ ನಂತರ ಪರಾತ್ಪರ ಗುರುದೇವರ ಕೃಪೆಯಿಂದ ನನಗೆ ಘಟನಾಸ್ಥಳಕ್ಕೆ ಹೋದಾಗ ಅಲ್ಲಿನ ಕೆಟ್ಟ ಮತ್ತು ಒಳ್ಳೆಯ ಸ್ಪಂದನಗಳು ಗಮನಕ್ಕೆ ಬರುತ್ತಿದ್ದವು. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸ್ಥಳದಲ್ಲಿ ಅತ್ಯಂತ ಒತ್ತಡವೆನಿಸುತ್ತಿತ್ತು. ಅದರಿಂದ ತಲೆ ಜಡವಾಗುವುದು, ಸ್ವಭಾವದೋಷ ಪಟ್ಟಿಯನ್ನು ಬರೆಯಬಾರದೆಂದು ಅನಿಸುವುದು, ಹೀಗೆ ತೊಂದರೆಯಾಗುತ್ತಿತ್ತು. ಈ ಜಡತ್ವವು ೨-೩ ದಿನಗಳ ಕಾಲ ಉಳಿಯುತ್ತಿತ್ತು.

೨. ಓರ್ವ ವ್ಯಕ್ತಿಯ ಹತ್ಯೆಯಾದ ಸ್ಥಳಕ್ಕೆ ಹೋದಾಗ ಒಳ್ಳೆಯ ಸ್ಪಂದನಗಳ ಅರಿವಾಗುವುದು, ಒಂದೂವರೆ ದಿನ ಬಿದ್ದುಕೊಂಡಿದ್ದ ಮೃತ ವ್ಯಕ್ತಿಯ ಕಿಸೆಯಲ್ಲಿ ಸನಾತನ ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳು ದೊರಕುವುದು ಮತ್ತು ಆ ಚಿತ್ರಗಳಿಂದ ಕೆಟ್ಟ ಶಕ್ತಿಗಳಿಂದ ಶವದ ರಕ್ಷಣೆಯಾಗಿರುವುದು ಗಮನಕ್ಕೆ ಬರುವುದು

ಒಂದು ತಾಲೂಕಿನ ಸ್ಥಳದಲ್ಲಿ ಕರ್ತವ್ಯದಲ್ಲಿರುವಾಗ ಒಂದು ಊರಿನ ದೇವಸ್ಥಾನದ ಹೆಸರಿನಲ್ಲಿರುವ ಭೂಮಿಯ ಅರಣ್ಯದಂತಹ ಭಾಗದಲ್ಲಿ ಓರ್ವ ವ್ಯಕ್ತಿಯ ಹತ್ಯೆಯಾಗಿತ್ತು. ಈ ವಾರ್ತೆಯು ತಿಳಿಯುತ್ತಲೇ ನಾವು ಘಟನಾಸ್ಥಳಕ್ಕೆ ತಲುಪಿದೆವು. ಹತ್ಯೆ ಮಾಡಿ ಶವವನ್ನು ದೇವಸ್ಥಾನಕ್ಕೆ ಸಂಬಂಧಿಸಿದ ಭೂಮಿಗೆ ಹೋಗುವ ಕಾಲುದಾರಿಯಿಂದ ಸುಮಾರು ೨೫ ರಿಂದ ೩೦ ಅಡಿ ದೂರದಲ್ಲಿ ಒಂದು ಪೊದೆಯಲ್ಲಿ ಎಸೆದಿದ್ದರು. ಶವವು ಅಲ್ಲಿ ಒಂದೂವರೆ ದಿನ ಹಾಗೆಯೇ ಬಿದ್ದಿತ್ತು; ಆದರೂ ಅಲ್ಲಿ ಒಳ್ಳೆಯ ಮತ್ತು ಹಗುರವಾದ ಸ್ಪಂದನಗಳ ಅರಿವಾಗುತ್ತಿತ್ತು. ಆದರೆ ತೊಂದರೆದಾಯಕ ಸ್ಪಂದನಗಳ ಅರಿವಾಗುತ್ತಿರಲಿಲ್ಲ. ಶವದ ಪಂಚನಾಮೆಯನ್ನು ಮಾಡುವಾಗ ಆ ವ್ಯಕ್ತಿಯ ಪ್ಯಾಂಟಿನ ಕಿಸೆಯಲ್ಲಿ ಸನಾತನ ಸಂಸ್ಥೆಯು ನಿರ್ಮಿಸಿದ ಗಣಪತಿ, ಶಿವ ಮತ್ತು ದುರ್ಗಾ ಈ ದೇವತೆಗಳ ಸಾತ್ತ್ವಿಕ ಚಿತ್ರಗಳಿರುವುದು ಕಂಡು ಬಂದವು. ‘ಸನಾತನದ ಸಾತ್ತ್ವಿಕ ಚಿತ್ರಗಳಿಂದಾಗಿಯೇ ಕೆಟ್ಟ ಶಕ್ತಿಗಳಿಂದ ಆ ಶವದ ರಕ್ಷಣೆಯಾಗಿದೆ’ ಎಂದು ನನ್ನ ಗಮನಕ್ಕೆ ಬಂದಿತು. (ಈ ಪೊಲೀಸ್ ಅಧಿಕಾರಿಯು ಸಾಧನೆಯನ್ನು ಮಾಡುತ್ತಿದ್ದರು. ಹಾಗಾಗಿ ಮೃತದೇಹದ ಸ್ಥಳದಲ್ಲಿ ಒಳ್ಳೆಯ ಮತ್ತು ಕೆಟ್ಟ ಸ್ಪಂದನಗಳು ಅವರ ಗಮನಕ್ಕೆ ಬಂದವು. ಇದರಿಂದ ಇಂತಹ ಪರಿಸ್ಥಿತಿಯಲ್ಲಿ ಅವರು ಆವಶ್ಯಕವಾದ ಎಚ್ಚರಿಕೆ ತೆಗೆದುಕೊಳ್ಳಬಹುದು. ಇದರಿಂದ ಪೊಲೀಸರು ಸಾಧನೆಯನ್ನು ಮಾಡುವ ಮಹತ್ವವು ಗಮನಕ್ಕೆ ಬರುತ್ತದೆ.- ಸಂಕನಲಕಾರರು)

– ಓರ್ವ ಮಾಜಿ ಪೊಲೀಸ್ ಅಧಿಕಾರಿ

ಹತ್ಯೆಯ ಪ್ರಕರಣದಲ್ಲಿ ಜನಪ್ರತಿನಿಧಿಗಳ ಸಹೋದರನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದರೂ ಸರ್ವೋಚ್ಚ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡುವುದು !

‘ನಾನು ಲಾಂಜಾದಲ್ಲಿ ಕಾರ್ಯನಿರತನಾಗಿರುವಾಗ ಒಂದು ದಿನ ಬಾಜಾರಪೇಟೆಯಲ್ಲಿ ಓರ್ವ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಇಲ್ಲಿನ ಪೊಲೀಸ್ ನಿರೀಕ್ಷಕರು ಭ್ರಷ್ಟರಾಗಿದ್ದರು; ಆದರೆ ಅವರು ಈ ಪ್ರಕರಣವನ್ನು ಅತ್ಯಂತ ಗಾಂಭೀರ್ಯದಿಂದ ಮತ್ತು ಪ್ರಾಮಾಣಿಕವಾಗಿ ನಿಭಾಯಿಸಿದರು. ಅವರು ೫ ಆರೋಪಿಗಳನ್ನು ತಕ್ಷಣ ಬಂಧಿಸಿದರು. ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಯಿತು. ಈ ಅಪರಾಧಿಗಳಲ್ಲಿನ ಓರ್ವ ಆರೋಪಿಯು ಪ್ರತಿಷ್ಠಿತ ಜನಪ್ರತಿನಿಧಿಯ ಸಹೋದರನಾಗಿದ್ದನು, ಆದುದರಿಂದ ಅವರು ಅಪರಾಧಿಗಳ ವತಿಯಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದರು. ಅನಂತರ, ಅಪರಾಧಿಯು ಜಾಮೀನಿನ ಮೇಲೆ ಬಿಡುಗಡೆಯಾದನು. ಜೀವಾವಧಿ ಶಿಕ್ಷೆಯಾದರೂ ಜಾಮೀನು ದೊರಕಿದುದ ರಿಂದ ಅಪರಾಧಿಯು ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾನೆ.’

– ಓರ್ವ ಮಾಜಿ ಪೊಲೀಸ್ ಅಧಿಕಾರಿ

ಸಾಧಕರಿಗೆ ಸೂಚನೆ ಮತ್ತು ವಾಚಕರು ಮತ್ತು ಹಿತಚಿಂತಕರಿಗೆ ವಿನಂತಿ !

ಪೊಲೀಸರು ಮತ್ತು ಆಡಳಿತದ ಬಗ್ಗೆ ಬರುವ ಒಳ್ಳೆಯ ಮತ್ತು ಕಹಿ ಅನುಭವಗಳನ್ನು ತಿಳಿಸಿ !

ಪೊಲೀಸರು-ಆಡಳಿತದ ಬಗ್ಗೆ ಬಂದ ಒಳ್ಳೆಯ ಮತ್ತು ಕಹಿ ಅನುಭವಗಳನ್ನು ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ, C/o ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ.

ಸಂಪರ್ಕ ಕ್ರಮಾಂಕ : 9595984844

ವಿ-ಅಂಚೆ : [email protected]

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ – ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.