ಕಾಬುಲ (ಅಫಘಾನಿಸ್ತಾನ) – ತಾಲಿಬಾನಿಗಳು ಮುಲ್ಲಾ ಹೈಬತುಲ್ಲಾ ಅಖುಂದಜಾದಾನನ್ನು ತಮ್ಮ ಸರ್ವೋಚ್ಚ ಮುಖಂಡರೆಂದು ಘೋಷಿಸಿದ್ದಾರೆ. ‘ಟೊಲೊ ನ್ಯೂಜ್’ನ ಸುದ್ದಿಯಂತೆ, ತಾಲಿಬಾನಿನ ಮುಲ್ಲಾ ಹೈಬತುಲ್ಲಾ ಅಖುಂದಜಾದಾರವರ ನೇತೃತ್ವದ ಕೆಳಗೆ ಪ್ರಧಾನಮಂತ್ರಿ ಅಥವಾ ರಾಷ್ಟ್ರಾಧ್ಯಕ್ಷರು ದೇಶವನ್ನು ನಡೆಸುವುದಾಗಿ ಹೇಳಿದ್ದಾರೆ.
ತಾಲಿಬಾನಿನ ಸಾಂಸ್ಕೃತಿಕ ಆಯೋಗದ ಸದಸ್ಯರಾದ ಅನಾಮುಲ್ಲಾ ಸಮಾಂಗನೀಯವರು ಹೀಗೆಂದರು, ಮುಲ್ಲಾ ಹೈಬತುಲ್ಲಾ ಅಖುಂದಜಾದಾ ಇವರು ಹೊಸ ಸರಕಾರದ ಮುಖಂಡನಾಗಿರುವರು. ಇಸ್ಲಾಮೀ ಅಮಿರಾತ (ಅಫಘಾನಿಸ್ತಾನಕ್ಕೆ ತಾಲಿಬಾನ ನೀಡಿರುವ ಹೊಸ ಹೆಸರು) ಮುಂಬರುವ 2 ದಿನಗಳಲ್ಲಿ ಹೊಸ ಸರಕಾರವನ್ನು ಘೋಷಿಸಲಿದೆ. ಹೊಸ ಸರಕಾರದ ಸ್ಥಾಪನೆಯ ವಿಷಯದಲ್ಲಿನ ಚರ್ಚೆ ಹೆಚ್ಚು ಕಡಿಮೆ ಪೂರ್ಣವಾಗಿದ್ದು ಮಂತ್ರಿಮಂಡಲದ ವಿಷಯದಲ್ಲಿ ಅಗತ್ಯವಾದ ಚರ್ಚೆಯಾಗಿದೆ. ನಾವು ಘೋಷಿಸಲಿರುವ ಇಸ್ಲಾಮಿ ಸರಕಾರವು ಜನರಿಗೆ ಆದರ್ಶವಾಗಿರಲಿದೆ.
#IEWorld | Taliban set to name Haibatullah Akhundzada as supreme leader, map out their governmenthttps://t.co/qm2ZJkwS7l
— The Indian Express (@IndianExpress) September 2, 2021
ತಾಲಿಬಾನನ ಸದಸ್ಯರಾದ ಅಬ್ದುಲ ಹಾನನ ಹಕ್ಕಾನಿಯವರು ನುಡಿದರು, ಇಸ್ಲಾಮಿ ಅಮಿರಾತ ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಸಕ್ರಿಯವಾಗಿದೆ. ಪ್ರತಿಯೊಂದು ಪ್ರಾಂತ್ಯದ ರಾಜ್ಯಪಾಲರು ಕೆಲಸ ಮಾಡುತೊಡಗಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲೆಯ ರಾಜ್ಯಪಾಲರು ಹಾಗೂ ಪ್ರಾಂತ್ಯದಲ್ಲಿ ಒಬ್ಬರು ಪೊಲೀಸ್ ಪ್ರಮುಖರಿರುತ್ತಾರೆ ಹಾಗೂ ಅವರು ಜನರಿಗೋಸ್ಕರ ಕೆಲಸ ಮಾಡುತ್ತಾರೆ.