ಚಾತುರ್ಮಾಸ

ವರ್ಜ್ಯಾವರ್ಜ್ಯ

ಅ. ವರ್ಜ್ಯ

. ಚಾತುರ್ಮಾಸದಲ್ಲಿ ಪ್ರಾಣಿಗಳ ಮೂಳೆಯಿಂದ ತಯಾರಿಸಿದ ಸುಣ್ಣ, ಚರ್ಮಪಾತ್ರೆಯಲ್ಲಿನ ನೀರು, ಗಜಲಿಂಬೆ, ಮಹಾಳುಂಗ, ವೈಶ್ವದೇವ ಮಾಡದ ಮತ್ತು ವಿಷ್ಣುವಿಗೆ ಅರ್ಪಿಸದಿರುವ ಆಹಾರ, ಚನ್ನಂಗಿಬೇಳೆ (ಮಸ್ಸೂರಿ ಬೇಳೆ), ಮಾಂಸ, ಬಿಳಿ ಅವರೆಕಾಯಿ, ಅವರೆಕಾಯಿ, ಅಲಸಂದೆ, ಉಪ್ಪಿನಕಾಯಿ, ಬದನೆ, ಕಲ್ಲಂಗಡಿ, ಬಹಳಷ್ಟು ಬೀಜವಿದ್ದ ಅಥವಾ ನಿರ್ಬೀಜ ಫಲ, ಮೂಲಂಗಿ, ಹಾಲುಗುಂಬಳ, ಬೋರೇಹಣ್ಣು, ನೆಲ್ಲಿಕಾಯಿ, ಹುಣಸೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳು ವರ್ಜ್ಯ.

೨. ಮಂಚದ ಮೇಲೆ ಮಲಗುವುದು

. ಋತುಕಾಲ ಬಿಟ್ಟು ಸ್ತ್ರೀಸಂಗ

. ಪರಾನ್ನ

. ವಿವಾಹ ಮತ್ತು ಇತರ ತತ್ಸಮ ಕಾರ್ಯಗಳು

೬. ಚಾತುರ್ಮಾಸದಲ್ಲಿ ಸಾಧು-ಸಂನ್ಯಾಸಿಗಳಿಗೆ ಕ್ಷಾರ ನಿಷೇಧಿಸಲಾಗಿದೆ. ಅವರು ನಾಲ್ಕು ತಿಂಗಳುಗಳ ಕಾಲ ಅಥವಾ ಕನಿಷ್ಠ ಎರಡು ತಿಂಗಳಾದರೂ ಒಂದೇ ಸ್ಥಳದಲ್ಲಿ ಇರಬೇಕು ಎಂದು ಧರ್ಮಸಿಂಧು ಮತ್ತು ಇತರ ಕೆಲವು ಧರ್ಮಗ್ರಂಥಗಳಲ್ಲಿಯೂ ಹೇಳಲಾಗಿದೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)