ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಸದ್ಯ ಕೊರೊನಾ ರೂಪದಲ್ಲಿ ಆಪತ್ಕಾಲದ ತುಣುಕನ್ನು ಅನುಭವಿಸುತ್ತಿದ್ದೇವೆ. ‘ಚಿಕಿತ್ಸಾಲಯಕ್ಕೆ ಹೋಗಬೇಕೆಂದರೆ ಬಹಳ ಜನದಟ್ಟಣೆ ಇರುತ್ತದೆ. ಔಷಧಾಲಯದಲ್ಲಿ ಔಷಧಿಗಳು ಲಭ್ಯವಿರುವುದಿಲ್ಲ, ಆನ್‌ಲೈನ್ ಔಷಧಿಗಳನ್ನು ತರಿಸಿದರೂ, ಸಂಚಾರ ನಿರ್ಬಂಧದ ಕಾರಣದಿಂದ ಸರಿಯಾದ ಸಮಯಕ್ಕೆ ಅವು ತಲುಪುವುದಿಲ್ಲ, ಔಷಧಿಗಳ ಕೊರತೆಯಿರುವುದರಿಂದ ಅವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ, ಇತ್ಯಾದಿ ಅನೇಕ ಕೆಟ್ಟ ಅನುಭವಗಳನ್ನು ಅನೇಕ ಜನರು ಪಡೆದಿದ್ದಾರೆ. ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ. ಈ ಔಷಧಿಗಳು ಬೇಗನೆ ಉಪಲಬ್ಧವಾಗಲಿದೆ. ಈ ಔಷಧಗಳ ಕುರಿತು ಮಾಹಿತಿಯನ್ನು ನಾವು ಒಂದೊಂದಾಗಿ ತಿಳಿದುಕೊಳ್ಳುವವರಿದ್ದೇವೆ.

ಸನಾತನದ ಆಯುರ್ವೇದಿಕ ಔಷಧಿಗಳು (ಪ್ರಾತಿನಿಧಿಕ ಛಾಯಾಚಿತ್ರ)

೧೯. ಸನಾತನದ ಲಶುನಾದಿ ವಟಿ (ಮಾತ್ರೆ)

೨೦ ಅ. ಗುಣಧರ್ಮ ಮತ್ತು ಸಂಭಾವ್ಯ ಉಪಯೋಗ : ಇದೊಂದು ಒಳ್ಳೆಯ ಜೀರ್ಣ ಮಾಡುವ ಔಷಧಿಯಾಗಿದೆ. ರೋಗಗಳಲ್ಲಿ ಇದರ ಸಂಭಾವ್ಯ ಉಪಯೋಗದ ಬಗ್ಗೆ ಮುಂದೆ ವಿವರಿಸಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಜೊತೆಗಿರುವ ಇತರ ರೋಗಗಳಿಗನುಸಾರ ಚಿಕಿತ್ಸೆಯಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ವೈದ್ಯರ ಸಲಹೆಗನುಸಾರ ಔಷಧಿಯನ್ನು ತೆಗೆದುಕೊಳ್ಳಬೇಕು.

೧೯ ಆ. ಸೂಚನೆ

೧. ೩ ರಿಂದ ೭ ವರ್ಷ ವಯಸ್ಸಿನ ಮಕ್ಕಳಿಗೆ ಕಾಲು ಭಾಗ ಮತ್ತು ೮ ರಿಂದ ೧೪ ವರ್ಷ ವಯಸ್ಸಿನ ಮಕ್ಕಳಿಗೆ ಅರ್ಧ ಪ್ರಮಾಣದಲ್ಲಿ ಚೂರ್ಣವನ್ನು ಕೊಡಬೇಕು

. ಉಷ್ಣತೆಯ ಲಕ್ಷಣಗಳು (ಉಷ್ಣ ಪದಾರ್ಥ ಒಗ್ಗದಿರುವುದು, ಬಾಯಿ ಹುಣ್ಣು, ಮೈ ಉರಿ, ಮೂತ್ರಮಾರ್ಗದಲ್ಲಿ ಉರಿ, ಮೈಮೇಲೆ ಬೊಕ್ಕೆಗಳು ಏಳುವುದು, ತಲೆತಿರುಗುವುದು ಇತ್ಯಾದಿ) ಇರುವಾಗ ಮತ್ತು ಮಲವು ಗಟ್ಟಿಯಾಗುತ್ತಿದ್ದರೆ ಈ ಔಷಧಿಯನ್ನು ಉಪಯೋಗಿಸಬಾರದು.

೩. ಈ ಔಷಧ ಉಷ್ಣವಾಗಿರುವುದರಿಂದ ಬೇಸಿಗೆ ಮತ್ತು ಮಳೆಗಾಲದ ನಂತರ ಶರದ ಋತು (ಅಕ್ಟೋಬರ್ ಬಿಸಿಲು)ವಿನ ಕಾಲಾವಧಿಯಲ್ಲಿ ಜಾಗರೂಕತೆಯಿಂದ ಉಪಯೋಗಿಸಬೇಕು.

. ಈ ಮಾತ್ರೆಗಳಲ್ಲಿ ಸೈಂಧವ ಉಪ್ಪು ಇರುವುದರಿಂದ ಇದು ಹೆಚ್ಚು ಸಮಯ ಗಾಳಿಯ ಸಂಪರ್ಕಕ್ಕೆ ಬಂದರೆ ಗಾಳಿಯಲ್ಲಿನ ಆರ್ದ್ರತೆಯಿಂದ ಒದ್ದೆಯಾಗಿ ಹಾಳಾಗುತ್ತದೆ. ಹಾಗಾಗಬಾರದೆಂದು ಡಬ್ಬದ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು.

೨೦. ಸನಾತನ ಚಂದ್ರಾಮೃತ ರಸ (ಮಾತ್ರೆಗಳು)

೧೯ ಅ. ಸಂಭಾವ್ಯ ಉಪಯೋಗ : ಇದು ಶ್ವಸನಕ್ರಿಯೆಗೆ ಬಲ ನೀಡುವ ಔಷಧಿಯಾಗಿದೆ. ಇವುಗಳಿಂದ ರೋಗಗಳಲ್ಲಿ ಸಂಭಾವ್ಯ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ಅದರೊಂದಿಗಿನ ಇತರ ರೋಗಗಳಿಗನುಸಾರ ಚಿಕಿತ್ಸೆಯಲ್ಲಿ ಬದಲಾವಣೆಯಾಗಬಹುದು. ಆದ್ದರಿಂದ ಔಷಧವನ್ನು ವೈದ್ಯರ ಮಾರ್ಗದರ್ಶನದಲ್ಲೇ ತೆಗೆದುಕೊಳ್ಳಬೇಕು

೨೦ ಆ. ಸೂಚನೆ : ೩ ರಿಂದ ೭ ನೇ ವಯಸ್ಸಿನವರಿಗೆ ಕಾಲು ಭಾಗ ಹಾಗೂ ೮ ರಿಂದ ೧೪ ವಯಸ್ಸಿನವರಿಗೆ ಅರ್ಧ ಪ್ರಮಾಣದಲ್ಲಿ ಔಷಧಿಯನ್ನು ನೀಡಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೬.೨೦೨೧)

(ಮುಕ್ತಾಯ)