ಪಾಕನಲ್ಲಿ ಹಿಂದೂ ಯುವಕನನ್ನು ಮತಾಂತರಿಸಿ ಅಪಹರಣ !

ಕುಟುಂಬದವರನ್ನು ಮತಾಂತರಿಸುವಂತೆ ಒತ್ತಡ

ಪಾಕಿಸ್ತಾನಲ್ಲಿ ಹಿಂದೂಗಳ ರಕ್ಷಣೆಯಾಗುವ ಬಗ್ಗೆ ಭಾರತ ಸರಕಾರವು ಯಾವಾಗ ಮುಂದಾಳತ್ವ ವಹಿಸಲಿದೆ? – ಸಂಪಾದಕರು 

ಚಂದೋರ ಕಿಟ್ಚಿ

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ತಂದೋ ಅಲ್ಲಾಯಾರ ಎಂಬ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಚಂದೋರ ಕಿಟ್ಚಿ ಉಪಾಖ್ಯ ಚಂದೂ ಎಂಬ 32 ವರ್ಷದ ಹಿಂದೂ ಯುವಕನನ್ನು ನೆರೆಯಲ್ಲಿ ವಾಸಿಸುವ ಆಝಮ ಕಾಶ್ಮೀರಿ ಎಂಬುವವನು ಬಲವಂತವಾಗಿ ಅಪಹರಿಸಿ ಮತಾಂತರಿಸಿದ ಘಟನೆಯು ಬೆಳಕಿಗೆ ಬಂದಿದೆ. ಈ ವಿಷಯವಾಗಿ ಚಂದೂವು ಪೊಲೀಸು ಠಾಣೆಗೆ ಹೋಗಿ ಅಪರಾಧ ನೋಂದಾಯಿಸಲು ಪ್ರಯತ್ನಿಸಿದಾಗ ಪೊಲೀಸರು ಅಪರಾಧವನ್ನು ನೊಂದಾಯಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಆ ಯುವಕನ ತಂದೆಯು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಸಿಂಧ ಪ್ರಾಂತ್ಯದಲ್ಲಿ ಬಡ ಹಿಂದೂಗಳಿಗೆ ಸಹಾಯ ಮಾಡುವ ‘ಪಾಕಿಸ್ತಾನ ಡ್ರಾಅರ ಅಸೋಸಿಯೇಶನ’ ಎಂಬ ಸಂಸ್ಥೆಯೊಂದು ಈ ಪ್ರಕರಣವನ್ನು ಬೆಳಕಿಗೆ ತಂದಿದೆ. ಈ ಸಂಸ್ಥೆಯ ಅಧ್ಯಕ್ಷ ಫಕೀರ ಶಿವಾರವರು ಘಟನೆಯ ಬಗ್ಗೆ ಮುಂದಿನಂತೆ ತಿಳಿಸಿದ್ದಾರೆ, ಚಂದೂವಿಗೆ ಸಂಚಾರವಾಣಿಯ ಅಂಗಡಿಯಿದೆ. ಸಮೀಪದಲ್ಲಿಯೇ ಕಾಶ್ಮೀರಿಯ ಅಂಗಡಿ ಕೂಡ ಇದೆ. ಚಂದೂ ಅಲ್ಲಿಗೆ ನಿಯಮಿತವಾಗಿ ಹೋಗುತ್ತಿದ್ದನು. ಅಝಮ ಅವನನ್ನು ಬದೀನ ನಗರದಲ್ಲಿನ ಒಬ್ಬ ಮೌಲಾನಾ ಬಳಿಗೆ ಕರೆದುಕೊಂಡು ಹೋದನು. ಅಲ್ಲಿ ಚಂದೂವನ್ನು ಬಲವಂತವಾಗಿ ಮತಾಂತರಿಸಲಾಯಿತು. ಅನಂತರ ಅಝಮನು ಮೂರು ಮಂದಿಯ ಸಹಾಯದಿಂದ ಚಂದೂವನ್ನು ಅಪಹರಿಸಿದನು. ‘ಅವನು ಮಡದಿ ಮಕ್ಕಳನ್ನು ಕರೆಯಿಸಿ ಅವರ ಮತವನ್ನು ಕೂಡ ಬದಲಾಯಿಸು’ ಎಂದು ಹೇಳಲಾಯಿತು. ಚಂದೂವಿಗೆ ಅದು ಒಪ್ಪಿಗೆಯಾಗಲಿಲ್ಲ. ಕೊನೆಗೆ ಚಂದೂ ಅಲ್ಲಿಂದ ಓಡಿ ಹೋದನು ಹಾಗೂ ಪೊಲೀಸು ಠಾಣೆಗೆ ತಲುಪಿದನು. ಪೊಲೀಸರು ಅಪರಾಧ ನೋಂದಾಯಿಸಿಕೊಳ್ಳಲಿಲ್ಲ. ಹಾಗಾಗಿ ಚಂದೂವಿನ ತಂದೆ ಆಬೋ ಕಿಟ್ಚಿಯವರು ಕೆಲವು ಸಂಸ್ಥೆಗಳ ಸಹಾಯ ಕೇಳಿದರು. ನಂತರ ಆಬೋರವರು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದರು. ಆಬೋರವರು ಮುಖ್ಯನ್ಯಾಯಾಧೀಶರು ಹಾಗೂ ಪ್ರಧಾನಮಂತ್ರಿ ಇಮ್ರಾನ್ ಖಾನ್ ರವರ ಬಳಿ ನ್ಯಾಯಕ್ಕಾಗಿ ಬೇಡಿಕೆ ಸಲ್ಲಿಸಿದರು. ‘ನಮಗೆ ಪ್ರತೀದಿನ ಅಝಮ ಹಾಗೂ ಅವರ ಸಹಚರರಿಂದ ಬೆದರಿಕೆ ಬರುತ್ತಿದೆ’, ಎಂದು ಕೂಡ ಅವರು ಹೇಳಿದರು.

ಪ್ರಧಾನಮಂತ್ರಿ ಇಮ್ರಾನ್ ಖಾನ್ ರವರು ತಹರೀಕ-ಎ-ಇನ್ಸಾಫ ಪಕ್ಷದ ಹಿಂದೂ ಸಾಂಸದರಾದ ಲಾಲಚಂದ ಮಾಳಿಯವರು ಈ ಘಟನೆಯ ಹಿಂದೆ ಮತಾಂಧರಿದ್ದಾರೆ. ನಾನೇ ಸ್ವತಃ ಈ ಪ್ರಕರಣದ ಕಡೆ ಗಮನ ನೀಡುತ್ತಿದ್ದೇನೆ. ಚಂದೂರವರ ಕುಟುಂಬದವರಿಗೆ ಸಂರಕ್ಷಣೆ ಒದಗಿಸಲಾಗುವುದು ಎಂದು ಹೇಳಿದರು.