ಜಗತ್ತಿನಾದ್ಯಂತದ ಹಿಂದೂಗಳು ಹಿಂದೂ ಧರ್ಮದ ಯೋಗ್ಯ ತಾತ್ತ್ವಿಕ ನಿಲುವನ್ನು ಮಂಡಿಸಿದ್ದರಿಂದ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತು ವಿಫಲ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ

‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನಲ್ಲಿ ಹಿಂದೂವಿರೋಧಿ ಪ್ರಚಾರ !’ ಈ ವಿಷಯದಲ್ಲಿ ಆಯೋಜಿಸಿದ್ದ ವಿಶೇಷ ಸಂವಾದ !

ಅಮೇರಿಕಾದಲ್ಲಿ ಆಯೋಜಿಸಲಾದ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನಲ್ಲಿ ತಥಾಕಥಿತ ಅಧ್ಯಯನಕಾರರು ಹಿಂದೂ ಧರ್ಮದಲ್ಲಿನ ವರ್ಣ, ಜಾತಿವ್ಯವಸ್ಥೆ ಮುಂತಾದವುಗಳ ಬಗ್ಗೆ ಗೊಂದಲದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದರು. ಮತಾಂತರದ ಉದ್ದೇಶದಿಂದ ಬ್ರಿಟಿಷ ಮಿಶನರಿಗಳು ಬ್ರಾಹ್ಮಣವಾದಕ್ಕೆ ಜನ್ಮ ನೀಡಿದರು ಮತ್ತು ಅದನ್ನು ಮುಂದೆ ಕೊಂಡೊಯ್ಯುವ ಕೆಲಸವನ್ನು ಇಂತಹ ಹಿಂದೂವಿರೋಧಿ ಪರಿಷತ್ತುಗಳು ಮಾಡುತ್ತಿವೆ. ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತನ್ನು ಆಯೋಜಿಸುವ ಮೊದಲು ಆಯೋಜಕರು ಹಿಂದೂ ಧರ್ಮದ ಬಗ್ಗೆ ವಿವಿಧ ಭ್ರಮೆಗಳನ್ನು ಹರಡಿ ಮೇಲಿಂದ ಮೇಲೆ ತಮ್ಮ ನಿಲುವನ್ನು ಬದಲಿಸಿದರು. ಇಂತಹ ಅಪಪ್ರಚಾರಗಳ ಮೇಲೆ ವಿಶ್ವಾಸವಿಡದೇ ಜಗತ್ತಿನಾದ್ಯಂತದ ಹಿಂದೂ ಬಾಂಧವರು ದೊಡ್ಡ ಪ್ರಮಾಣದಲ್ಲಿ ಹಿಂದೂ ಧರ್ಮದ ಪ್ರಸಾರವನ್ನು ಮಾಡಬೇಕು. ಜಗತ್ತಿನಾದ್ಯಂತದ ಹಿಂದೂಗಳು ಹಿಂದೂ ಧರ್ಮದ ಯೋಗ್ಯ ತಾತ್ತ್ವಿಕ ನಿಲುವನ್ನು ಮಂಡಿಸಿದುದರಿಂದ, ಹಾಗೆಯೇ ಹಿಂದೂಗಳ ಸಾವಿರಾರು ವರ್ಷಗಳ ಮನುಕುಲದ ಮತ್ತು ವಿಶ್ವಕ್ಕೆ ಪೂರಕವಾದಂತಹ ಇತಿಹಾಸವನ್ನು ಸಮಾಜಕ್ಕೆ ಹೇಳಿದುದರಿಂದ ಅಮೇರಿಕಾದಲ್ಲಿ ನಡೆದ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತು ವಿಫಲವಾಯಿತು, ಎಂಬ ಹೇಳಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನಲ್ಲಿ ಹಿಂದೂವಿರೋಧಿ ಪ್ರಚಾರ !’ ಎಂಬ ಈ ಆನ್ ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

‘ಇಶಿತ್ವ ಫೌಂಡೇಶನ್’ ಇದರ ಸಂಚಾಲಕಿ ಆರತಿ ಅಗರವಾಲ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಈ ಹಿಂದೂವಿರೋಧಿ ಪರಿಷತ್ತಿನಲ್ಲಿ ‘ಹಿಂದುತ್ವದ’ ಬಗ್ಗೆ ಯಾವ ರೀತಿಯ ತಪ್ಪು ಚಿತ್ರಣವನ್ನು ಸೃಷ್ಟಿಸುವ ಉದ್ದೇಶವಿತ್ತೆಂದರೆ ಇತಿಹಾಸದಲ್ಲಾದ ಹಿಂದೂಗಳ ನರಮೇಧವು ಯೋಗ್ಯವೇ ಇತ್ತು ಮತ್ತು ಮುಂದಿನ ನರಮೇಧವೂ ಯೋಗ್ಯವೇ ಇರುವುದು, ಎಂದು ಹೇಳಬಯಸಿದ್ದರು. ಪ್ರಸ್ತುತ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂ ಹುಡುಗಿಯರ ಮೇಲೆ ಅತ್ಯಾಚಾರಗಳಾಗುತ್ತಿವೆ. ಹಿಂದೂ ಗ್ರಾಮಗಳು ಮತ್ತು ವಸಾಹತುಗಳನ್ನು ಸುಡಲಾಗುತ್ತಿದೆ. ಹಿಂದೂಗಳನ್ನು ಎಷ್ಟೇ ಗುರಿಯಾಗಿಸಿದರೂ ಮಾನವಹಕ್ಕುಗಳ ಕಾರ್ಯಕರ್ತರು ಅದರತ್ತ ಗಮನ ಹರಿಸಲಾರರು ಎಂಬಂತಹ ಸ್ಥಿತಿಯನ್ನು ಅವರಿಗೆ ನಿರ್ಮಿಸಲಿಕ್ಕಿತ್ತು ಎಂದರು.

ಮನೋವೈದ್ಯ ಮತ್ತು ಲೇಖಕ ಡಾ. ರಜತ್ ಮಿತ್ರ ಇವರು ಈ ಸಮಯದಲ್ಲಿ ಮತನಾಡುತ್ತಾ, ಈ ಹಿಂದೂವಿರೋಧಿ ಪರಿಷತ್ತಿನಿಂದ ಕೇವಲ ಹಿಂದೂವಿರೋಧಿ ಪಕ್ಷವನ್ನು ಪ್ರಸ್ತುತಪಡಿಸುವ ಮೂಲಕ ಅದನ್ನು ‘ನೈಜ’ ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಬೇರೆ ಬೇರೆ ವಿಶ್ವವಿದ್ಯಾನಿಲಯಗಳು ಒಟ್ಟುಗೂಡಿ ಹಿಂದೂ ಧರ್ಮವನ್ನು ಅಪಾಯಕಾರಿ ಎಂದು ತಿಳಿದು ಹಿಂದೂಗಳ ಧ್ವನಿಯನ್ನು ದಮನ ಮಾಡಲು ಪ್ರಯತ್ನಿಸಿದವು. ನಮ್ಮ ಅನೇಕ ಹಿಂದೂ ಯುವಕರು ವಿದೇಶದಲ್ಲಿ ಓದುತ್ತಿದ್ದಾರೆ. ’ಹಿಂದೂಗಳು ಹೋರಾಡಿ ಹಿಂದೂ ಧರ್ಮವನ್ನು ವಿವಿಧ ಆಕ್ರಮಣಗಳಿಂದ ರಕ್ಷಿಸಿದರು’ ಎಂಬ ಇತಿಹಾಸವನ್ನು ಹಿಂದೂ ಯುವಕರಿಗೆ ಸಮಗ್ರ ರೀತಿಯಲ್ಲಿ ಕಲಿಸಬೇಕು ಮತ್ತು ಅವರಿಗೆ ಹಿಂದೂ ಧರ್ಮದ ಕಡೆಗೆ ಅವರ ಕರ್ತವ್ಯದ ಬಗ್ಗೆ ಅರಿವು ಮೂಡಿಸಬೇಕು, ಎಂದರು.

ಆಸ್ಟ್ರೇಲಿಯಾದ ಚಿಂತಕ ಡಾ. ಯದು ಸಿಂಹ ಇವರು ಮತನಾಡುತ್ತಾ, ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಈ ಪರಿಷತ್ತಿನ ಆಯೋಜಕರು ಮತ್ತು ಭಾಷಣಕಾರರು ಕೇವಲ ಹಿಂದೂ ಧರ್ಮವಿರೋಧಿ ಮಾತ್ರವಲ್ಲ, ನಕ್ಸಲೀಯರನ್ನು ಬೆಂಬಲಿಸುವವರು, ಭಾರತೀಯ ಸೇನೆಯ ವಿರುದ್ಧ ಮಾತನಾಡುವ ದೇಶವಿರೋಧಿಗಳಾಗಿದ್ದಾರೆ. ಈ ಪರಿಷತ್ತನ್ನುನ್ನು ಜಗತ್ತಿನಾದ್ಯಂತದ ಹಿಂದೂಗಳು ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮಗಳ ಮೂಲಕ ವಿರೋಧಿಸಿದ್ದರಿಂದ ಅವರ ಉದ್ದೇಶವು ಯಶಸ್ವಿಯಾಗಲಿಲ್ಲ, ಎಂದರು.