ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಸೌ. ಪೂಜಾ ಪಾಟೀಲ (೪೮ ವರ್ಷ) ಮತ್ತು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಪುಷ್ಪಾಂಜಲಿ ಪಾಟಣಕರ (೭೨ ವರ್ಷ)

ರಕ್ಷಾಬಂಧನದ ನಿಮಿತ್ತ ಆಯೋಜಿಸಿದ್ದ ‘ಆನ್‌ಲೈನ್ ವಿಶೇಷ ಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ನೀಡಿದ ಆಧ್ಯಾತ್ಮಿಕ ಪ್ರಗತಿರೂಪಿ ಭಾವ ಉಡುಗೊರೆ !

ಸೌ. ಪೂಜಾ ಪಾಟೀಲ (ಎಡಗಡೆ) ಇವರ ಸತ್ಕಾರ ಮಾಡುತ್ತಿರುವ ಸೌ. ತುಳಜಾ ಹೊನಗೇಕರ

ಬೆಳಗಾವಿ – ವಯೋವೃದ್ಧರಾಗಿದ್ದರೂ ನಿರಂತರವಾಗಿ ಗುರುಚರಣಗಳ ಧ್ಯಾಸ, ಗುರುಗಳ ಮೇಲಿನ ಶ್ರದ್ಧೆ, ಭಾವ ಮತ್ತು ಸಾಧಕರನ್ನು ನಿರಪೇಕ್ಷವಾಗಿ ಪ್ರೀತಿಸುವ ಪುಷ್ಪಾಂಜಲಿ ಪಾಟಣಕರ (೭೨ ವರ್ಷ) ಇವರು ಶೇ. ೬೧  ಮತ್ತು ಸೇವೆಯ ಬಗ್ಗೆ ಭಾವ ಮತ್ತು ತಳಮಳವಿರುವ, ಪ್ರತಿಯೊಂದು ಸೇವೆಯನ್ನು ಮನಃಪೂರ್ವಕವಾಗಿ ಸ್ವೀಕರಿಸಿ ಕಾರ್ಯ ಮಾಡುವ, ನಿರಂತರವಾಗಿ ಕೃತಜ್ಞತಾಭಾವದಲ್ಲಿ ಮತ್ತು ಕಲಿಯುವ ಸ್ಥಿತಿಯಲ್ಲಿರುವ ಸೌ. ಪೂಜಾ ಪರಶುರಾಮ ಪಾಟೀಲ (೪೮ ವರ್ಷಗಳು) ಇವರು ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನನ-ಮರಣದ ಚಕ್ರದಿಂದ ಮುಕ್ತರಾದರು. ಈ ಆನಂದದ ವಾರ್ತೆಯನ್ನು ಶೇ. ೬೯ ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಇವರು ರಕ್ಷಾ ಬಂಧನದ ನಿಮಿತ್ತದಿಂದ ೨೨.೮.೨೦೨೧ ರಂದು ಆಯೋಜಿಸಲಾಗಿದ್ದ ‘ಆನ್‌ಲೈನ್ ವಿಶೇಷ ಸತ್ಸಂಗದಲ್ಲಿ ನೀಡಿದರು. ರಕ್ಷಾಬಂಧನದ ನಿಮಿತ್ತದಿಂದ ಪರಾತ್ಪರ ಗುರು ಡಾ. ಆಠವಲೆಯವರು ನೀಡಿದ ಆಧ್ಯಾತ್ಮಿಕ ಪ್ರಗತಿರೂಪಿ ಅಮೂಲ್ಯ ಉಡುಗೊರೆಯಿಂದ ಎಲ್ಲರ ಆನಂದ ದ್ವಿಗುಣವಾಯಿತು.

ಪುಷ್ಪಾಂಜಲಿ ಪಾಟಣಕರ (ಬಲಗಡೆ) ಇವರ ಸತ್ಕಾರ ಮಾಡುತ್ತಿರುವ ಸೌ. ಶುಭಾಂಗಿ ಕಂಗ್ರಾಳಕರ

ಈ ಸಂದರ್ಭದಲ್ಲಿ ಸೌ. ಪೂಜಾ ಪರಶುರಾಮ ಪಾಟೀಲ ಇವರ ಸತ್ಕಾರವನ್ನು ಖಾನಾಪುರದ ಸೌ. ತುಳಜಾ ಹೊನಗೇಕರ ಇವರು ಮಾಡಿದರು. ಹಾಗೆಯೇ ಪುಷ್ಪಾಂಜಲಿ ಪಾಟಣಕರ ಇವರ ಸತ್ಕಾರವನ್ನು ಶೇ. ೬೩ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಶುಭಾಂಗಿ ಕಂಗ್ರಾಳಕರ ಇವರು ಅವರ ನಿವಾಸಸ್ಥಾನಕ್ಕೆ ಹೋಗಿ ಮಾಡಿದರು. ಈ ಭಾವಸಮಾರಂಭದಲ್ಲಿ ಸನಾತನದ ರಾಮನಾಥಿ ಆಶ್ರಮದಲ್ಲಿ ಪೂರ್ಣವೇಳೆ ಸೇವೆಯನ್ನು ಮಾಡುವ ಸೌ. ಪೂಜಾ ಪಾಟೀಲ ಇವರ ಪತಿ ಶ್ರೀ. ಪರಶುರಾಮ ಪಾಟೀಲ (ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ) ಇವರ ಸಹಿತ ಜಿಲ್ಲೆಯ ಸಾಧಕರೂ ‘ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಕರು ಪ್ರಗತಿ ಹೊಂದಿದ ಸಾಧಕಿಯರ ಗುಣವೈಶಿಷ್ಟ್ಯಗಳನ್ನು ಹೇಳಿದರು.

ಸತ್ಕಾರಗೊಂಡಿರುವ ಸಾಧಕಿಯರ ಮನೋಗತ 

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದಲೇ ಪ್ರಗತಿಯಾಗಿದೆ ! – ಪುಷ್ಪಾಂಜಲಿ ಪಾಟಣಕರ

ಪುಷ್ಪಾಂಜಲಿ ಪಾಟಣಕರ

ಪರಾತ್ಪರ ಗುರು ಡಾ. ಆಠವಲೆಯವರೇ ನನ್ನಿಂದ ಪ್ರಯತ್ನಗಳನ್ನು ಮಾಡಿಸಿಕೊಂಡರು. ಅವರ ಕೃಪೆಯಿಂದಲೇ ನನ್ನ ಪ್ರಗತಿ ಆಗಿದೆ. ಅದಕ್ಕಾಗಿ ಅವರ ಚರಣಗಳಲ್ಲಿ ಕೃತಜ್ಞತೆ !

ಪ್ರಗತಿಯ ಧ್ಯೇಯವನ್ನು ಪೂರ್ಣ ಮಾಡಿಸಿಕೊಂಡಿರುವ ಎಲ್ಲ ಶ್ರೇಯಸ್ಸು ಪರಾತ್ಪರ ಗುರುದೇವರಿಗೆ ಸಲ್ಲುತ್ತದೆ ! – ಸೌ. ಪೂಜಾ ಪಾಟೀಲ

ಸೌ. ಪೂಜಾ ಪಾಟೀಲ

ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ಪ್ರಗತಿ ಮಾಡಿಸಿಕೊಂಡರು, ಅದಕ್ಕಾಗಿ ಅವರ ಚರಣಗಳಿಗೆ ಕೃತಜ್ಞಳಾಗಿದ್ದೇನೆ. ಈ ಪ್ರಗತಿಯ ಧ್ಯೇಯವನ್ನು ಪೂರ್ಣಗೊಳಿಸಿಕೊಂಡಿರುವ ಶ್ರೇಯಸ್ಸು ಗುರುದೇವರಿಗೇ ಸಲ್ಲುತ್ತದೆ.

ಸೌ. ಪೂಜಾ ಪಾಟೀಲ ಇವರ  ಸಂಬಂಧಿಕರ ಮನೋಗತ

೧. ಶ್ರೀ ಪರಶುರಾಮ ಪಾಟೀಲ (ಸೌ. ಪೂಜಾ ಪಾಟೀಲ ಇವರ ಪತಿ) : ನನ್ನ ಪತ್ನಿಯು ನನಗೆ ಆಶ್ರಮದಲ್ಲಿ ಸೇವೆ ಮಾಡಲು ಅನುಮತಿ ನೀಡಿ ಬಹಳ ದೊಡ್ಡ ತ್ಯಾಗವನ್ನು ಮಾಡಿದ್ದಾಳೆ. ಅವಳು ನನ್ನ ಅನುಪಸ್ಥಿತಿಯಲ್ಲಿ ಮನೆಯ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಾಳೆ, ಅಲ್ಲದೇ ಅವಳು ಮಕ್ಕಳ ಮೇಲೆ ಸಾಧನೆಯ ಸಂಸ್ಕಾರವನ್ನು ಮಾಡಿದ್ದಾಳೆ. ಪರಾತ್ಪರ ಗುರುದೇವರ ಕೃಪೆ ಮತ್ತು ಅವಳ ಸಾಧನೆಯ ತಳಮಳದಿಂದಲೇ ಅವಳು ಶೇ. ೬೨ ರಷ್ಟು ಮಟ್ಟವನ್ನು ತಲುಪಿದ್ದಾಳೆ.

೨. ಶ್ರೀ. ಓಂ ಪಾಟೀಲ (ಸೌ. ಪೂಜಾ ಪಾಟೀಲ ಇವರ ಮಗ (೨೦ ವರ್ಷ)) : ನನ್ನ ತಾಯಿ, ನಮಗೆ ಸಾಧನೆ ಮತ್ತು ವ್ಯವಹಾರ ಇವೆರಡನ್ನೂ ಕಲಿಸಿದ್ದಾಳೆ. ಅದಕ್ಕಾಗಿ ಅವಳ ಬಗ್ಗೆ ವಿಸ್ಮಯವೆನಿಸುತ್ತದೆ. (ಇದನ್ನು ಹೇಳುವಾಗ ಶ್ರೀ. ಓಂ ಇವರ ಭಾವಜಾಗೃತವಾಗಿತ್ತು.)