56 ಇಸ್ಲಾಮಿಕ್ ದೇಶಗಳ ಪೈಕಿ ಕೇವಲ ಪಾಕ್ ಮತ್ತು ಕತಾರನಿಂದ ಮಾತ್ರ ತಾಲಿಬಾನ್‍ಗೆ ಬೆಂಬಲ !

ತಾಲಿಬಾನ್‍ಗೆ ರಷ್ಯಾ ಮತ್ತು ಚೀನಾದಿಂದ ಅಪೇಕ್ಷೆ

ಇಸ್ಲಾಮಿ ದೇಶಗಳ ಸಂಘಟನೆಗಳೇ ತಾಲಿಬಾನ್‍ಗೆ ಬೆಂಬಲ ನೀಡುತ್ತಿಲ್ಲ; ಆದರೆ ಭಾರತಾದ್ಯಂತದ ಮುಸಲ್ಮಾನ ಸಂಘಟನೆಗಳು ಮತ್ತು ಕೆಲವು ನಾಯಕರು ಹಾಗೂ ಕೆಲವು ಗಣ್ಯರು ಅದನ್ನು ಬೆಂಬಲಿಸಿ ನಾವು ಹೆಚ್ಚು ಕಟ್ಟರರಾಗಿದ್ದೇವೆ, ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು 

ನವ ದೆಹಲಿ – ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದ ನಂತರ ತಾಲಿಬಾನ್‍ನಿಂದ ಸರಕಾರ ಸ್ಥಾಪಿಸಲು ಪ್ರಯತ್ನಗಳಾಗುತ್ತಿವೆ. ಈ ಮೂಲಕ ಜಗತ್ತಿನಾದ್ಯಂತದ ದೇಶಗಳು ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಬೇಕು, ಎಂದು ತಾಲಿಬಾನ್ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಇಸ್ಲಾಮಿ ದೇಶಗಳ ತಾಲಿಬಾನ್‍ನಿಂದ ಸಂಪರ್ಕ ಸಾಧಿಸುವ ಪ್ರಯತ್ನಗಳನ್ನು ಆರಂಭವಾಗಿವೆ. ಪ್ರಸ್ತುತ ಪಾಕಿಸ್ತಾನ ಮತ್ತು ಕತಾರ ಅನ್ನು ಬಿಟ್ಟು ಉಳಿದ 56 ದೇಶಗಳ ಪೈಕಿ ಯಾವುದೇ ಇಸ್ಲಾಮಿ ರಾಷ್ಟ್ರವು ಬಹಿರಂಗವಾಗಿ ತಾಲಿಬಾನ್ ನಿಯಂತ್ರಣಕ್ಕೆ ಮಾನ್ಯತೆಯನ್ನು ನೀಡಿಲ್ಲ. ಸ್ವಾರ್ಥವನ್ನು ಸಾಧಿಸಲು ಹಾತೊರೆಯುವ ರಷ್ಯಾ ಮತ್ತು ಚೀನಾವೂ ಕೂಡ ತಾಲಿಬಾನ್‍ಗೆ ಮಾನ್ಯತೆಯನ್ನು ನೀಡುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ; ಏಕೆಂದರೆ ಇತರ ದೇಶಗಳ ಸಹಿತ ತಮ್ಮ ದೇಶದಲ್ಲಿಯೂ ವಿರೋಧವನ್ನು ಎದುರಿಸಬೇಕಾಗುತ್ತಿದೆ. ಇನ್ನೊಂದೆಡೆ ಅಫ್ಘಾನಿಸ್ತಾನದ ನೆರೆಯ ದೇಶ ತಾಜಕಿಸ್ತಾನ ಮತ್ತು ಕಝಾಕಿಸ್ತಾನ ಈ ಇಸ್ಲಾಮಿ ದೇಶಗಳು ತಾಲಿಬಾನ್ ವಿರುದ್ಧ ಗಡಿಯಲ್ಲಿ ಸೈನಿಕರ ಸಂಖ್ಯಾಬಲವನ್ನು ಹೆಚ್ಚಿಸಿವೆ.

56 ಇಸ್ಲಾಮಿ ದೇಶಗಳ ಸಂಘಟನೆಯ ಮಹತ್ವ ಅಲ್ಪ !

56 ಇಸ್ಲಾಮಿ ದೇಶಗಳ `ಆರ್ಗನೈಜೇಶನ್ ಆಫ್ ಇಸ್ಲಾಮಿಕ್ ಕೊ-ಆಪರೆಶನ್ (ಓಐಸಿ)’ ಇದು ದೊಡ್ಡ ಸಂಘಟನೆಯಾಗಿದ್ದರೂ ಅದಕ್ಕೆ ಈಗ ಅಷ್ಟೇನು ರಾಜಕೀಯ ಮಹತ್ವ ಉಳಿದಿಲ್ಲ. ಅದೇ ರೀತಿ ಅಫ್ಘಾನಿಸ್ತಾನದ ವಿಷಯದಲ್ಲಿ ಈ ಸಂಘಟನೆಯ ಭೂಮಿಕೆಗೆ ಅಷ್ಟೇನೂ ಮಹತ್ವವಿಲ್ಲ. ಏಕೆಂದರೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‍ನ ವಿರುದ್ಧ ಹೋರಾಡುವ ಶಕ್ತಿಯೂ ಮುಸಲ್ಮಾನರಾಗಿದ್ದಾರೆ. ಪಶ್ಚಿಮ ಏಶಿಯಾದಲ್ಲಿಯ ದೇಶಗಳು ಅದರಲ್ಲಿ ಭಾಗವಹಿಸಿದರೆ ಮಾತ್ರ ಏನಾದರೊಂದು ದೃಷ್ಟಿಕೋನವು ಸ್ಪಷ್ಟವಾಗುತ್ತದೆ.

ಕೊಲ್ಲಿ ದೇಶಗಳಿಂದಲೂ ತಾಲಿಬಾನ್‍ಗೆ ಬೆಂಬಲ ನೀಡಲು ನಿರಾಕರಣೆ

ಕತಾರ ಹೊರತು ಪಡಿಸಿ ಇತರ ಎಲ್ಲ ಕೊಲ್ಲಿ ದೇಶಗಳು ತಾಲಿಬಾನ್‍ಗೆ ಬೆಂಬಲ ನೀಡಲು ನಿರಾಕರಿಸಿವೆ. ಕಳೆದ 2 ತಿಂಗಳಲ್ಲಿ ಈ 56 ದೇಶಗಳ ಬೇರೆ ಬೇರೆ ಸಂಘಟನೆಗಳು ಅಫ್ಘಾನ್ ಸರಕಾರದ ಪರವಾಗಿ ಹೇಳಿಕೆಯನ್ನು ನೀಡಿದ್ದವು; ಆದರೆ ಈಗ ಅವು ಶಾಂತವಾಗಿವೆ. ಇನ್ನೊಂದು ಕಡೆ ಸಂಯುಕ್ತ ಅರಬ ಅಮಿರಾತ್ ಹಾಗೂ ಸೌದಿ ಅರೇಬಿಯಾದಂತಹ ಮುಖ್ಯ ಕೊಲ್ಲಿ ರಾಷ್ಟ್ರಗಳು ಅಮೇರಿಕಾದ ಪರವಾಗಿಯೇ ಇರಲಿದೆ, ಎಂದು ಹೇಳಲಾಗುತ್ತಿದೆ.

ರಷ್ಯಾ ಮತ್ತು ಚೀನಾದಿಂದ ಸ್ವಾರ್ಥಕ್ಕಾಗಿ ಬೆಂಬಲ !

ರಷ್ಯಾ ಮತ್ತು ಚೀನಾದಿಂದ ತಾಲಿಬಾನ್‍ಗೆ ಸ್ವಲ್ಪ ಪ್ರಮಾಣದಲ್ಲಿ ಬೆಂಬಲ ನೀಡುವ ಹೇಳಿಕೆಯನ್ನು ನೀಡಿದ್ದರೂ, ನೇರ ಬೆಂಬಲವನ್ನು ಘೋಷಿಸಿಲ್ಲ. ಒಂದುವೇಳೆ ಹೀಗೆ ಬೆಂಬಲವನ್ನು ನೀಡಿದರೆ, ತಾಲಿಬಾನ್‍ನ ಶಕ್ತಿ ಹೆಚ್ಚಾಗಲಿದೆ; ಆದರೆ ಈ ಉಭಯ ದೇಶಗಳು ಕೇವಲ ಆರ್ಥಿಕ ಮತ್ತು ಸಮರಾಸಕ್ತಿಯನ್ನು ನೋಡಿಯೇ ಅಫ್ಘಾನಿಸ್ತಾನಕ್ಕೆ ಬೆಂಬಲ ನೀಡಲಿದೆ, ಎಂದು ಚರ್ಚೆ ನಡೆಯುತ್ತಿದೆ. ಆದ್ದರಿಂದ ರಶಿಯಾ ಮತ್ತು ಚೀನಾಕ್ಕೆ ತಾಲಿಬಾನ್‍ಅನ್ನು ಅಸಂತೋಷ ಪಡಿಸಲು ಇಚ್ಛೆ ಇಲ್ಲ. ಈ ಎರಡೂ ದೇಶಗಳು ತಮ್ಮ ದೇಶದಲ್ಲಿ ಮತಾಂಧ ಹಾಗೂ ಜಿಹಾದಿಗಳ ಸರ್ವನಾಶ ಪಡಿಸಲು ಸತತ ಪ್ರಯತ್ನ ಮಾಡುತ್ತಲೇ ಇರುತ್ತವೆ.