ಧ್ಯಾನದ ಸಮಯದಲ್ಲಿ ನಾಮಜಪವನ್ನು ಮಾಡುವಾಗ ಭಾವಜಾಗೃತಿಯ ಪ್ರಯತ್ನವನ್ನು ಮಾಡಿ ವಿಷ್ಣುಲೋಕ, ಗಣೇಶಲೋಕ ಮತ್ತು ದುರ್ಗಾಲೋಕಗಳಲ್ಲಿ ಹೋದ ನಂತರ ಸಾಧಕಿಯು ಅನುಭವಿಸಿದ ಆನಂದಮಯ ಭಾವವಿಶ್ವ !

‘೩೦.೬.೨೦೨೦ ರಂದು ೯.೩೦ ಈ ಸಮಯದಲ್ಲಿ ನಾಮಜಪ ಮಾಡುವಾಗ ನಾನು ಭಾವಜಾಗೃತಿಯ ಪ್ರಯತ್ನವನ್ನು ಮಾಡಿದೆನು.

ಸೌ. ನಿವೇದಿತಾ ಜೋಶಿ

ಅಪ್ರತಿಮ ಭಾವವಿಶ್ವವನ್ನು ಅನುಭವಿಸುವ ನಂದುರಬಾರದಲ್ಲಿನ ಸಾಧಕಿ ಸೌ. ನಿವೇದಿತಾ ಜೋಶಿ

‘ನಂದುರಬಾರದಲ್ಲಿನ (ಮಹಾರಾಷ್ಟ್ರ) ಸಾಧಕಿ ಸೌ. ನಿವೇದಿತಾ ಜೋಶಿ ಇವರು ದೇವತೆಗಳ ನಾಮಜಪಗಳನ್ನು ಮಾಡುವಾಗ ಅನುಭವಿಸಿದ ಭಾವವು ಅವರ್ಣನೀಯವಾಗಿದೆ. ಅವರು ವರ್ಣಿಸಿದ ಭಾವವಿಶ್ವವನ್ನು ವಾಚಕರು ಸಹಜವಾಗಿ ಅನುಭವಿಸಬಹುದು, ಈ ಲೇಖನವು ಅಷ್ಟೊಂದು ಅತ್ಯುತ್ತಮವಾಗಿದೆ. ಇಂತಹ ಭಾವಪೂರ್ಣ ಲೇಖನವನ್ನು ಇದುವರೆಗೆ ಯಾರೂ ಬರೆಯಲಿಲ್ಲ. ಈ ಸುಂದರ ಲೇಖನದ ಬಗ್ಗೆ ಸೌ. ನಿವೇದಿತಾ ಜೋಶಿಯವರಿಗೆ ಅಭಿನಂದನೆಗಳು! ‘ಅವರು ಎಲ್ಲೆಡೆಯಲ್ಲಿನ ಸಾಧಕರಿಗೆ ಕಲಿಯಲು ಇಂತಹ ಸುಂದರ ಲೇಖನಗಳನ್ನು ಇನ್ನು ಮುಂದೆಯೂ ಕಳುಹಿಸಬೇಕು, ಎಂದು ನಾನು ಬಯಸುತ್ತೇನೆ. ಅನೇಕ ಸಾಧಕರಿಗೆ ನಾಮಜಪವನ್ನು ಮಾಡುವಾಗ ನಿದ್ರೆ ಬರುವುದು, ಇತರ ವಿಚಾರಗಳಲ್ಲಿ ಮುಳುಗುವುದು ಇವುಗಳಿಂದ ನಾಮಜಪದಲ್ಲಿ ವ್ಯತ್ಯಯವಾಗುವುದು, ಇಂತಹ ಅಡಚಣೆಗಳಾಗುತ್ತಿರುತ್ತದೆ. ಅಂತಹ ಸಾಧಕರು ಸೌ. ನಿವೇದಿತಾ ಜೋಶಿಯವರಂತೆ ಪ್ರಯತ್ನಿಸಿದರೆ ಅವರಿಗೆ ನಾಮಜಪದ ಸಂಪೂರ್ಣ ಲಾಭವಾಗುವುದು ! – (ಪರಾತ್ಪರ ಗುರು) ಡಾ. ಆಠವಲೆ

೧. ವಿಷ್ಣುಲೋಕವನ್ನು ಅನುಭವಿಸಲು ಮಾಡಿದ ಭಾವಪ್ರಯೋಗ

೧ ಅ. ‘ಶ್ರೀ ವಿಷ್ಣವೇ ನಮಃ |’ ಎಂಬ ನಾಮಜಪವನ್ನು ಮಾಡುವಾಗ ವಿಷ್ಣುಲೋಕದಲ್ಲಿ ಹೋಗಬೇಕೆಂದು ನಿಶ್ಚಯಿಸುವುದು, ಆ ಸಮಯದಲ್ಲಿ ಬೆಟ್ಟದಂತಿರುವ ಸ್ವಭಾವದೋಷಗಳ ಅಡತಡೆಗಳು ಬಂದು ‘ಬೆಟ್ಟದ ಮೇಲೆ ವಿಷ್ಣುಸ್ವರೂಪ ಪರಾತ್ಪರ ಗುರು ಡಾಕ್ಟರರು ನಿಂತಿದ್ದೂ ಅವರು ನನಗೆ ಮೇಲೆ ಬರಲು ಪ್ರೋತ್ಸಾಹ ನೀಡುತ್ತಿದ್ದಾರೆ’, ಎಂದು ಕಾಣಿಸುವುದು : ‘ನಾನು ಮೊದಲು ‘ಶ್ರೀ ವಿಷ್ಣವೇ ನಮಃ |’ ಎಂಬ ನಾಮಜಪವನ್ನು ಮಾಡಿದೆನು. ಈ ನಾಮಜಪವನ್ನು ಮಾಡುವಾಗ ‘ನಾನು ವಿಷ್ಣುಲೋಕದಲ್ಲಿ ಹೋಗಬೇಕು’, ಎಂಬ ಭಾವವನ್ನು ಇಟ್ಟೆನು. ನನ್ನ ಮನಸ್ಸಿನಲ್ಲಿ ‘ವಿಷ್ಣುಲೋಕಕ್ಕೆ ಹೇಗೆ ಹೋಗಬೇಕು?’, ಎಂದು ಎನಿಸಿತು. ಆಗ ನನಗೆ ‘ಒಂದು ದೊಡ್ಡ ಬೆಟ್ಟವು ಅಡೆತಡೆಯಾಗಿ ನಿಂತಿದೆ’, ಎಂದು ಕಾಣಿಸಿತು. ನನಗೆ ‘ಇಷ್ಟೊಂದು ದೊಡ್ಡ ಬೆಟ್ಟವನ್ನು ಹೇಗೆ ಹತ್ತುವುದು?’, ಎಂಬ ಪ್ರಶ್ನೆ ಬಿದ್ದಿತು. ‘ಈ ಬೆಟ್ಟವೆಂದರೆ, ನನ್ನಲ್ಲಿನ ಸ್ವಭಾವ ದೋಷಗಳೇ ಆಗಿವೆ’, ಎಂದು ನನಗೆ ಅರಿವಾಯಿತು. ಆಗ ನನಗೆ ‘ಬೆಟ್ಟದ ಮೇಲೆ ವಿಷ್ಣುಸ್ವರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ನಿಂತಿದ್ದಾರೆ ಮತ್ತು ನನ್ನ ಕಡೆಗೆ ನೋಡಿ ನನಗೆ ಮೇಲೆ ಬರಲು ಸನ್ನೆ ಮಾಡಿ ಪ್ರೋತ್ಸಾಹ ನೀಡುತ್ತಿದ್ದಾರೆ’, ಎಂದು ಕಾಣಿಸಿತು. ಅವರು ನನಗಾಗಿ ‘ಶರಣಾಗತಿ, ಕೃತಜ್ಞತೆ ಮತ್ತು ಭಾವಜಾಗೃತಿಗಳೆಂಬ ಹಗ್ಗಗಳನ್ನು ಕೆಳಗೆ ಬಿಟ್ಟಿದ್ದು ಅವುಗಳನ್ನು ಹಿಡಿದು ಮೇಲೆ ಬರಲು ಅವರು ನನ್ನನ್ನು ಪದೇಪದೇ ಸೂಚಿಸುತ್ತಿದ್ದಾರೆ’, ಎಂದು ನನಗೆ ಅರಿವಾಯಿತು. ‘ನಾನು ಆ ಹಗ್ಗಗಳ ಸಹಾಯದಿಂದ ಮೇಲೆ ಏರಿ ಹೋಗುತ್ತಿದ್ದೇನೆ ಮತ್ತು ದೇವರು ನನಗೆ ಸಹಾಯ ಮಾಡುತ್ತಿದ್ದಾನೆ’, ಎಂದು ನನಗೆ ಅರಿವಾಯಿತು.

೧ ಆ. ವಿಷ್ಣುಲೋಕದಲ್ಲಿನ ಆನಂದಮಯ ವಾತಾವರಣವನ್ನು ನೋಡಿ ಮನಸ್ಸು ಉತ್ಸಾಹಗೊಳ್ಳುವುದು ಮತ್ತು ಅಲ್ಲಿ ಉಚ್ಚಕೋಟಿಯ ಆನಂದದ ಅನುಭೂತಿಗಳು ಬರುವುದು : ವಿಷ್ಣುಲೋಕವನ್ನು ತಲುಪಿದ ನಂತರ ಅಲ್ಲಿನ ಆನಂದಮಯ ವಾತಾವರಣವನ್ನು ನೋಡಿ ನಾನು ಮೈಮರೆತೆನು. ನನ್ನ ಮನಸ್ಸಿನಲ್ಲಿರುವ ಎಲ್ಲ ವಿಚಾರಗಳು ಇಲ್ಲವಾದವು. ನನಗೆ ಹಗುರವೆನಿಸಿ ಕೆಲವು ಕ್ಷಣಗಳಲ್ಲಿಯೇ ಅಲ್ಲಿ ನನಗೆ ಉಚ್ಚ ಕೋಟಿಯ ಆನಂದದ ಅನುಭೂತಿಗಳು ಬರತೊಡಗಿದವು. ‘ಇತರ  ಸಾಧಕರು, ಸಂತರು ಮತ್ತು ಸದ್ಗುರುಗಳೂ ನನ್ನ ಜೊತೆಯಲ್ಲಿದ್ದು ಅವರು ಆನಂದದಲ್ಲಿ ಮುಳುಗುತ್ತಿದ್ದಾರೆ’, ಎಂದು ನನಗೆ ಕಾಣಿಸಿತು. ನಾನು ಶ್ರೀವಿಷ್ಣುಸ್ವರೂಪ ಗುರುದೇವರಿಗೆ, ‘ಈ ವೈಕುಂಠಲೋಕದಲ್ಲಿ ನನಗೆ ಒಂದು ಕೋಣೆ ಸಿಗಬಹುದೇ?’, ಎಂದು ಕೇಳಿದೆನು. ಆಗ ಅವರು, ‘ಕೋಣೆಯಷ್ಟೇ ಅಲ್ಲ, ನಿನಗೆ ಅರಮನೆಯನ್ನೇ ಕೊಡುತ್ತೇನೆ !” ಎಂದು ಹೇಳಿದರು. ಅವರು ಹಾಗೆ ಹೇಳಿದ ನಂತರ ನನಗೆ ತುಂಬಾ ಕೃತಜ್ಞತೆಯೆನಿಸಿತು.

೧ ಇ. ವಿಷ್ಣುಲೋಕದಲ್ಲಿ ‘ಗುರುದೇವರನ್ನು ಮತ್ತು ಆನಂದ’ ಇಷ್ಟೇ ಅನುಭವಿಸುವುದು ಮತ್ತು ‘ದೇಹವೆಂದರೆ ಚೈತನ್ಯದ ಒಂದು ಗೋಲ ಇದೆ’, ಎಂದು ಅರಿವಾಗುವುದು : ನಾವೆಲ್ಲ ಸಾಧಕರು ವೈಕುಂಠದ ಬಾಗಿಲ ಬಳಿ ಬಂದು ತಲುಪಿದೆವು. ಅಲ್ಲಿ ತುಳಸಿಯ ತೋರಣವನ್ನು ಕಟ್ಟಿದ್ದರು ಮತ್ತು ವಿಷ್ಣುತತ್ತ್ವದ ರಂಗೋಲಿಯನ್ನು ಬಿಡಿಸಿದ್ದರು. ಅದನ್ನು ನೋಡಿ ನನ್ನ ಮನಸ್ಸಿನಲ್ಲಿ ‘ಶ್ರೀ ವಿಷ್ಣವೇ ನಮಃ |’ ಈ ನಾಮಜಪವು ಪ್ರಾರಂಭವಾಯಿತು. ನನಗೆ ತುಂಬಾ ಆನಂದವಾಗಿ ಹೃದಯ ತುಂಬಿ ಬಂದಿತು. ಸತತವಾಗಿ ನನ್ನ ಭಾವಜಾಗೃತಿಯಾಗುತ್ತಿತ್ತು. ಅಲ್ಲಿ ನನಗೆ, ‘ತಂದೆ, ತಾಯಿ, ಸಹೋದರ, ಸಹೋದರಿ, ಮಗ ಅಥವಾ ಮಗಳು ಯಾರೂ ಇಲ್ಲ, ಆ ಸ್ಥಳದಲ್ಲಿ ಪ್ರತಿಯೊಬ್ಬರು ಕೇವಲ ‘ವಿಷ್ಣುಸ್ವರೂಪ ಗುರುದೇವರನ್ನು ಮತ್ತು ಆನಂದ’ ಇಷ್ಟೇ ಅನುಭವಿಸುತ್ತಿದ್ದೆವು. ಆ ಸ್ಥಳದಲ್ಲಿ ‘ಎಲ್ಲ ಸಾಧಕರ ದೇಹವೆಂದರೆ ಚೈತನ್ಯದ ಒಂದು ಗೋಲ ಇದೆ’, ಎಂದು ನನಗೆ ಅರಿವಾಯಿತು.

೧ ಈ. ವೈಕುಂಠದಲ್ಲಿ ಸ್ನಾನ ಮಾಡಿ ಆರತಿಯನ್ನು ಮಾಡುವ ವಿಚಾರ ಬರುವುದು, ಆಗ ಗುರುದೇವರು ಇಲ್ಲಿನ ವಾತಾವರಣವು ಅತ್ಯಂತ ಶುದ್ಧ ಮತ್ತು ಸ್ವಚ್ಛವಾಗಿರುವುದರಿಂದ ಸ್ನಾನ ಮಾಡುವ ಆವಶ್ಯಕ ಇರದಿರುವುದು ಎಂದು ಹೇಳುವುದು : ‘ಈಗ ನಮಗೆಲ್ಲರಿಗೂ ವೈಕುಂಠದಲ್ಲಿಯೇ ಇರಬೇಕಾಗಿದೆ. ನಾವು ಪ್ರತಿದಿನ ಬೆಳಗ್ಗೆ ೬ ಗಂಟೆಗೆ ಸಭಾಗೃಹದಲ್ಲಿ ಧ್ಯಾನವನ್ನು ಮಾಡಲು ಕುಳಿತುಕೊಳ್ಳೋಣ ಮತ್ತು ಪ್ರತಿದಿನ ಮುಂಜಾನೆ ಆರತಿಯನ್ನೂ ಮಾಡೋಣ’, ಎಂದು ನಾನು ಸಹಸಾಧಕರಿಗೆ ಸೂಚಿಸುತ್ತಿದ್ದೆನು; ಆದರೆ ಅಷ್ಟರಲ್ಲಿ ನನ್ನ ಮನಸ್ಸಿನಲ್ಲಿ ‘೪ ಗಂಟೆಗೆ ಮುಂಜಾನೆ ಆರತಿಯನ್ನು ಮಾಡಬೇಕಾದರೆ, ಸ್ನಾನವಾಗಬೇಕು,’ ಎಂದೆನಿಸಿತು. ಆಗ ನನ್ನ ಅಂತರ್ಮನದಲ್ಲಿನ ವಿಚಾರಗಳ ಅರಿವಾಗಿ ಶ್ರೀವಿಷ್ಣುಸ್ವರೂಪ ಗುರುದೇವರು, ‘ಇಲ್ಲಿ ಎಲ್ಲವೂ ಚೈತನ್ಯಮಯವಾಗಿದೆ. ವಾಯುದೇವತೆಯಿಂದ ಎಲ್ಲವೂ ಸ್ವಚ್ಛ ಮಾಡಲಾಗುತ್ತದೆ ಮತ್ತು ವರುಣದೇವರಿಂದ ಎಲ್ಲಡೆಯ ಸ್ಥಳಗಳನ್ನು ಶುದ್ಧಗೊಳಿಸಲಾಗುತ್ತದೆ. ಆದುದರಿಂದ ಬೇರೆ ಯಾವುದನ್ನು ಮಾಡುವ ಅವಶ್ಯಕತೆ ಇಲ್ಲ,’ ಎಂದು ಸೂಚಿಸಿದರು. ಇಲ್ಲಿ ಎಲ್ಲೆಡೆ ಚೈತನ್ಯ ತುಂಬಿಕೊಂಡಿದ್ದರಿಂದ ಯಾರ ಮೇಲೆಯೂ ಆವರಣ ಬರುವುದಿಲ್ಲ. ಇಲ್ಲಿನ ಹೂವುಗಳು ಯಾವಾಗಲೂ ಅರಳಿರುತ್ತವೆ ಮತ್ತು ತುಳಸಿಯ ಗಿಡಗಳು ನಿರಂತರವಾಗಿ ಆನಂದದಿಂದ ನಲಿಯುತ್ತಿರುತ್ತವೆ.

೧ ಉ. ಸಾಧಕಿಯರು ಮುಖಕ್ಕೆ ಪೌಡರ್ ಎಂದು ಗುರುದೇವರ ಚರಣಗಳಲ್ಲಿನ ಧೂಳಿನ ಕಣಗಳನ್ನು ಹಚ್ಚುವುದು, ಕುಂಕುಮವೆಂದು ಶ್ರೀ ಮಹಾಲಕ್ಷ್ಮಿದೇವಿಯ ಚರಣಗಳಲ್ಲಿರುವ ಕುಂಕುಮವನ್ನು ಹಚ್ಚುವುದು ಮತ್ತು ಗುಣರೂಪದ ಆಭರಣಗಳನ್ನು ಹಾಕುವುದುವಿಷ್ಣುಲೋಕದಲ್ಲಿನ ವಾತಾವರಣವನ್ನು ಅನುಭವಿಸುತ್ತಿರುವಾಗ ನನಗೆ, ‘ಸಾಧಕಿಯರು ಅವರ ಮುಖಕ್ಕೆ ಪೌಡರ್ ಹಚ್ಚಬೇಕಾದರೆ, ಏನು ಮಾಡಬಹುದು ? ಎಂಬ ಪ್ರಶ್ನೆ ಬಿದ್ದಿತು. ಅಷ್ಟರಲ್ಲಿ ನನಗೆ ‘ಕೆಲವು ಸಾಧಕಿಯರು ಶ್ರೀವಿಷ್ಣುಸ್ವರೂಪ ಗುರುದೇವರ ಚರಣಗಳನ್ನು ನಿಧಾನವಾಗಿ ತಮ್ಮ ಕೈಯಲ್ಲಿಟ್ಟು ಅವರ ಕಾಲಿನಡಿಯಲ್ಲಿರುವ ಧೂಳಿನ ಕಣಗಳನ್ನು ಮುಖಕ್ಕೆ ಹಚ್ಚುತ್ತಿದ್ದಾರೆ’, ಎಂದು ಎನಿಸಿತು. ಆದುದರಿಂದ ಅವರು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ‘ಅವರು ಸಾಕ್ಷಾತ್ ಶ್ರೀ ಲಕ್ಷ್ಮೀಮಾತೆಯ ಚರಣಗಳಲ್ಲಿರುವ ಕುಂಕುಮದ ರಾಶಿಯಲ್ಲಿರುವ ಕುಂಕುಮವನ್ನು ಹಚ್ಚುತ್ತಿದ್ದಾರೆ ಮತ್ತು ಮುಖದ ಮೇಲಿನ ಸಾತ್ತ್ವಿಕತೆಯು ಇನ್ನೂ ಹೆಚ್ಚಾಗುತ್ತಿದೆ, ಅದನ್ನು ನೋಡಲು ಸಿಕ್ಕಿತು. ಒಬ್ಬ ಸಾಧಕಿಗೆ ಆಭರಣಗಳನ್ನು ಧರಿಸುವ ಇಚ್ಛೆಯಾದಾಗ ಅವರ ಕಡೆಗೆ ಲಕ್ಷ್ಮೀಮಾತೆಯು ನೋಡುತ್ತಾಳೆ ಮತ್ತು ನೋಡಿದ ಕೂಡಲೇ ಆ ಸಾಧಕಿಯ ಮೈಮೇಲೆ ಆಭರಣಗಳು ಬಂದಿರುವುದೆಂದು ಅರಿವಾಗತೊಡಗಿತು. ಈ ಸ್ಥಳದಲ್ಲಿ ಆಭರಣಗಳೆಂದರೆ ‘ಎಲ್ಲ ಗುಣಗಳಿವೆ’, ಎಂದು ಅರಿವಾಯಿತು.

೧ ಊ. ವಿಷ್ಣುಲೋಕದಲ್ಲಿ ಎಲ್ಲರೂ ಆನಂದದ ಸ್ಥಿತಿಯಲ್ಲಿದ್ದಾರೆ. ಯಾರೂ ವೃದ್ಧ ಅಥವಾ ದುಃಖಿಗಳಿಲ್ಲ(ಕಷ್ಟದಲ್ಲಿಲ್ಲ). ಎಲ್ಲರ ಮುಖದ ಮೇಲೆ ಚಿಕ್ಕಮಕ್ಕಳಂತೆ ಆನಂದ ಕಾಣಿಸುತ್ತಿತ್ತು. ಆಗ ನನಗೆ ತುಂಬಾ ಭಾವಜಾಗೃತವಾಗಿ ನನ್ನ ಕಣ್ಣುಗಳಲ್ಲಿ ಭಾವಾಶ್ರು ಹರಿಯುತ್ತಿದ್ದವು. ‘ವೈಕುಂಠಲೋಕದ ಜೀವನವು ಹೇಗೆ ಇರುತ್ತದೆ?’, ಎಂಬ ಬಗೆಗಿನ ಅನುಭೂತಿಯನ್ನು ಈ ಭಾವಪ್ರಯೋಗದಿಂದ ಸಾಕ್ಷಾತ್ ಶ್ರೀವಿಷ್ಣುಸ್ವರೂಪ ಗುರುದೇವರು ನೀಡಿರುವುದರಿಂದ ನನಗೆ ಅವರ ಬಗ್ಗೆ ತುಂಬಾ ಕೃತಜ್ಞತೆ ಎನಿಸಿತು. ನನಗೆ ‘ಕೃತಜ್ಞತೆ’ ಎಂಬ ಶಬ್ದಗಳೂ ಅಪೂರ್ಣವಾಗಿವೆ ಎನಿಸಿತು !

೨. ಗಣೇಶಲೋಕವನ್ನು ಅನುಭವಿಸಲುಮಾಡಿದ ಭಾವಪ್ರಯೋಗ

೨ ಅ. ಗಣೇಶಲೋಕದಲ್ಲಿ ಹೋಗುವ ವಿಚಾರ ಬರುವುದು ಮತ್ತು ನಾಮಜಪವನ್ನು ಮಾಡುತ್ತ ಮೂಲಾಧಾರಚಕ್ರದ ಕಡೆಗೆ ನೋಡಿದಾಗ ಚೈತನ್ಯದ ಲಹರಿಗಳು ಬಂದು ಗಣೇಶಲೋಕದಲ್ಲಿ ತಲುಪುವುದು : ‘ವಿಷ್ಣುಲೋಕದಿಂದ ಹೊರಟು ಈಗ ಗಣೇಶಲೋಕದಲ್ಲಿ ಹೋಗುವುದಿದೆ’, ಎಂದು ಎನಿಸಿರುವುದರಿಂದ ನಾನು ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಈ ನಾಮಜಪವನ್ನು ಮಾಡತೊಡಗಿದೆನು. ನನ್ನ ಮನಸ್ಸಿನಲ್ಲಿ ‘ಗಣೇಶಲೋಕವು ಹೇಗಿರಬಹುದು?’, ಎಂಬ ವಿಚಾರ ಬಂದಿತು. ಆ ಸಮಯದಲ್ಲಿ ನನಗೆ ಯಾರೋ ‘ಮೂಲಾಧಾರಚಕ್ರದ ಕಡೆಗೆ ನೋಡು’, ಎಂದು ಹೇಳಿದರು. ನಾನು ಹಾಗೆ ನೋಡಿದ ನಂತರ ನನಗೆ ನನ್ನ ಮೂಲಾಧಾರಚಕ್ರದಲ್ಲಿ ‘ಚೈತನ್ಯದ ಒಂದು ಲಹರಿ ಮೆದುಳಿನ ಕಡೆಗೆ ಹೋಗುತ್ತಿದೆ’, ಎಂದು ಸ್ಪಷ್ಟವಾಗಿ ಅರಿವಾಯಿತು. ನಂತರ ನಾನು ಗಣೇಶಲೋಕದಲ್ಲಿ ತಲುಪಿದೆನು.

೨ ಆ. ಗಣೇಶಲೋಕದಲ್ಲಿ ಎಲ್ಲಡೆ ಕೆಂಪು ಬಣ್ಣ, ಗಣೇಶತತ್ತ್ವದ ರಂಗೋಲಿ ಮತ್ತು ಕೊರಳಲ್ಲಿ ಕೆಂಪು ಹೂವು ಮತ್ತು ಗರಿಕೆಗಳ ಮಾಲೆಯನ್ನು ಧರಿಸಿದ ಶ್ರೀ ಗಣೇಶನ ವಿರಾಟರೂಪದ ದರ್ಶನ ವಾಗುವುದು : ಗಣೇಶಲೋಕದ ಪ್ರವೇಶದ್ವಾರದಲ್ಲಿ ನನಗೆ ಕೆಂಪು ಹೂವಿನ ತೋರಣವನ್ನು ಕಟ್ಟಿದ ಮತ್ತು ಗಣೇಶತತ್ತ್ವದ ರಂಗೋಲಿ ಬಿಡಿಸಿರುವುದು ಕಾಣಿಸಿತು. ನಾನು ಒಳಗೆ ಪ್ರವೇಶ ಮಾಡಿದಾಗ ನನಗೆ ಶ್ರೀ ಗಣೇಶನ ಅದ್ಭುತ ವಿರಾಟ ರೂಪದ ದರ್ಶನವಾಯಿತು. ಅಲ್ಲಿ ಎಲ್ಲೆಡೆ ಕೆಂಪು ಬಣ್ಣ ಕಾಣಿಸುತ್ತಿತ್ತು. ನನಗೆ ಶ್ರೀ ಗಣೇಶನು ಅಚ್ಚುಹಸಿರಾದ ಗರಿಕೆಗಳ ರತ್ನಗಂಬಳಿಯ ಮೇಲೆ ಓಡಾಡುತ್ತಿರುವಂತೆ ಕಾಣಿಸುತ್ತಿದ್ದನು. ಅವನ ಕೊರಳಿನಲ್ಲಿ ಕೆಂಪು ಹೂವು ಮತ್ತು ಗರಿಕೆಗಳ ಸುಂದರವಾದ ಮಾಲೆಯು ಕಾಣಿಸಿತು.

೨ ಇ. ಗಣೇಶನಿಗೆ ನನ್ನ ಮನಸ್ಸಿನಲ್ಲಿರುವ ಎಲ್ಲ ವಿಕಲ್ಪಗಳನ್ನು ನಾಶಗೊಳಿಸಲು ಪ್ರಾರ್ಥನೆ ಮಾಡುವುದು ಮತ್ತು ಅವನ ಚರಣಗಳಲ್ಲಿ ಅಹಂಕಾರ, ವಿಕಲ್ಪ, ದ್ವೇಷ ಮತ್ತು ಮತ್ಸರವಿರುವ ಬುದ್ಧಿಯನ್ನು ಅರ್ಪಣೆ ಮಾಡುವುದು : ‘ಇಂದು ನನಗೆ ಶ್ರೀ ಗಣೇಶನಿಗೆ ನನ್ನ ಬುದ್ಧಿಯ ವರದಿಯನ್ನು ಕೊಡುವುದಿದೆ. ‘ನನಗೆ ಯಾವ ವಿಕಲ್ಪಗಳು ಬರುತ್ತವೆ ?’, ಎಂಬುದನ್ನು ಅಪರಾಧಿಭಾವದಿಂದ ಶ್ರೀ ಗಣೇಶನ ಮುಂದೆ ಅರ್ಪಿಸುವುದಿದೆ’, ಎಂದು ಪದೇಪದೇ ನನ್ನ ಮನಸ್ಸಿನಲ್ಲಿ ಬರುತ್ತಿತ್ತು; ಆದರೆ ನನಗೆ ನನ್ನ ಬಗ್ಗೆ ನಾಚಿಕೆಯಾಗುತ್ತಿತ್ತು. ನನ್ನ ಮನಸ್ಸಿನಲ್ಲಿ ‘ಹೇ ಗಣೇಶಾ, ನೀನು ಬುದ್ಧಿಯನ್ನು ಕೊಟ್ಟಿರುವೆ. ಆ ಬುದ್ಧಿಯನ್ನು ನಾನು ‘ಅಹಂಕಾರ ವಿಚಾರ, ಕಲ್ಪನೆವಿಲಾಸ ಮತ್ತು ಅಯೋಗ್ಯ ವಿಚಾರ’ಗಳಿಗಾಗಿ ಉಪಯೋಗಿಸಿದೆನು. ನಾನು ಅದನ್ನು ಕೆಲವೊಮ್ಮೆ ಸಿಟ್ಟು, ದ್ವೇಷ ಮತ್ತು ಮತ್ಸರ ಇವುಗಳಿಗಾಗಿ ಉಪಯೋಗಿಸಿದೆನು. ನಾನು ಧರ್ಮಪ್ರಚಾರ ಮತ್ತು ಗುರುಕಾರ್ಯಗಳನ್ನು ಮಾಡಲು ಈ ಬುದ್ಧಿಯನ್ನು ಸ್ವಲ್ಪವೇ ಉಪಯೋಗಿಸಿದೆನು’, ಎಂಬ ವಿಚಾರವು ಮನಸ್ಸಿನಲ್ಲಿ ಬಂದು ನನಗೆ ಅಳು ಬಂದಿತು. ನಾನು ತಕ್ಷಣ ಶ್ರೀ ಗಣೇಶನ ಮುಂದೆ ಅಕ್ಷರಶಃ ಸಾಷ್ಟಾಂಗ ನಮಸ್ಕಾರವನ್ನು ಮಾಡಿದೆನು. ‘ಶ್ರೀ ಸಿದ್ಧಿವಿನಾಯಕಾ, ನನ್ನ ಮನಸ್ಸಿನಲ್ಲಿರುವ ಎಲ್ಲ ವಿಕಲ್ಪಗಳನ್ನು ನಾಶಗೊಳಿಸು. ‘ಈ ಬುದ್ಧಿಯನ್ನು ಹೇಗೆ ಉಪಯೋಗಿಸಲಿ?’,  ನೀನೇ ಹೇಳು’, ಎಂದು ನಾನು ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡಿದೆನು. ನಾನು ಶ್ರೀ ಗಣೇಶನ ಮುಂದೆ ಸಂಪೂರ್ಣವಾಗಿ ಶರಣಾದೆನು. ಆಗ ಶ್ರೀ ಗಣೇಶನು, ‘ಸಾಧನೆಯಲ್ಲಿ ಅಡಚಣೆಗಳನ್ನುಂಟು ಮಾಡುವ ಈ ಬುದ್ಧಿಯನ್ನು ನೀನು ನನ್ನ ಚರಣಗಳಲ್ಲಿ ಅರ್ಪಿಸು,’ ಎಂದು ಹೇಳಿದನು. ನಾನು ನನ್ನ ಅಹಂಕಾರ, ವಿಕಲ್ಪ, ದ್ವೇಷ ಮತ್ತು ಮತ್ಸರಗಳಿಂದ ತುಂಬಿದ ಬುದ್ಧಿಯನ್ನು ಒಂದು ಪೆಟ್ಟಿಗೆಯಲ್ಲಿ ತುಂಬಿ ಶ್ರೀ ಗಣೇಶನ ಚರಣಗಳಲ್ಲಿ ಇಟ್ಟೆನು.

೨ ಈ. ‘ಮನಸ್ಸಿನಲ್ಲಿ ಕೇವಲ ಗುರುಗಳ ಆಜ್ಞಾಪಾಲನೆಯ ವಿಚಾರ ಬಂದು ಅದರ ಮೂಲಕ ಗುರುಕಾರ್ಯದ ಪ್ರಸಾರವಾಗಲಿ’, ಎಂದು ಆರ್ತತೆಯಿಂದ ಪ್ರಾರ್ಥನೆ ಮಾಡಿ ಶ್ರೀ ಗಣೇಶನ ಆಶೀರ್ವಾದವನ್ನು ಪಡೆಯುವುದು : ‘ಇನ್ನು ಮುಂದೆ ನನ್ನ ಮನಸ್ಸಿನಲ್ಲಿ ಕೇವಲ ಗುರುಗಳ ಆಜ್ಞಾಪಾಲನೆಯ ವಿಚಾರಗಳೇ ಇರುವಂತೆ ಅವುಗಳ ಮೂಲಕ ಗುರುಕಾರ್ಯದ ಪ್ರಸಾರವಾಗಲಿ’, ಎಂದು ನಾನು ಆರ್ತತೆಯಿಂದ ಪ್ರಾರ್ಥನೆ ಮಾಡಿದೆನು. ಅನಂತರ ಶ್ರೀ ಗಣೇಶನು ‘ತಥಾಸ್ತು’ ಎಂದನು. ನಂತರ ನನಗೆ ಹಗುರವೆನಿಸಿ ಆನಂದವಾಗತೊಡಗಿತು. ಶ್ರೀ ಗಣೇಶನ ಚರಣಗಳಲ್ಲಿ ನಾನು ಕೃತಜ್ಞತೆಯನ್ನು ವ್ಯಕ್ತ ಮಾಡಿದೆನು. ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಎನ್ನುತ್ತ ನಾನು ಸಿದ್ಧಿವಿನಾಯಕನ ಚರಣಗಳಲ್ಲಿ ಗರಿಕೆಯನ್ನು ಅರ್ಪಣೆ ಮಾಡಿದೆನು.

೩. ದುರ್ಗಾಲೋಕವನ್ನು ಅನುಭವಿಸಲು ಮಾಡಿದ ಭಾವಪ್ರಯೋಗ

೩ ಅ. ದುರ್ಗಾಲೋಕಕ್ಕೆ ಹೋದನಂತರ ಕುಲಸ್ವಾಮಿನಿಯಾದ (ಕುಲದೇವಿಯಾದ) ಭವಾನಿದೇವಿಯ ದರ್ಶನವಾಗಿ ಭಾವಜಾಗೃತಿಯಾಗುವುದು : ಗಣೇಶಲೋಕದಿಂದ ಹೊರಟು ನಾನು ‘ಶ್ರೀ ಭವಾನಿದೇವೈ ನಮಃ |’ ಎಂಬ ನಾಮಜಪವನ್ನು ಮಾಡುತ್ತ ದುರ್ಗಾಲೋಕದಲ್ಲಿ ತಲುಪಿದೆನು. ನನಗೆ ಅಲ್ಲಿ ಶಿವನೊಂದಿಗೆ ಶ್ರೀ ದುರ್ಗಾದೇವಿಯ ದರ್ಶನವಾಯಿತು. ತಾಯಿಯು ಕಾಣೆಯಾದ ಬಾಲಕನಿಗೆ ತಾಯಿಯು ಭೇಟಿಯಾದ ನಂತರ ಹೇಗೆ ಅಳು ಬರುತ್ತದೆಯೋ, ಹಾಗೆ ಶ್ರೀ ಭವಾನಿಮಾತೆಯನ್ನು ನೋಡಿ ನನ್ನ ಕಂಠವು ತುಂಬಿಬಂದಿತು. ನನಗೆ ಅವಳಲ್ಲಿ ನನ್ನ ಕುಲದೇವಿಯು ಕಾಣಿಸತೊಡಗಿದಳು.

೩ ಆ. ದುರ್ಗಾಲೋಕದಲ್ಲಿನ ಎಲ್ಲ ಸಾಧಕಿಯರು ಭವಾನಿಮಾತೆಗೆ ಮೊರೆಯಿಡುವುದು, ಅವಳ ಶಸ್ತ್ರಗಳಿಂದ ಹೂವುಗಳು ಬೀಳುವುದು ಮತ್ತು ಅವಳು ಕುಲದೇವಿಯ ನಾಮಜಪದ ಪ್ರಸಾರವನ್ನು ಮಾಡಿಸಿಕೊಳ್ಳುತ್ತಿರುವಳೆಂದು ಅರಿವಾಗುವುದು : ದುರ್ಗಾದೇವಿಯ ಲೋಕದಲ್ಲಿ ನನಗೆ ಎಲ್ಲ ಸಾಧಕಿಯರು ಕಾಣಿಸಿದರು. ನಾವೆಲ್ಲರೂ ಶ್ರೀ ಭವಾನಿಮಾತೆಗೆ, ‘ಹೇ ಮಾತೇ, ನಾವು ನಿನಗೆ ಸಂಪೂರ್ಣವಾಗಿ ಶರಣಾಗಿದ್ದೇವೆ. ನೀನು ನಮ್ಮನ್ನು ರಕ್ಷಿಸು, (ಸ್ವೀಕರಿಸು)’ ಎಂದು ಮೊರೆಯಿಟ್ಟೆವು. ಅನಂತರ ದೇವಿಯ ಕೈಯಲ್ಲಿನ ಶಸ್ತ್ರಗಳಿಂದ ಹೂವುಗಳು ಬೀಳತೊಡಗಿದವು. ‘ಆ ಎಲ್ಲ ಹೂವುಗಳು ಸಾಧಕಿಯರ ಬೊಗಸೆಯಲ್ಲಿ ಬರುತ್ತಿವೆ’, ಎಂದು ನನಗೆ ಅರಿವಾಯಿತು. ಆಗ ನನಗೆ ‘ಕೇವಲ ಕೈ ನಮ್ಮದಾಗಿದೆ ಮತ್ತು ಅದರಲ್ಲಿನ ಶಕ್ತಿ ಮಾತ್ರ ಭಗವತಿದೇವಿಯದ್ದಾಗಿದೆ’, ಎಂದು ಅರಿವಾಯಿತು. ಆಗ ‘ನನಗೆ ಕೇವಲ ಕರ್ಮವನ್ನು ಮಾಡುವುದಿದೆ, ಎಂದರೆ ಕುಲ ದೇವತೆಯ ನಾಮಜಪದ ಪ್ರಸಾರವನ್ನು ಮಾಡುವುದಿದೆ’, ಎಂದು ನನಗೆ ತೀವ್ರತೆಯಿಂದ ಅರಿವಾಯಿತು. ‘ದೇವಿಯೇ ಈ ಪ್ರಸಾರವನ್ನು ನನ್ನಿಂದ ಮಾಡಿಸಿಕೊಳ್ಳುತ್ತಾಳೆ’, ಎಂದು ನನಗೆ ಎನಿಸಿತು.

೩ ಇ. ಸಾಧಕಿಯರು ದೇವಿಗೆ ಉಡಿಯನ್ನು ತುಂಬುವುದು ಮತ್ತು ಆಭರಣಗಳನ್ನು ಅರ್ಪಣೆ ಮಾಡಿ ಹಾರ ಹಾಕುವುದು : ನನ್ನ ಮನಸ್ಸಿನಲ್ಲಿ ‘ಭವಾನಿದೇವಿಗೆ ಉಡಿಯನ್ನು ತುಂಬೋಣ’, ಎಂಬ ವಿಚಾರವು ಬಂದಿತು. ನಾನು ನನ್ನ ಕೈಯಲ್ಲಿ ಕೆಂಪು ಬಣ್ಣದ ಒಂಭತ್ತುಗಜದ ಸೀರೆ, ಶ್ರೀಫಲ, ಮಂಗಳಸೂತ್ರ, ಕಾಲುಂಗುರ, ಮಲ್ಲಿಗೆಹೂವಿನ ಮಾಲೆ ಮತ್ತು ಸುಗಂಧದ್ರವ್ಯವನ್ನು ತೆಗೆದುಕೊಂಡೆನು. ದೇವಿಮಾತೆಯ ವಿಶಾಲವಾದ ರೂಪದೊಂದಿಗೆ ನನ್ನ ಕೈಗಳು ಚಿಕ್ಕದಾಗಿ ಕಾಣಿಸುತ್ತಿದ್ದವು. ನಾನು ದೇವಿಯಲ್ಲಿ ಭಾವವನ್ನಿಟ್ಟು ಉಡಿಯನ್ನು ಅರ್ಪಣೆ ಮಾಡಿದೆನು. ನಾವೆಲ್ಲರೂ ಸೇರಿ ಭವಾನಿಮಾತೆಗೆ ಉಡಿ ತುಂಬಿದೆವು. ನಾವು ದೇವಿಗೆ ಭಾವಪೂರ್ಣವಾಗಿ ಸೀರೆಯನ್ನು ಉಡಿಸಿ ಎಲ್ಲ ಆಭರಣಗಳನ್ನು ಅರ್ಪಣೆ ಮಾಡಿದೆವು ಮತ್ತು ಹಾರವನ್ನು ಹಾಕಿದೆವು.

೩ ಈ. ‘ಎಲ್ಲ ಸಾಧಕಿಯರು ಮತ್ತು ಸಂತರು ಭವಾನಿಮಾತೆಯ ಜಯಜಯಕಾರ ಮಾಡಿ ದೇವಿಯ ಜೊತೆ ನಡೆಯುತ್ತಾ ಹೋಗುವುದು, ದೇವಿಯು ಕೆಟ್ಟ ಶಕ್ತಿಗಳ ವಿನಾಶ ಮಾಡುತ್ತಿದ್ದಾಳೆ’, ಎಂಬ ದೃಶ್ಯವು ಕಾಣಿಸುವುದು ಮತ್ತು ಹಿಂದೂ ರಾಷ್ಟ್ರದ ಕಾರ್ಯವು ಪೂರ್ಣಗೊಳ್ಳಲಿದೆ ಎಂದು ಅರಿವಾಗುವುದು : ನಾವೆಲ್ಲ ಸಾಧಕಿಯರು ಭವಾನಿದೇವಿಯ ಜಯಜಯಕಾರವನ್ನು ಮಾಡಿ ದೇವಿಯ ಜೊತೆ ಹೋಗುತ್ತಿದ್ದೇವೆ. ಮೊದಲು ಶ್ರೀ ಭವಾನಿಮಾತೆ, ಅವಳ ಸೀರೆಯ ಸೆರಗನ್ನು ಹಿಡಿದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಅವರ ಹಿಂದೆ ಎಲ್ಲ ಸಂತರು, ಸಾಧಕಿಯರು ಮತ್ತು ಎಲ್ಲರೂ ಹೊರಟಿದ್ದೇವೆ. ದೇವಿಯು ಕೆಟ್ಟ ಶಕ್ತಿಗಳ ವಿನಾಶ ಮಾಡುತ್ತಿದ್ದಾಳೆ’, ಎಂಬ ದೃಶ್ಯವು ಕಾಣಿಸಿತು. ಅದೇ ಸಮಯದಲ್ಲಿ ‘ಶ್ರೀವಿಷ್ಣುರೂಪದಲ್ಲಿನ ಗುರುದೇವರು ಮತ್ತು ಶಿವತತ್ತ್ವ ಬೀಜರೂಪದಿಂದ ಎಲ್ಲರಿಗೂ ಶಕ್ತಿಯನ್ನು ನೀಡುತ್ತಿದ್ದಾರೆ. ಕಾರ್ಯದ ಬೀಜಗಳನ್ನು ಬಿತ್ತುತ್ತಿದ್ದಾರೆ ಮತ್ತು ಅದು ಫಲಪ್ರದ ಮಾಡುವ ಕೆಲಸವು ಶ್ರೀ ಭವಾನಿಮಾತೆಯು ಮಾಡುತ್ತಿದ್ದಾಳೆ. ಋದ್ಧಿ-ಸಿದ್ಧಿ ಇವರೂ ಕಾರ್ಯನಿರತರಾಗಿದ್ದಾರೆ ಆದುದರಿಂದಲೇ ಹಿಂದೂ ರಾಷ್ಟ್ರದ ಕಾರ್ಯವು ಪೂರ್ಣಗೊಳ್ಳಲಿದೆ’, ಎಂಬುದನ್ನು ನಾನು ಭಾವಪ್ರಯೋಗದಿಂದ ಅನುಭವಿಸಿದೆನು. ಆ ಸಮಯದಲ್ಲಿ ‘ಎಲ್ಲರಿಂದ ಭಾವಪೂರ್ಣ ನಾಮಜಪವಾಗಿ ಅದು ಶ್ರೀ ಭವಾನಿಮಾತೆಯ ಚರಣಗಳಲ್ಲಿ ಅರ್ಪಣೆಯಾಗುತ್ತಿದೆ’, ಎಂದು ನನಗೆ ಅರಿವಾಯಿತು. ಗುರುದೇವರು ಇಂದು ನನ್ನ ಮೇಲೆ ಕೃಪೆಯ ಮಳೆಯನ್ನೇ ಸುರಿಸಿದರು ಮತ್ತು ಅವರು ನನ್ನನ್ನು ಈ ಭಾವವಿಶ್ವದಲ್ಲಿ ಕರೆದೊಯ್ದರು. ಆದುದರಿಂದ ಅವರ ಚರಣಗಳಲ್ಲಿ ನನ್ನ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.

೪. ದೇವತೆಗಳ ಉಚ್ಚ ಲೋಕಗಳನ್ನು ಅನುಭವಿಸುವಾಗ ಆಗಿರುವ ಮನಸ್ಸಿನ ವಿಚಾರಪ್ರಕ್ರಿಯೆ

ಅ. ‘ಮುಂಬರುವ ಆಪತ್ಕಾಲದಲ್ಲಿ ‘ಶ್ರೀ ವಿಷ್ಣವೇ ನಮಃ | ಈ ನಾಮಜಪದಿಂದ ಎಲ್ಲ ಸಾಧಕರ ಸುತ್ತಲೂ ಶ್ರೀವಿಷ್ಣುವಿನ, ಎಂದರೆ ನಾರಾಯಣನ ಅಭೇದ್ಯವಾದಂತಹ ಸಂರಕ್ಷಣಾಕವಚವು ನಿರ್ಮಾಣವಾಗಲಿದೆ.

ಆ. ‘ಶ್ರೀ ಸಿದ್ಧಿವಿನಾಯಕಾಯ ನಮಃ |’ ಈ ಮಂತ್ರಜಪದಿಂದ ಸಾಧಕರಿಗೆ ಸಿದ್ಧಿವಿನಾಯಕನ ಶಕ್ತಿಯು ದೊರಕಿ ಅವರ ಬುದ್ಧಿಯ ಲಯವಾಗಿ ಸಾತ್ತ್ವಿಕವಾಗುತ್ತದೆ. ಹಿಂದೂ ರಾಷ್ಟ್ರವನ್ನು ನಡೆಸಲು ಆವಶ್ಯಕವಾಗಿರುವಂತಹ ಋದ್ಧಿ-ಸಿದ್ಧಿಯ ಶಕ್ತಿಯೂ ದೊರಕಲಿದೆ. ‘ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಎಲ್ಲ ವಿಘ್ನಗಳು ಸಿದ್ಧಿವಿನಾಯಕನ ನಾಮಜಪದಿಂದ ದೂರವಾಗಲಿದೆ’, ಎಂದು ನನಗೆ ಎನಿಸಿತು.

ಇ. ‘ಶ್ರೀ ಭವಾನಿದೇವೈ ನಮಃ |’ ಈ ನಾಮಜಪದಿಂದ ಎಲ್ಲ ಸಾಧಕರ ಮೇಲೆ ಕುಲದೇವಿಯ ಕೃಪೆಯಾಗಿ ಅವರಲ್ಲಿ ನಾಮಜಪದ ಶಕ್ತಿ ಬಂದಿರುವುದರಿಂದ ಮುಂಬರುವ ಆಪತ್ಕಾಲದಲ್ಲಿ ಅವರಿಗೆ ಹೋರಾಡಲು ಸಾಧ್ಯವಾಗುವುದು ಮತ್ತು ‘ಕೊನೆಗೆ ಸಾಧಕರ ವಿಜಯವೇ ಆಗಲಿದೆ, ಅಂದರೆ ಹಿಂದೂ ರಾಷ್ಟ್ರವು ಬರಲಿದೆ’, ಎಂದು ನನಗೆ ಅರಿವಾಯಿತು.

ಈ. ‘ಈ ಎಲ್ಲ ಕಾರ್ಯಗಳಲ್ಲಿ ವಿಷ್ಣುರೂಪದಲ್ಲಿನ ಗುರುದೇವರು ಬೀಜರೂಪದಿಂದ ಕಾರ್ಯವನ್ನು ಮಾಡುವರಿದ್ದಾರೆ ಮತ್ತು ಎಲ್ಲ ಸಾಧಕರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮಾರ್ಗದರ್ಶನಕ್ಕನುಸಾರ ಸೇವೆಯನ್ನು ಮಾಡುವರಿದ್ದಾರೆ’, ಎಂದು ಅರಿವಾಯಿತು. ಹೇ ಗುರುದೇವಾ, ‘ಇದೆಲ್ಲವೂ ನನ್ನ ದೇಹದಲ್ಲಿ ಹೋಗುತ್ತಿದೆ ಮತ್ತು ನನ್ನ ಎಲ್ಲ ಕೋಶಗಳಿಗೆ ಆನಂದವಾಗುತ್ತಿದೆ’, ಎಂದು ನನಗೆ ಅರಿವಾಯಿತು. ನನಗೆ ‘ಈ ಸ್ಥಿತಿಯಿಂದ ಹೊರಗೆ ಬರಲೇಬಾರದು’, ಎಂದು ಎನಿಸುತ್ತಿತ್ತು.

ಹೇ ಗುರುದೇವಾ, ಈ ಸಾಮಾನ್ಯ ಜೀವಕ್ಕೆ ಇದೆಲ್ಲವನ್ನು ಅನುಭವಿಸುವ ಅವಕಾಶವನ್ನು ನೀಡಿದ್ದೀರಿ; ಆದುದರಿಂದ ತಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! ‘ನನ್ನ ಈ ಭಾವವು ನಿರಂತರವಾಗಿ ತಮ್ಮ ಚರಣಗಳಲ್ಲಿ ಅರ್ಪಣೆ ಮಾಡಿಕೊಳ್ಳಿರಿ. ಈ ಆನಂದವನ್ನು ನನಗೆ ಪುನಃ ಪುನಃ ಅನುಭವಿಸಲು ಸಾಧ್ಯವಾಗಲಿ’, ಎಂದು ತಮ್ಮ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥಿಸುತ್ತೇನೆ.’ 

  • ಸೌ. ನಿವೇದಿತಾ ಜೋಶಿ, ನಂದುರಬಾರ (೩೦.೬.೨೦೨೦)

ಅನುಭೂತಿ : ಈ ವಾರದ ಸನಾತನ ಪ್ರಭಾತದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದಂತಹ ವೈಯಕ್ತಿಕ ಅನುಭೂತಿಗಳಾಗಿದ್ದು, ಅದು ಸರ್ವಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ-ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.