‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ ಪರಿಷತ್ – ಒಂದು ಅಪಪ್ರಚಾರ’ ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯಿಂದ ‘ಆನ್‌ಲೈನ್’ ವಿಶೇಷ ಸಂವಾದ !
ಹಿಂದೂ ಧರ್ಮವನ್ನು ಕೀಳಾಗಿ ಕಂಡು ಅದರ ಅಪಪ್ರಚಾರ ಮಾಡುವ ಮೂಲಕ ಹಿಂದೂ ಸಮಾಜವನ್ನು ಹಿಯಾಳಿಸುವ ಪ್ರಯತ್ನವನ್ನು ವಿರೋಧಕರು ಹಿಂದಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ಈಗಲೂ ಒಂದು ಷಡ್ಯಂತ್ರದ ಮೂಲಕ ಪ್ರಸಾರಮಾಧ್ಯಮಗಳಲ್ಲಿ ಮತ್ತು ಶಿಕ್ಷಣ ಕ್ಷೇತ್ರದ ಜನರನ್ನು ಹಿಡಿತದಲ್ಲಿಟ್ಟುಕೊಂಡು ಈ ಪ್ರಯತ್ನಗಳು ನಡೆಯುತ್ತಿವೆ; ಆದರೆ ಹಿಂದೂಗಳು ಇದನ್ನು ನಿರ್ಲಕ್ಷಿಸುವುದು ಕಾಣುತ್ತಿದೆ. ಹಿಂದೂ ಸಂಸ್ಕೃತಿ, ಸಭ್ಯತೆ ಎಲ್ಲಕ್ಕಿಂತ ಪುರಾತನವಾಗಿದ್ದು ಕಾಲದ ಪ್ರವಾಹದಲ್ಲಿ ಅದು ಇನ್ನೂ ಉಳಿದುಕೊಂಡಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಹಿಂದೂಗಳು ಈಗ ವೈಚಾರಿಕವಾಗಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡು ನಮ್ಮ ಧರ್ಮದ ಬಗ್ಗೆ ಧೃಢವಾದ ನಿಲುವನ್ನು ಕೈಗೊಳ್ಳಬೇಕಿರುವುದು ಅಗತ್ಯವಿದೆ, ಎಂದು ಜರ್ಮನಿಯ ಪ್ರಸಿದ್ಧ ಲೇಖಕಿ ಮತ್ತು ಬ್ಲಾಗರ್ ಮಾರಿಯಾ ವರ್ಥ ಇವರು ಹೇಳಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಏರ್ಪಡಿಸಲಾಗಿದ್ದ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ ಪರಿಷತ್ – ಒಂದು ಅಪಪ್ರಚಾರ’ ಎಂಬ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಶ್ರೀಲಂಕಾದ ‘ಶಿವಾ ಸೇನಾಯಿ’ಯ ಸಂಸ್ಥಾಪಕರಾದ ಶ್ರೀ. ಎಂ ಸಚ್ಚಿಥಾನಂದನ್ ಇವರು ಮಾತನಾಡುತ್ತಾ, ‘ಹಿಂದೂ ಧರ್ಮವು ಜಗತ್ತಿಗೆ ಲಾಭವಾಗುವಂತಹ ಅನೇಕ ವಿಷಯಗಳನ್ನು ನೀಡಿದೆ. ಹಿಂದುತ್ವವನ್ನು ನಾಶ ಮಾಡುವುದು ಎಂದರೆ ಅನೇಕ ವರ್ಷಗಳಿಂದ ನಿರ್ಮಾಣವಾಗಿರುವ ನೈತಿಕತೆ, ಸಭ್ಯತೆ, ಕೌಟುಂಬಿಕ, ರಾಜಕೀಯ, ಐತಿಹಾಸಿಕ, ಭೌಗೋಳಿಕ ಮೌಲ್ಯಗಳನ್ನು ನಾಶ ಮಾಡುವುದಾಗಿದೆ. ಭಗವದ್ಗೀತೆ, ಚಾಣಕ್ಯ ನೀತಿ ಇಂತಹ ಗ್ರಂಥಗಳನ್ನು ನಾಶ ಮಾಡುವ ಕೃತ್ಯವಾಗಿದೆ. ನಿಜವಾದ ಹಿಂದೂ ಸಹೋದರರು ಈ ಹಿಂದೂವಿರೋಧಿ ಪರಿಷತ್ತಿನ ಆಯೋಜನೆ ಮಾಡಿದವರ ಮಾತುಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ. ತದ್ವಿರುದ್ಧ ದುರ್ಯೋಧನ ಮತ್ತು ರಾವಣನಂತೆಯೇ, ಈ ಸಮ್ಮೇಳನದ ಆಯೋಜಕರು ಕೂಡ ವಿಫಲರಾಗುವರು ಮತ್ತು ಹಿಂದುತ್ವವು ಮುಂದೆ ಸಾಗುವುದು, ಎಂದು ನಮಗೆ ಧೃಢವಾದ ವಿಶ್ವಾಸವಿದೆ.’ ಎಂದು ಹೇಳಿದರು.
ಇತಿಹಾಸಕಾರ ಸೌ. ಮೀನಾಕ್ಷಿ ಶರಣ ಇವರು ಮಾತನಾಡುತ್ತಾ, ‘ಬ್ರಿಟಿಷರು ಸಂಸ್ಕೃತ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯಗಳ ಮೇಲೆ ಆಘಾತ ಮಾಡಿ ಭಾರತದ ಇತಿಹಾಸದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಭಾರತಕ್ಕೆ ದೊಡ್ಡ ಹಾನಿ ಮಾಡಿದರು. ಹಿಂದೂ ಧರ್ಮದ ದ್ವೇಷಪೂರಿತ ಪ್ರಚಾರವನ್ನು ಮಾಡಲು ಅಮೇರಿಕಾದಲ್ಲಿ ನಡೆಯುತ್ತಿರುವ ‘ಡಿಸಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಇದೇನು ಮೊದಲನೇ ಪರಿಷತ್ತು ಅಲ್ಲ ಹಿಂದೂ ಧರ್ಮದ ತೇಜೋವಧೆಗಾಗಿ ಈ ಹಿಂದೆಯೂ ವಿವಿಧ ದೇಶಗಳಲ್ಲಿ ಪರಿಷತ್ತುಗಳನ್ನು ಆಯೋಜಿಸಿ ಪ್ರಯತ್ನಿಸಲಾಗಿದೆ. ಕಾಲಕ್ಕೆ ತಕ್ಕಂತೆ ವ್ಯಕ್ತಿ ಬದಲಾಗಿದ್ದರೂ, ಹಿಂದೂ ಧರ್ಮದ ಬಗ್ಗೆ ದ್ವೇಷಪೂರಿತ ಪ್ರಚಾರ ಮಾಡುವ ಕಾರ್ಯಕ್ರಮ ಇನ್ನೂ ನಡೆಯುತ್ತಿದೆ. ಹಿಂದೂಗಳು ಇದನ್ನು ಬಲವಾಗಿ ವಿರೋಧಿಸುವುದು ಆವಶ್ಯಕವಾಗಿದೆ’ ಎಂದು ಹೇಳಿದರು.