‘ಹಿಂದೂ ರಾಷ್ಟ್ರ’ಕ್ಕಾಗಿ ಸಂಕಲ್ಪ ಮಾಡಿ ಮತ್ತು ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯದಲ್ಲಿ ಯೋಗದಾನ ನೀಡಿ ! – ಪೂ. ನೀಲೇಶ ಸಿಂಗಬಾಳ ಇವರಿಂದ ಹಿಂದೂ ಸಮಾಜಕ್ಕೆ ಕರೆ

‘ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ !’ ಈ ವಿಷಯದ ಕುರಿತು ಆನ್‌ಲೈನ್ ವಿಶೇಷ ಸಂವಾದ !

ಕಳೆದ 75 ವರ್ಷಗಳಿಂದ ಅಲ್ಪಸಂಖ್ಯಾತರನ್ನು ತೀವ್ರವಾಗಿ ಓಲೈಸಿದ್ದರಿಂದ ಹಿಂದೂಗಳು ಬಹುಸಂಖ್ಯಾರಾಗಿದ್ದರೂ ಅವರಿಗೆ ಸಾಂವಿಧಾನಿಕ ರಕ್ಷಣೆ ಸಿಕ್ಕಿಲ್ಲ. ಮದರಸಾಗಳಲ್ಲಿ ಕುರಾನ್ ಕಲಿಸಲು ಸೆಕ್ಯುಲರ್ ಸರಕಾರವು ಅನುದಾನ ನೀಡುತ್ತದೆ; ಆದರೆ ಹಿಂದೂಗಳಿಗೆ ಅವರ ಧರ್ಮದ ಶಿಕ್ಷಣ ನೀಡಲು ವಿರೋಧಿಸುತ್ತದೆ. ಹಿಂದೂಗಳ ದೇವಾಲಯಗಳನ್ನು ಸೆಕ್ಯುಲರ್ ಸರಕಾರ ನಡೆಸುತ್ತಿದೆ; ಆದರೆ ಮಸೀದಿ ಮತ್ತು ಚರ್ಚ್‌ಗಳ ಸರಕಾರಿಕರಣ ಮಾಡುವುದಿಲ್ಲ. ಹಿಂದೂಗಳು ಇದರ ಜೊತೆಗೆ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನೆ, ಮತಾಂತರ, ಹಿಂದೂಗಳ ಹತ್ಯೆ, ಗೋಹತ್ಯೆ ಇತ್ಯಾದಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಆದ್ದರಿಂದ ಭಾರತದಲ್ಲಿ ಹಿಂದೂಗಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಇರುವ ಏಕೈಕ ಉಪಾಯವೆಂದರೆ ಭಾರತದಲ್ಲಿ ‘ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸುವುದು ! ಇದಕ್ಕಾಗಿ, ಪ್ರತಿಯೊಬ್ಬ ಹಿಂದೂವು ಹಿಂದೂ ರಾಷ್ಟ್ರದ ಸಂಕಲ್ಪವನ್ನು ಮಾಡಿ ತನು-ಮನ-ಧನವನ್ನು ಅರ್ಪಿಸುವ ಮೂಲಕ ತಮ್ಮ ಸಮಯ ಮತ್ತು ಕ್ಷಮತೆಗನುಸಾರ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಯೋಗದಾನ ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸಂತ ಪೂ. ನೀಲೇಶ ಸಿಂಗಬಾಳ ಇವರು ಕರೆ ನೀಡಿದರು. ‘ಹಿಂದೂ ಜನಜಾಗೃತಿ ಸಮಿತಿಯ 20 ನೇ ವರ್ಷ : ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ !’ ಈ ವಿಷಯದ ಕುರಿತು ಆಯೋಜಿಸಿದ್ದ ಆನ್‌ಲೈನ್ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ದೇಶಾದ್ಯಂತ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಮುಖ್ಯಸ್ಥರು ಮತ್ತು ಗಣ್ಯರು ತಮ್ಮ ಮನೋಗತಗಳನ್ನು ವ್ಯಕ್ತಪಡಿಸಿ ಸಮಿತಿಯ ಕಾರ್ಯಕ್ಕೆ ಶುಭ ಕೋರಿದರು.

ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಇವರು ಮಾತನಾಡುತ್ತಾ, ದೇಶದಲ್ಲಿ ಹಿಂದೂವಿರೋಧಿ ಶಕ್ತಿಗಳು, ಎಡಪಂಥೀಯ ಸಿದ್ಧಾಂತ, ಜಾತ್ಯತೀತ ನಾಯಕರು, ಚಲನಚಿತ್ರದ ಕಲಾವಿದರು ಹಿಂದೂ ಧರ್ಮ, ಸಂಸ್ಕೃತಿ, ಹಿಂದೂ ರಾಷ್ಟ್ರ ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ತೇಜೋವಧೆಯ ಅಭಿಯಾನವನ್ನು ಆರಂಭಿಸಿದ್ದಾರೆ. ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಶ್ವಸಂಸ್ಥೆಯ ಸಮಾವೇಶದಲ್ಲಿ ಅದೇ ಮಾತುಗಳನ್ನಾಡುತ್ತಾರೆ. ಇವರಿಬ್ಬರ ನಡುವೆ ಒಡಂಬಡಿಕೆಯಾಗಿದೆಯೇ, ಎಂಬ ಸಂದೇಹ ಮೂಡುತ್ತದೆ. ಈ ಬಗ್ಗೆ ಹಿಂದೂ ಸಮಾಜದಲ್ಲಿ ಜಾಗೃತಿ ಆಗಬೇಕು, ಎಂದರು.

ಹಿಂದೂ ಜನಜಾಗೃತಿ ಸಮಿತಿಯ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯದ ಸಮನ್ವಯಕರಾದ ಶ್ರೀ. ಚೇತನ ಗಾಡಿಯವರು ಮಾತನಾಡುತ್ತಾ, ಮುಸಲ್ಮಾನ ಮತ್ತು ಕ್ರೈಸ್ತ ಪಂಥದವರು ‘ಜಗತ್ತಿನಲ್ಲಿ ತಮ್ಮ ಪಂಥದವರ ರಾಜ್ಯವೇ ಬರಬೇಕು’ ಅದಕ್ಕಾಗಿ ಪ್ರಯತ್ನಿಸುತ್ತಿರುವುದರಿಂದ ಇದು ಧಾರ್ಮಿಕಲ್ಲ, ಒಂದು ರಾಜಕೀಯ ಸಂಕಲ್ಪನೆಯೇ ಆಗಿದೆ. ಹಿಂದೂ ರಾಷ್ಟ್ರವು ರಾಜಕೀಯ ಸಂಕಲ್ಪನೆಯಲ್ಲ ಬದಲಾಗಿ ಧರ್ಮಾಧಿಷ್ಠಿತ ಜೀವನವನ್ನು ನಡೆಸುವ ವ್ಯಾಪಕ ಸಂಕಲ್ಪನೆಯಾಗಿದೆ. ಹಿಂದೂ ರಾಷ್ಟ್ರದಲ್ಲಿ ಮೇಲು-ಕೀಳು ಹೀಗೆ ಭೇದಭಾವ ಇರುವುದಿಲ್ಲ, ಯಾರ ಮೇಲೆಯೂ ಅನ್ಯಾಯ ದೌರ್ಜನ್ಯವಾಗುವುದಿಲ್ಲ. ತದ್ವಿರುದ್ಧ ಮೊಘಲರು ಮತ್ತು ಆಗ್ಲರ ಆಳ್ವಿಕೆಯಲ್ಲಿ ಮನುಷ್ಯನನ್ನು ಗುಲಾಮರನ್ನಾಗಿಸಿ ಮಾರಾಟ ಮಾಡುವ ಅಮಾನವೀಯ ಪದ್ಧತಿ ಆರಂಭವಾಯಿತು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ, ಹಿಂದೂ ರಾಷ್ಟ್ರದ ಮಹಾನ್ ಸಂಕಲ್ಪನೆಯನ್ನು ವಿವಿಧ ಮಾಧ್ಯಮಗಳ ಮೂಲಕ ಹಿಂದೂಗಳ ವರೆಗೆ ತಲುಪಿಸಲು ಸಮಿತಿಯು ಪ್ರಯತ್ನಿಸುತ್ತಿದೆ. ಸಮಿತಿಯು ಧರ್ಮಶಿಕ್ಷಣವರ್ಗ, ಹಿಂದೂಗಳ ಸಂಘಟನೆ ಮತ್ತು ಇತರ ಹಲವಾರು ಉಪಕ್ರಮಗಳನ್ನು ಆರಂಭಿಸಿದೆ. ಹಿಂದೂ ಧರ್ಮದ ಮೇಲಿನ ಆಘಾತಗಳು, ಹಿಂದೂವಿರೋಧಿ ಶಕ್ತಿಗಳ ಪಿತೂರಿಗಳನ್ನು ವಿರೋಧಿಸುವುದರ ಸೇರಿದಂತೆ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಹಿಂದೂಗಳನ್ನು ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ.