ಮಾಲವಾ (ಮಧ್ಯಪ್ರದೇಶ) ನಲ್ಲಿ ಹಿಂದೂ ನೌಕರನ ಬಲವಂತವಾಗಿ ಮತಾಂತರ ಮತ್ತು ಸುಂತಾ ಮಾಡುವ ಮತಾಂಧ ಡಾಕ್ಟರ್ ಮತ್ತು ಅವನ ಮಗನ ಮೇಲೆ ಅಪರಾಧ ದಾಖಲು

* ಮಾಲವಾ ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿದೆಯೋ ? ಮಧ್ಯಪ್ರದೇಶದಲ್ಲಿ ಭಾಜಪಾದ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದು. ಎಂದು ಹಿಂದೂಗಳಿಗೆ ಅನಿಸುತ್ತದೆ. ಮತಾಂಧರಲ್ಲಿ ಸರಕಾರದ ಭಯ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ! – ಸಂಪಾದಕರು 

* ಮತಾಂಧ ಎಷ್ಟೇ ಕಲಿತಿದ್ದರೂ, ಅವರು ತಮ್ಮ ಧರ್ಮಕ್ಕನುಸಾರವಾಗಿ ಕಟ್ಟರವಾದಿ ಇರುತ್ತಾರೆ ಮತ್ತು ಹಿಂದುಗಳ ಮೇಲೆ ದಾಳಿ ಮಾಡುತ್ತಾರೆ, ಆದರೆ ಹಿಂದೂ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ನಂತರ ಹೆಚ್ಚು ಪ್ರಗತಿ(ಅಧೋಗತಿ)ಪರ ಮತ್ತು ನಾಸ್ತಿಕನಾಗುತ್ತಾನೆ, ಹಾಗೂ ಜಗತ್ತಿಗೆ ಹಾಗೆಯೇ ತೋರಿಸುತ್ತಾರೆ ! – ಸಂಪಾದಕರು 

ಮಾಲವಾ (ಮಧ್ಯ ಪ್ರದೇಶ) – ಇಲ್ಲಿಯ ಡಾ. ನಾಸಿರ್ ಖಾನ್ ಮತ್ತು ಅವನ ಮಗ ಜುಬೇರ್ ಖಾನ್ ಇವರು ತಮ್ಮ ನೌಕರ ದಶರತ ಇವನನ್ನು ಬಲವಂತವಾಗಿ ಮತಾಂತರ ಮಾಡಿ ಅವನ ಸುಂತಾ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ. ಡಾ. ನಾಸಿರ್ ಮತ್ತು ಜುಬೇರ್ ಇವರು ದಶರಥನನ್ನು ದೇವಸ್ಥಾನಕ್ಕೆ ಹೋಗಿದ್ದರಿಂದ ಥಳಿಸಿದ್ದಾರೆ, ಮತ್ತು ಬಲವಂತವಾಗಿ ನಮಾಜ್ ಪಠಣ ಮಾಡಿಸಿದ್ದಾರೆ. 2007 ರಿಂದ ದಶರಥ ಅವರಲ್ಲಿ ಕೆಲಸಕ್ಕೆ ಇದ್ದನು. ‘ಅವರಿಬ್ಬರೂ ‘ನಿನ್ನನ್ನು ಅನೇಕ ವರ್ಷಗಳಿಂದ ಸಾಕಿದ್ದರಿಂದ ನೀನು ಇಸ್ಲಾಂ ಸ್ವೀಕರಿಸಬೇಕು’, ಎಂದು ಹೇಳುತ್ತಾ ನನ್ನ ಮೇಲೆ ಒತ್ತಡ ತಂದು ನನ್ನನ್ನು ಥಳಿಸುತ್ತಿದ್ದರು’, ಎಂದು ದಶರಥ ದೂರಿನಲ್ಲಿ ನಮೂದಿಸಿದ್ದಾನೆ. ಮಧ್ಯಪ್ರದೇಶ ಸರಕಾರ ಹೊಸ ಮತಾಂತರ ವಿರೋಧಿ ಕಾನೂನಿನ ಅನುಸಾರ ಅಪರಾಧಿಗೆ ಹೆಚ್ಚು ಹೆಚ್ಚು ಅಂದರೆ ಹತ್ತು ವರ್ಷ ಸೆರೆಮನೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿ ಶಿಕ್ಷೆ ಆಗಬಹುದು.