ಈಗಲಾದರೂ ಕೇಂದ್ರ ಸರಕಾರವು ಇದರತ್ತ ಗಮನ ಹರಿಸಿ ಜಗತ್ತಿನಾದ್ಯಂತದ ಹಿಂದೂಗಳ ರಕ್ಷಣೆಗಾಗಿ ಹೆಜ್ಜೆಯನ್ನಿಡುವುದೇನು? – ಸಂಪಾದಕರು
ನವದೆಹಲಿ – ಅಮೇರಿಕಾದಲ್ಲಿರುವ ಸಾಮ್ಯವಾದಿಗಳಿಂದ ಆಯೋಜಿಸಲಾಗಿರುವ `ಡಿಸ್ ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಹಿಂದುತ್ವದ ಆಮೂಲಾಗ್ರ ಉಚ್ಚಾಟನೆ) ಎಂಬ ಪರಿಷತ್ತಿನ ಮೂಲಕ ಹಿಂದೂಗಳ ವಿರುದ್ಧ ದ್ವೇಷ ಹರಡಲಾಗುತ್ತಿದ್ದು ಅಮೇರಿಕಾದ ಹಿಂದೂಗಳ ಮೇಲೆ ಜನಾಂಗೀಯ ದಾಳಿಗಳು ಹೆಚ್ಚಾಗಬಹುದು ಎಂದು ಅಲ್ಲಿನ ಹಿಂದೂಗಳಿಗೆ ಭೀತಿಯುಂಟಾಗಿದೆ ಎಂಬ ವಿಷಯವು ಬೆಳಕಿಗೆ ಬಂದಿದೆ.
1. ಪತ್ರಕರ್ತ ಅಶೋಕ ಶ್ರೀವಾಸ್ತವ ಇವರ ಪ್ರಕಾರ ಹಿಂದುತ್ವವನ್ನು ಕಿತ್ತೆಸೆಯಲು ಜಾಗತಿಕ ಸ್ತರದಲ್ಲಿ ಈ ಪರಿಷತ್ತನ್ನು ಆಯೋಜಿಸಲಾಗಿದೆ. ಇದರಲ್ಲಿ ಅನೇಕ ಮಹಾವಿದ್ಯಾಲಯಗಳು ಪಾಲ್ಗೊಂಡಿದ್ದವು. ಇದು ಹಿಂದೂ ದ್ವೇಷಿಗಳ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ.
2. ಈ ಪರಿಷತ್ತಿನ ವಿರುದ್ಧ ಅಮೇರಿಕಾದ ಕೆಲವು ಕಡೆಗಳಲ್ಲಿ ಪ್ರತಿಭಟನೆಯನ್ನು ಸಹ ಮಾಡಲಾಯಿತು. ಪ್ರತಿಭಟಿಸುತ್ತಿದ್ದ ಹಿಂದೂಗಳು ಹೇಳಿರುವುದೇನೆಂದರೆ, ಅನೇಕ ಭಾರತೀಯರು ಮತ್ತು ಹಿಂದೂ ವಿದ್ಯಾರ್ಥಿಗಳು ಈ ಪರಿಷತ್ತಿನಲ್ಲಿ ಭಾಗವಹಿಸಿದಂತಹ ಮಹಾವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಸಹ ಪಡೆಯುತ್ತಿದ್ದಾರೆ. ಹೀಗಿರುವಾಗ ಪರಿಷತ್ತಿನ ಮೂಲಕ ಹಿಂದೂಗಳ ವಿಷಯದಲ್ಲಿ ದ್ವೇಷವನ್ನು ಹಬ್ಬಿಸಿದರೆ ಅದರಿಂದ ಮುಂದೆ ಅದರ ಕೆಟ್ಟ ಪರಿಣಾಮಗಳು ಎದುರಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ಇಂತಹ ಪರಿಷತ್ತುಗಳನ್ನು ಇನ್ನು ಮುಂದೆ ಅಮೇರಿಕಾದ ಹಾಗೆ ಇತರ ದೇಶಗಳಲ್ಲಿಯೂ ಆಯೋಜಿಸುವ ಸಾಧ್ಯತೆ ಇದೆ ಎಂದಿದ್ದಾರೆ.
3. ಅಮೇರಿಕಾದ ಪ್ರಸಿದ್ಧ ಸಚಿವ ನೀರಜ ಆಂಟನಿಯವರು, ‘ಈ ಪರಿಷತ್ತು ಎಂದರೆ ಹಿಂದೂ ವಿರೋಧಿ ಜನರ ಸಮೂಹವಾಗಿದೆ. ಇದರ ವಿರುದ್ಧ ಜನರು ಸಂಘಟಿತರಾಗಬೇಕಾಗಿದೆ ಇಂತಹ ಪರಿಷತ್ತಿನಿಂದಾಗಿ ಅಮೇರಿಕಾದ ಹಿಂದೂಗಳ ಮೇಲೆ ಆಕ್ರಮಣ ನಡೆಸಲು ಪ್ರೋತ್ಸಾಹ ಸಿಗುವುದು’ ಎಂದರು.
4. ಕೆಲವು ಮಹಾವಿದ್ಯಾಲಯಗಳು ತಾವು ಈ ಪರಿಷತ್ತಿನಲ್ಲಿ ಪಾಲ್ಗೊಂಡಿಲ್ಲ. ಆದರೆ ಕೆಲವು ನಮ್ಮಲ್ಲಿ ನೌಕರಿ ಮಾಡುವ ಕೆಲವು ಶಿಕ್ಷಕರು ಇದರಲ್ಲಿ ಪಾಲ್ಗೊಂಡಿರಬಹುದು ಎಂದು ಸ್ಪಷ್ಟಪಡಿಸಿವೆ.
ಹಿಂದೂತ್ವವನ್ನು ನಾಶಗೊಳಿಸಲೇ ಬೇಕು ! (ಅಂತೆ) ಆಕಾಂಕ್ಷಾ ಮೆಹತಾ
ಹಿಂದುತ್ವವನ್ನು ನಾಶಗೊಳಿಸಲು ಪ್ರಯತ್ನಿಸಿದವರೆಲ್ಲ ವಿಫಲಗೊಂಡರು ಎಂದು ಇತಿಹಾಸದಲ್ಲಿ ಪರಿಗಣಿಸಲ್ಪಡುವರು. ಹಿಂದುತ್ವವನ್ನು ನಾಶಗೊಳಿಸಲು ಮೊಗಲರಿಗೆ ಮತ್ತು ಆಂಗ್ಲರಿಗೂ ಸಾಧ್ಯವಾಗಲಿಲ್ಲ. ಅದನ್ನು ಈಗ ಚಿಲ್ಲರೆ ಮತ್ತು ಬೆರಳೆಣಿಕೆಯಷ್ಟು ಇರುವವರು ಮಾಡಿ ತೋರಿಸುವ ಮಾತನ್ನಾಡುತ್ತಿದ್ದಾರೆ; ಇದು ಹಾಸ್ಯಾಸ್ಪದವಾಗಿದೆ! – ಸಂಪಾದಕರು
‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಹಿಂದುತ್ವದ ಆಮೂಲಾಗ್ರ ಉಚ್ಚಾಟನೆ) ಈ ಪರಿಷತ್ತಿನಲ್ಲಿ ಪಾಲ್ಗೊಂಡ ಆಕಾಂಕ್ಷಾ ಮೆಹತಾ ಇವರು ಈ ಪರಿಷತ್ತಿನಲ್ಲಿ, ಹಿಂದುತ್ವವನ್ನು ನಾಶಗೊಳಿಸುವುದೇ ನಮ್ಮ ಗುರಿ ಆಗಿದೆ. ಹಿಂದುತ್ವ ಎಂದರೆ ಹಿಂದೂ ಧರ್ಮವಲ್ಲ. ಹಿಂದುತ್ವವು ಒಂದು ಅಪಾಯಕಾರಿ ಸಂಗತಿಯಾಗಿದೆ ಮತ್ತು ಅದು ಭವಿಷ್ಯದಲ್ಲಿ ನಮ್ಮನ್ನು ಎಲ್ಲಿಗೆ ಹೋಗಲಿಕ್ಕಿಲ್ಲವೋ ಅಲ್ಲಿಗೆ ಕರೆದುಕೊಂಡು ಹೋಗಲಿದೆ ಎಂದರು.