ಹಿಂದೂ ಹುಡುಗಿಯರನ್ನು ಸಿಲುಕಿಸಲು ಮುಸಲ್ಮಾನ ಹುಡುಗರನ್ನು ಪ್ರಚೋದಿಸುವ ನೇಪಾಳಿ ಮೌಲಾನಾ (ಇಸ್ಲಾಮಿ ವಿದ್ವಾಂಸನ) ಬಂಧನ !

೨೦ ವರ್ಷಗಳಿಂದ ಭಾರತದಲ್ಲಿ ಅಕ್ರಮ ನೆಲೆಸಿದ್ದ !

ಹಿಂದೂ ಹುಡುಗಿಯರನ್ನು ಮತಾಂತರಿಸುತ್ತಿದ್ದನು !

* ಓರ್ವ ನೇಪಾಳಿ ಮೌಲಾನಾ ಭಾರತದಲ್ಲಿ ಅಕ್ರಮವಾಗಿ ನೆಲೆಸಿ ಇಷ್ಟು ವರ್ಷಗಳ ವರೆಗೆ ಹಿಂದೂವಿರೋಧಿ ಕೃತ್ಯ ಮಾಡುವಾಗ ಭಾರತದಲ್ಲಿನ ವ್ಯವಸ್ಥೆಯು ನಿದ್ರೆ ಮಾಡುತ್ತಿತ್ತೇ? – ಸಂಪಾದಕರು

* ಭಾರತದಲ್ಲಿ ನುಸುಳುಕೋರರಿಂದಾಗಿ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದ್ದು ಅದನ್ನು ನಿಯಂತ್ರಿಸಲು ಸರಕಾರಿ ವ್ಯವಸ್ಥೆಗಳು ನಿಖರವಾದ ಹೆಜ್ಜೆಯನ್ನಿಡದಿರುವುದು ದುರ್ದೈವದ ಸಂಗತಿಯಾಗಿದೆ ! – ಸಂಪಾದಕರು

ಮೌಲಾನಾ ಫಿರೋಜ್ ಆಲಮ

ಗಾಝೀಪುರ (ಉತ್ತರಪ್ರದೇಶ) – ಹಿಂದೂ ಹುಡುಗಿಯರನ್ನು ಸಿಲುಕಿಸಲು ಮುಸಲ್ಮಾನ ಹುಡುಗರನ್ನು ಪ್ರಚೋದನೆ ನೀಡುವ ಮೌಲಾನಾ (ಇಸ್ಲಾಮಿ ವಿದ್ವಾಂಸ) ಫಿರೋಜ್ ಆಲಮನನ್ನು ಪೊಲೀಸರು ಫತೇಹಪುರದಲ್ಲಿ ಬಂಧಿಸಿದ್ದಾರೆ. ಅವನು ಮುಸಲ್ಮಾನ ಹುಡುಗರಿಗೆ, ’ಇತರರ (ಹಿಂದೂಗಳ) ಹುಡುಗಿಯರನ್ನು ಮೋಸಗೊಳಿಸಿ ಕರೆ ತನ್ನಿ. ಇದರಿಂದ ನಿಮಗೆ ಹಣ ಸಿಗುವುದು ಮತ್ತು ಮೋಜು ಮಾಡಲೂ ಆಗುವುದು’ ಎಂದು ಹೇಳುತ್ತಿದ್ದನು. ಅವನು ನೇಪಾಳಿಯಾಗಿದ್ದು ೨೦ ವರ್ಷಗಳಿಂದ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದನು. ಇವನ ವಿರುದ್ಧ ಮಸೀದಿಯ ಸದಸ್ಯರು ಸ್ವತಃ ಪೊಲೀಸರ ಬಳಿ ದೂರನ್ನು ದಾಖಲಿಸಿದ್ದರು. ಇವನ ಮೇಲೆ ಮುಸಲ್ಮಾನ ಹುಡುಗರನ್ನು ಪ್ರಚೋದಿಸುವುದು ಮತ್ತು ಹಿಂದೂ ಹುಡುಗಿಯರ ಮತಾಂತರ ಮಾಡುವ ಆರೋಪವಿದೆ.

. ಅಪರ ಪೊಲೀಸ್ ಅಧೀಕ್ಷಕ ರಾಜೇಶ ಕುಮಾರ್ ಇವರು ಈ ಬಗ್ಗೆ ಮಾಹಿತಿ ನೀಡುತ್ತಾ, ‘ನೇಪಾಳದ ಶಂಕಿತ ನಾಗರಿಕನಾಗಿರುವ ಫಿರೋಜ ಆಲಮನು ಗಾಝೀಪುರ ಜಿಲ್ಲೆಯಲ್ಲಿರುವ ಫತೇಹಪುರದಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿದ್ದನು. ಅಲ್ಲಿ ಅವನು ಮತದಾನದ ಗುರುತಿನ ಚೀಟಿ, ಆಧಾರ ಕಾರ್ಡ, ಪ್ಯಾನ ಕಾರ್ಡ ಮತ್ತು ೨೦೧೬ ರಲ್ಲಿ ಪಾಸ್‌ಪೋರ್ಟನ್ನು ಮಾಡಿಸಿಕೊಂಡಿದ್ದಾನೆ. (ಭಾರತೀಯ ಆಡಳಿತದಲ್ಲಿ ರಾಷ್ಟ್ರಘಾತಕ ಜನರು ಸಹ ತುಂಬಿರುವುದರಿಂದ ನುಸುಳುಕೋರರಿಗೆ ಇಂತಹ ಗುರುತಿನ ಚೀಟಿಗಳು ದೊರೆಯುತ್ತಿವೆ. ಇಂತಹವರನ್ನು ಜೀವಾವಧಿ ಜೈಲಿಗಟ್ಟಬೇಕು ! – ಸಂಪಾದಕರು) ಒಂದು ಸಂಯುಕ್ತ ಗುಂಪು ಅವನ ತನಿಖೆ ಮಾಡಿ ಅವನ ಮೇಲೆ ಅಪರಾಧವನ್ನು ನೋಂದಾಯಿಸಲಾಗಿದೆ’ ಎಂದು ಹೇಳಿದರು.

. ಫತೇಹಪೂರ ಮಸೀದಿ ಸಮಿತಿಯ ಸದಸ್ಯರಾದ ಮಾಜೀದ ಖಾನರವರು ’ಮೌಲಾನಾ ಫಿರೋಜ ಆಲಮ್ ಇವನು ಮುಸಲ್ಮಾನ ಹುಡುಗರಿಗೆ ಅಯೋಗ್ಯ ವಿಷಯಗಳನ್ನು ಕಲಿಸುತ್ತಿದ್ದನು. ಓರ್ವ ಹುಡುಗನು ಬ್ರಾಹ್ಮಣ ಹುಡುಗಿಯನ್ನು ಅಪಹರಿಸಿ ಕರೆತಂದಿದ್ದನು. ಆಗ ಮೌಲಾನಾನು ಆಕೆಯನ್ನು ಮತಾಂತರಿಸಿ ಆಕೆಯ ನಿಖಾಹ ಮಾಡಿಸಿದ್ದನು. ಈ ಬಗ್ಗೆ ಪೊಲೀಸರ ಬಳಿ ದೂರನ್ನು ದಾಖಲಿಸಿದ್ದರೂ ಯಾವುದೇ ಕ್ರಮಗೈಗೊಂಡಿಲ್ಲ’ ಎಂದು ಹೇಳಿದರು. (ಲವ್ ಜಿಹಾದಿನ ವಿರುದ್ಧ ಕಾರ್ಯಾಚರಣೆ ಮಾಡದಿರುವ ಪೊಲೀಸರ ಮೇಲೆ ಕಠಿಣ ಕ್ರಮಕೈಗೊಳ್ಳುವುದು ಅವಶ್ಯಕವಾಗಿದೆ ! – ಸಂಪಾದಕರು)

. ಪೊಲೀಸರು ’ದೇಶದಾದ್ಯಂತ ಮತಾಂತರದ ಜಾಲವನ್ನು ಹೆಣೆಯುವ ಉಮರ ಗೌತಮನು ಈ ಮೌಲಾನಾರ ಬಳಿ ೧೦ ವರ್ಷಗಳಿಂದ ಬಂದು ಹೋಗುತ್ತಿದ್ದನು. ಈ ಬಗ್ಗೆ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.