ನೃತ್ಯಗಳ ವಿಷಯದಲ್ಲಿ ನಾವಿನ್ಯಪೂರ್ಣ ಅದ್ವಿತೀಯ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಮಹರ್ಷಿ ಅಧ್ಯಾತ್ಮವಿಶ್ವವಿದ್ಯಾಲಯವು ಯುನಿವರ್ಸಲ್ ಥರ್ಮೋ ಸ್ಕ್ಯಾನರ್ (ಯು.ಎ.ಎಸ್) ಈ ಉಪಕರಣದ ಮೂಲಕ ಮಾಡಿರುವ ವೈಜ್ಞಾನಿಕ ಪರೀಕ್ಷಣೆ |
ಛತ್ತೀಸಗಡ ರಾಜ್ಯದ ದುರ್ಗದ ಕು. ಶರ್ವರಿ ಕಾನಸ್ಕರ ಇವಳು ಗೋವಾದ ಸನಾತನದ ಆಶ್ರಮದಲ್ಲಿ ಭಾರತೀಯ ಶಾಸ್ತ್ರೀಯ ಕಥಕ್ ನೃತ್ಯ ಹಾಗೂ ‘ಫ್ಯೂಜನ್ ಸಂಗೀತ (ಎರಡು ಅಥವಾ ಅದಕ್ಕಿಂತ ಹೆಚ್ಚು ಪ್ರಕಾರಗಳ ಸಂಗೀತಗಳ ಮಿಶ್ರಣ) ಹಾಗೂ ಪಾಶ್ಚಾತ್ಯ ಸಂಗೀತಗಳ ಮೇಲಾಧಾರಿಸಿದ ಗೀತೆಗಳಿಗೆ ಸಂಬಂಧಿಸಿದಂತೆ ನೃತ್ಯಗಳನ್ನು ಪ್ರಸ್ತುತ ಪಡಿಸಿದಳು. ‘ಈ ಮೂರೂ ಪ್ರಕಾರಗಳಲ್ಲಿ ಪ್ರಸ್ತುತ ಪಡಿಸಿದ ನೃತ್ಯಗಳಿಂದ ಸಾಧಕ-ವೀಕ್ಷಕರ ಮೇಲೆ, ಹಾಗೆಯೇ ಅವಳ ಮೇಲೆ ಯಾವ ಪರಿಣಾಮವಾಗುತ್ತದೆ ?, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನಕ್ಕಾಗಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಈ ಉಪಕರಣವನ್ನು ಉಪಯೋಗಿಸಲಾಯಿತು. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ ಮತ್ತು ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ
ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇರುವ ಓರ್ವ ಸಾಧಕಿ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಓರ್ವ ಸಾಧಕರು ವೀಕ್ಷಕರೆಂದು ಭಾಗವಹಿಸಿದ್ದರು. ಈ ಪರೀಕ್ಷಣೆಯಲ್ಲಿ ಒಟ್ಟು ೩ ಪ್ರಯೋಗಗಳನ್ನು ಮಾಡಲಾಯಿತು.
ಟಿಪ್ಪಣಿ – ಆಧ್ಯಾತ್ಮಿಕ ತೊಂದರೆ : ಆಧ್ಯಾತ್ಮಿಕ ತೊಂದರೆ ಇರುವುದು, ಎಂದರೆ, ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ಅಥವಾ ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿರುವುದೆಂದರೆ, ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ೪೯ ರಷ್ಟು ಇರುವುದೆಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆ ಇರುವುದೆಂದರೆ ಮಂದ ಆಧ್ಯಾತ್ಮಿಕ ತೊಂದರೆ ಎಂದಾಗುತ್ತದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳ ಕಾರಣವನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ತಿಳಿಯುವ ಸಾಧಕರು ಕಂಡು ಹಿಡಿಯುತ್ತಾರೆ.
ಅ. ಮೊದಲ ಪ್ರಯೋಗದಲ್ಲಿ ಶರ್ವರಿಯು ಭಾರತೀಯ ಶಾಸ್ತ್ರೀಯ ಸಂಗೀತದ ಮೇಲೆ ಆಧರಿಸಿದ ಕಥ್ಥಕ್ ನೃತ್ಯದಲ್ಲಿನ ‘ತೋಡೆ ಈ ಪ್ರಕಾರವನ್ನು ‘ಝಪತಾಲದಲ್ಲಿ ಪ್ರಸ್ತುತಪಡಿಸಿದಳು.
ಆ. ಎರಡನೇಯ ಪ್ರಯೋಗದಲ್ಲಿ ಅವಳು ‘ಫ್ಯೂಜನ್ (Fusion) ಸಂಗೀತದ ಮೇಲೆ ಆಧರಿಸಿದ Shape of You‘ಈ ಆಂಗ್ಲ ಗೀತೆಗೆ ಸಂಬಂಧಿಸಿದಂತೆ ನೃತ್ಯವನ್ನು ಪ್ರಸ್ತುತ ಪಡಿಸಿದಳು.
ಇ. ಮೂರನೇಯ ಪ್ರಯೋಗದಲ್ಲಿ ಅವಳು ಪಾಶ್ಚಾತ್ಯ ಸಂಗೀತದ ಮೇಲೆ ಆಧರಿಸಿದ ‘ತೇನೂ ಕಾಲಾ ಚಸ್ಮಾ ಜಚದಾವೆ ಗೋರೆ ಮುಖಡೆ ಪೆ ಈ ಹಿಂದಿ ಗೀತೆಗೆ ಸಂಬಂಧಿಸಿದಂತೆ ನೃತ್ಯವನ್ನು ಪ್ರಸ್ತುತ ಪಡಿಸಿದಳು.
ಮೂರೂ ಪ್ರಯೋಗಗಳಲ್ಲಿ ನೃತ್ಯವನ್ನು ಮಾಡುವ ಮೊದಲು ಮತ್ತು ನೃತ್ಯವನ್ನು ಮಾಡಿದನಂತರ ಕು. ಶರ್ವರಿಯ ಹಾಗೆಯೇ ಆ ನೃತ್ಯವನ್ನು ನೋಡುವ ಮೊದಲು ಮತ್ತು ನೃತ್ಯವನ್ನು ನೋಡಿದ ನಂತರ ಸಾಧಕ-ವೀಕ್ಷಕರ ‘ಯು.ಎ.ಎಸ್. ಉಪಕರಣದ ಮೂಲಕ ನಿರೀಕ್ಷಣೆಯನ್ನು ಮಾಡಲಾಯಿತು. ಇವೆಲ್ಲ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.
೧ ಅ. ನಕಾರಾತ್ಮಕ ಹಾಗೂ ಸಕಾರಾತ್ಮಕ ಊರ್ಜೆಗೆ ಸಂಬಂಧಿಸಿದ ನಿರೀಕ್ಷಣೆಗಳ ವಿಶ್ಲೇಷಣೆ- ಪರೀಕ್ಷಣೆಯಲ್ಲಿನ ಮೂರೂ ನೃತ್ಯಗಳ ಪ್ರಯೋಗಗಳಿಂದ ಶರ್ವರಿ ಮತ್ತು ಸಾಧಕ-ವೀಕ್ಷಕರ ಮೇಲಾಗಿರುವ ಪರಿಣಾಮ
ಟಿಪ್ಪಣಿ – ‘ಔರಾ ಸ್ಕ್ಯಾನರ್’ನ ಭುಜಗಳು ೧೪೦ ರ ಅಂಶದ ಕೋನವನ್ನು ತೋರಿಸಿದವು. (ಇಲ್ಲಿ ‘೧೮೦ ಅಂಶದ ಕೋನವನ್ನು ತೋರಿಸಿದರೆ ಮಾತ್ರ ಪ್ರಭಾವಲಯ ಅಳೆಯಬಹುದು.)
ಈ ಲೇಖನದಲ್ಲಿ ನೀಡಿದ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.
೧. ಶರ್ವರಿಯು ‘ಫ್ಯೂಜನ್’, ಹಾಗೆಯೇ ಪಾಶ್ಚಾತ್ಯ ಸಂಗೀತವನ್ನು ಆಧರಿಸಿದ ಗೀತೆಗಳಿಗೆ ಸಂಬಂಧಿಸಿದಂತೆ ನೃತ್ಯವನ್ನು ಮಾಡಿದ ನಂತರ ಅವಳಲ್ಲಿ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ನಿರ್ಮಾಣವಾಯಿತು ಹಾಗೂ ಅವಳಲ್ಲಿನ ಸಕಾರಾತ್ಮಕ ಊರ್ಜೆಯು ಕಡಿಮೆಯಾಯಿತು. ಅವಳು ಭಾರತೀಯ ಶಾಸ್ತ್ರೀಯ ಸಂಗೀತದ ಮೇಲಾಧಾರಿಸಿದ ಶಾಸ್ತ್ರೀಯ ನೃತ್ಯವನ್ನು ಮಾಡಿದಾಗ ಅವಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
೨. ‘ಫ್ಯೂಜನ್’ ಹಾಗೂ ಪಾಶ್ಚಾತ್ಯ ಸಂಗೀತವನ್ನು ಆಧರಿಸಿದ ನೃತ್ಯವನ್ನು ನೋಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯಲ್ಲಿನ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು ಹಾಗೂ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಇಂಧನವೂ ನಿರ್ಮಾಣವಾಯಿತು. ಅವಳು ಭಾರತೀಯ ಶಾಸ್ತ್ರೀಯ ಸಂಗೀತದ ಮೇಲೆ ಆಧರಿಸಿದ ಶಾಸ್ತ್ರೀಯ ನೃತ್ಯವನ್ನು ನೋಡಿದ ನಂತರ ಅವಳಲ್ಲಿನ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ಕಡಿಮೆಯಾಯಿತು.
೩. ‘ಫ್ಯೂಜನ್’ ಹಾಗೆಯೇ ಪಾಶ್ಚಾತ್ಯ ನಕಾರಾತ್ಮಕ ಸಂಗೀತವನ್ನು ಆಧರಿಸಿದ ನೃತ್ಯವನ್ನು ನೋಡಿದಾಗ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯಲ್ಲಿನ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ಹೆಚ್ಚಾಯಿತು ಹಾಗೂ ‘ಅಲ್ಟ್ರಾವೈಲೆಟ್’ ಈ ನಕಾರಾತ್ಮಕ ಊರ್ಜೆಯು ನಿರ್ಮಾಣ ವಾಯಿತು. ಅವಳು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಶಾಸ್ತ್ರೀಯ ನೃತ್ಯವನ್ನು ನೋಡಿದಾಗ ಅವಳಲ್ಲಿನ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯು ಕಡಿಮೆಯಾಯಿತು.
೩. ‘ಫ್ಯೂಜನ್’, ಹಾಗೆಯೇ ಪಾಶ್ಚಾತ್ಯ ಸಂಗೀತದ ಮೇಲೆ ಆಧರಿಸಿದ ನೃತ್ಯವನ್ನು ನೋಡಿದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ‘ಇನ್ಫ್ರಾರೆಡ್’ ಈ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು ಹಾಗೂ ಅವನಲ್ಲಿನ ಸಕಾರಾತ್ಮಕ ಊರ್ಜೆಯು ಕಡಿಮೆಯಾಯಿತು. ಅವನು ಭಾರತೀಯ ಶಾಸ್ತ್ರಿಯ ಸಂಗೀತದ ಮೇಲೆ ಆಧರಿಸಿದ ಶಾಸ್ತ್ರೀಯ ನೃತ್ಯವನ್ನು ನೋಡಿದ ನಂತರ ಅವನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೨ ಅ. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಆಧ್ಯಾತ್ಮಿಕ ಅಡಿಪಾಯ ಇರುವುದರಿಂದ ಅದರಿಂದ ಸಾತ್ತ್ವಿಕ ಸ್ಪಂದನಗಳು ನಿರ್ಮಾಣವಾಗುವುದು : ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ (ಹಾಡು, ವಾದನ, ನೃತ್ಯ) ಆಧ್ಯಾತ್ಮಿಕ ಅಡಿಪಾಯ ಇರುವುದರಿಂದ ಅದರಿಂದ ಸಾತ್ತ್ವಿಕ ಸ್ಪಂದನಗಳು ಉತ್ಪನ್ನವಾಗುತ್ತವೆ. ಸಾತ್ತ್ವಿಕ ಸಂಗೀತದಿಂದ ಜೀವಕ್ಕೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಜೀವವು ಸಾಧನೆಯನ್ನು ಮಾಡುವ ಅಥವಾ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತನಾಗಿದ್ದರೆ, ಅದಕ್ಕೆ ಲಾಭವಾಗುವ ಪ್ರಮಾಣವೂ ಹೆಚ್ಚಾಗಿರುತ್ತದೆ. ಶರ್ವರಿಯು ಪರೀಕ್ಷಣೆಯಲ್ಲಿನ ಮೊದಲ ಪ್ರಯೋಗದಲ್ಲಿ ‘ಕಥ್ಥಕ್’ ಈ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಪ್ರಸ್ತುತ ಪಡಿಸಿದಳು. ಅವಳ ಬಳಿಗೆ ಸಾತ್ತ್ವಿಕ ಸ್ಪಂದನಗಳು ಆಕರ್ಷಿತವಾಗಿ ನೃತ್ಯದ ಮೂಲಕ ಆ ಸ್ಪಂದನಗಳು ವಾತಾವರಣದಲ್ಲಿ ಪ್ರಕ್ಷೇಪಿತವಾದವು. ಆದ್ದರಿಂದ ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕ-ವೀಕ್ಷಕರಿಗೆ ಹಾಗೆಯೇ ಶರ್ವರಿಗೆ ಮುಂದಿನಂತೆ ಆಧ್ಯಾತ್ಮಿಕ ಸ್ತರದಲ್ಲಿನ ಲಾಭವಾಯಿತು.
೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯಲ್ಲಿ ನಕಾರಾತ್ಮಕ ಊರ್ಜೆಯು ಕಡಿಮೆಯಾಯಿತು.
೨. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಮತ್ತು ಶರ್ವರಿಯಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
೨ ಆ. ‘ಫ್ಯೂಜನ್’ ಮತ್ತು ಪಾಶ್ಚಾತ್ಯ ಸಂಗೀತವು ಅಸಾತ್ತ್ವಿಕವಾಗಿರುವುದರಿಂದ ಅದರಿಂದ ನಕರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು : ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಹೇಗೆ ಆಧ್ಯಾತ್ಮಿಕ ಅಡಿಪಾಯವಿದೆಯೋ, ಹಾಗೆ ಫ್ಯೂಜನ್ ಮತ್ತು ಪಾಶ್ಚಾತ್ಯ ಸಂಗೀತಕ್ಕಿಲ್ಲ. ಫ್ಯೂಜನ್ ಮತ್ತು ಪಾಶ್ಚಾತ್ಯ ಸಂಗೀತದಲ್ಲಿನ ಘಟಕಗಳು (ಹಾಡು, ವಾದನ, ಕಲಾವಿದರು, ಗೀತೆಯಲ್ಲಿನ ಪದಗಳು ಇತ್ಯಾದಿ) ಅಸಾತ್ತ್ವಿಕವಾಗಿರುವುದರಿಂದ ಅವುಗಳ ಕಡೆಗೆ ನಕಾರಾತ್ಮಕ ಸ್ಪಂದನಗಳು ಆಕರ್ಷಿತ ವಾಗುತ್ತವೆ. ಪರೀಕ್ಷಣೆಯಲ್ಲಿನ ಫ್ಯೂಜನ್ ಮತ್ತು ಪಾಶ್ಚಾತ್ಯ ಸಂಗೀತವನ್ನು ಆಧರಿಸಿದ ನೃತ್ಯದಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಆಕರ್ಷಿತವಾದವು. ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರು-ವೀಕ್ಷಕರು ಹಾಗೂ ಶರ್ವರಿಯ ಮೇಲೆ ಅದರಿಂದ ಈ ಮುಂದಿನಂತೆ ನಕಾರಾತ್ಮಕ ಪರಿಣಾಮವಾಯಿತು.
೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿಯಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.
೨. ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕ ಮತ್ತು ಶರ್ವರಿಯಲ್ಲಿ ನಕಾರಾತ್ಮಕ ಊರ್ಜೆಯು ನಿರ್ಮಾಣವಾಯಿತು ಮತ್ತು ಅವರಲ್ಲಿನ ಸಕಾರಾತ್ಮಕ ಊರ್ಜೆಯು ಕಡಿಮೆಯಾಯಿತು. ಸಂಕ್ಷಿಪ್ತದಲ್ಲಿ ‘ಕು. ಶರ್ವರಿ ಕಾನಸ್ಕರ ಇವಳು ಪ್ರಸ್ತುತ ಪಡಿಸಿದ ‘ಫ್ಯೂಜನ್’ ಮತ್ತು ಪಾಶ್ಚಾತ್ಯ ಸಂಗೀತವನ್ನು ಆಧರಿಸಿದ ನೃತ್ಯದಿಂದ ಸಾಧಕ-ವೀಕ್ಷಕರ ಮೇಲೆ, ಹಾಗೆಯೇ ಅದರ ಅವಳ ಮೇಲೆ ನಕಾರಾತ್ಮಕ ಪರಿಣಾಮವಾಯಿತು. ತದ್ವಿರುದ್ಧ ಅವಳು ಪ್ರಸ್ತುತ ಪಡಿಸಿದ ಭಾರತೀಯ ಶಾಸ್ತ್ರೀಯ ನೃತ್ಯದಿಂದ (ಕಥಕ್ ನೃತ್ಯದಿಂದ) ಅವರೆಲ್ಲರ ಮೇಲೆ ಸಕರಾತ್ಮಕ ಪರಿಣಾಮವಾಯಿತು’, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೮.೬.೨೦೧೯)
ವಿ-ಅಂಚೆ : [email protected]
* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |