
‘ಹಿಂಗಲಾಜಮಾತಾ ದೇವಸ್ಥಾನ’ವು ೫೧ ಶಕ್ತಿಪೀಠಗಳಲ್ಲಿ ಒಂದಾಗಿದ್ದು ಅದು ಪಾಕಿಸ್ತಾನದಲ್ಲಿದೆ. ಈ ಸ್ಥಳದಲ್ಲಿ ಸತಿಯ ಬ್ರಹ್ಮರಂಧ್ರವು (ತಲೆ) ಬಿದ್ದಿತ್ತು. ಅದು ಬಲುಚಿಸ್ತಾನದ ಲಾರಿ ತಾಲೂಕಿನಲ್ಲಿ ಒಂದು ದಟ್ಟವಾದ ಕಣಿವೆಪ್ರದೇಶದಲ್ಲಿದೆ. ಹಿಂಗೋಲ ನದಿಯ ತೀರದಲ್ಲಿ ಮತ್ತು ಮಕರಾನ ಮರುಭೂಮಿಯ ಖೇರಥಾರ ಎಂಬ ಬೆಟ್ಟಗಳಲ್ಲಿ ನೆಲೆಸಿರುವ ಶ್ರೀ ಹಿಂಗಲಾಜಮಾತೆಯ ದೇವಸ್ಥಾನವು ಕೋಟ್ಯಂತರ ಹಿಂದೂಗಳ ಶ್ರದ್ಧಾಸ್ಥಾನವಾಗಿದೆ.
ಶ್ರೀ ಹಿಂಗಲಾಜಮಾತೆಯ ಸ್ವಯಂಭೂ ಶಿಲೆ
ಶ್ರೀ ಹಿಂಗಲಾಜಮಾತೆಯ ದೇವಸ್ಥಾನವು ಒಂದು ನೈಸರ್ಗಿಕ ಗುಹೆಯಲ್ಲಿದೆ. ದೇವಸ್ಥಾನದಲ್ಲಿ ಒಂದು ಮಣ್ಣಿನ ಯಜ್ಞವೇದಿಯಿದೆ. ಈ ದೇವಸ್ಥಾನದಲ್ಲಿ ದೇವಿಯ ಮೂರ್ತಿಯಾಗಿರದೇ ಸ್ವಯಂಭೂ ಶಿಲೆಯಾಗಿದೆ. ಈ ಶಿಲೆಯನ್ನು ಸಿಂಧೂರದಿಂದ ಅಲಂಕರಿಸಲಾಗಿದೆ. ಅದಕ್ಕೆ ಸಂಸ್ಕೃತದಲ್ಲಿ ‘ಹಿಂಗುಲಾ’ ಎನ್ನುತ್ತಾರೆ. ಅಂದಿನಿಂದ ಬಹುಶಃ ಶ್ರೀ ಹಿಂಗಲಾಜಮಾತೆಗೆ ಈ ಹೆಸರು ಲಭಿಸಿರಬಹುದು. ಈ ಸ್ಥಳದಲ್ಲಿ ಶ್ರೀ ಹಿಂಗಲಾಜದೇವಿಗೆ ‘ಹಿಂಗುಲಾದೇವಿ ಎಂದು ಕರೆಯುತ್ತಾರೆ. ಕಳೆದ ೩ ದಶಮಾನಗಳಲ್ಲಿ ಈ ದೇವಸ್ಥಾನವು ತುಂಬಾ ಜನಪ್ರಿಯವಾಗಿದೆ. ಡೋಡಿಯಾ ರಾಜಪೂತರಿಗೆ ದೇವಿಯು ಪ್ರಥಮ ಕುಲದೇವಿಯೆಂದು ಪೂಜನೀಯಳಾಗಿದ್ದಾಳೆ. ಈ ಪರಿಸರದಲ್ಲಿ ಹಿಂಗಲಾಜದೇವಿಯ ದೇವಸ್ಥಾನವಲ್ಲದೇ ಇತರ ಪೂಜಾಸ್ಥಳಗಳಿವೆ. (ಆಧಾರ : ಜಾಲತಾಣ)
| ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮ ಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ. ಸರ್ವಸ್ವರೂಪಿ, ವಿಶ್ವಸ್ವಾಮಿನಿ ಮತ್ತು ಸರ್ವಸಾಮರ್ಥ್ಯಶಾಲಿ ಶಕ್ತಿ ಅಂದರೆ ದೇವಿಯು ಎಲ್ಲ ಸಂಕಟಗಳಿಂದ ಮುಕ್ತಗೊಳಿಸುತ್ತಾಳೆ. |
‘ಹಿಂದೂ’ ಕುರಿತ ವಿವಾದಾತ್ಮಕ ಹೇಳಿಕೆ; 11 ಮಂದಿಗೆ ಹೈಕೋರ್ಟ್ ಹಿನ್ನಡೆ : Hindu Remark Verdict
ದೇವಸ್ಥಾನದ ಬಳಿ ₹472 ಕೋಟಿ FD, ₹300 ಕೋಟಿ ಚಿನ್ನ-ಬೆಳ್ಳಿ : Sri Mahakaleshwar Temple
ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ಬಳಿಕ ಹುಸೇನ್ ಶೇಖ್ ಕ್ಷಮೆಯಾಚನೆ : Hussain Sheikh Apology
ವಿದೇಶಿ ಹೆಸರು ಇದ್ದರೂ ಹಿಂದೂ ಧರ್ಮದ ಮೇಲಿನ ಶ್ರದ್ಧೆ ಕಡಿಮೆಯಾಗುವುದಿಲ್ಲ’ : Hindu Faith Statement
ಕ್ಷಿಪಣಿಗಳಿಗೆ ಅಫ್ಘಾನಿ ದರೋಡೆಕೋರರ ಹೆಸರುಗಳನ್ನು ನೀಡಿದ್ದರಿಂದ ಪಾಕಿಸ್ತಾನಕ್ಕೆ ಮುಜುಗರ!
ಶಾಮಲಿ (ಉತ್ತರಪ್ರದೇಶ) ಇಲ್ಲಿನ ಆಯುಷ ಮಲಿಕನಿಂದ ಇಸ್ಲಾಂ ತೊರೆದು ಪುನಃ ಹಿಂದೂ ಧರ್ಮ ಸ್ವೀಕಾರ ! : Shamili Love Jihad