ಪರಾತ್ಪರ ಗುರು ಡಾ. ಆಠವಲೆ ಇವರು ಉಪಯೋಗಿಸಿದ ಕನ್ನಡಕದ ಬಣ್ಣ ಬದಲಾಗಿ ಹಳದಿ ಬಣ್ಣದ ವಲಯ ಬರುವುದು ಮತ್ತು ಅದಕ್ಕೆ ಅಷ್ಟಗಂಧದ ಪರಿಮಳ ಬರುವುದರ ಹಿನ್ನಲೆಯ ಅಧ್ಯಾತ್ಮಶಾಸ್ತ್ರ

ಪರಾತ್ಪರ ಗುರು ಡಾ. ಆಠವಲೆಯವರು ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕೆಂದು, ಕಳೆದ ಅನೇಕ ವರ್ಷಗಳಿಂದ ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನಿಸುತ್ತಿದ್ದಾರೆ. ಇದರಿಂದ ವಿಶ್ವದ ಕಲ್ಯಾಣವಾಗಲಿದೆ. ಅವರಿಂದ ಸೂಕ್ಷ್ಮದಲ್ಲಾಗುತ್ತಿರುವ ಈ ಅದ್ವಿತೀಯ ಕಾರ್ಯದ ಸ್ಥೂಲ ಪರಿಣಾಮವು ಅವರ ದಿನನಿತ್ಯ ಉಪಯೋಗಿಸುವ ವಸ್ತುಗಳ ಮೇಲೆ ಕಂಡು ಬರುತ್ತದೆ. ಈ ಲೇಖನದಲ್ಲಿ ಸನಾತನದ ಸೂಕ್ಷ್ಮ ಜ್ಞಾನಪ್ರಾಪ್ತ ಮಾಡಿಕೊಳ್ಳುವ ಕು. ಮಧುರಾ ಭೋಸಲೆಯವರು ಮಾಡಿರುವ ಸೂಕ್ಷ್ಮ ಪರೀಕ್ಷಣೆಯನ್ನು ನೀಡುತ್ತಿದ್ದೇವೆ.

ಕು. ಮಧುರಾ ಭೋಸಲೆ

ಕು. ಮಧುರಾ ಭೋಸಲೆ‘ಪರಾತ್ಪರ ಗುರು ಡಾ. ಆಠವಲೆಯವರು ೨೦೦೭ ರಿಂದ ೨೦೧೫ ನೇ ಇಸವಿಯ ಅವಧಿಯಲ್ಲಿ ಉಪಯೋಗಿಸಿದ ಕನ್ನಡಕದ  ಗಾಜುಗಳ ಬಣ್ಣ ಬದಲಾಗಿ ಅವು ಹಳದಿಯಾಗಿವೆ. ಪರಾತ್ಪರ ಗುರು ಡಾ. ಆಠವಲೆಯವರ ಕಣ್ಣುಗಳಿಂದ ಪ್ರಕ್ಷೇಪಿಸುವ ಚೈತನ್ಯ ಮತ್ತು ಶಕ್ತಿಯ ಕಾರ್ಯನಿರತ ಸ್ಪಂದನಗಳ ದೃಶ್ಯ ಪರಿಣಾಮವು ಈ ಕನ್ನಡಕದ ಮೇಲಾಗಿರುವುದು ಕಂಡು ಬರುತ್ತದೆ. ಈ ಕನ್ನಡಕದ ಗಾಜುಗಳ ಹೊರಗಿನ ಬದಿಗಳು ಹೆಚ್ಚು ಪ್ರಮಾಣದಲ್ಲಿ ಹಳದಿಯಾಗಿವೆ. ಕನ್ನಡಕದ ಎಡಗಡೆಯ ಗಾಜಿನ ತುಲನೆಯಲ್ಲಿ ಬಲಗಡೆಯ ಗಾಜು ಅಧಿಕ ಪ್ರಮಾಣದಲ್ಲಿ ಹಳದಿಯಾಗಿರುವುದು ಕಂಡುಬರುತ್ತದೆ. ಈ ಕನ್ನಡಕದಿಂದ ಹಳದಿ ಬಣ್ಣದ ಪ್ರಕಾಶ ಪ್ರಕ್ಷೇಪಿಸುವುದು ಅರಿವಾಗುತ್ತದೆ. ಅಲ್ಲದೇ ಈ ಕನ್ನಡಕಕ್ಕೆ ಅಷ್ಟಗಂಧದ ಸುಗಂಧವೂ ಬರುತ್ತದೆ.

– ಕು. ಪ್ರಿಯಾಂಕಾ ಲೋಟಲೀಕರ ಸಂಶೋಧನಾ-ವಿಭಾಗ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ರಾಮನಾಥಿ, ಗೋವಾ (೨೩.೪.೨೦೨೧)

೧. ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿದ್ದ ಕನ್ನಡಕದಲ್ಲಿ ಆಗಿರುವ ಬದಲಾವಣೆ ಮತ್ತು ಅದರ ಹಿಂದಿನ ಅಧ್ಯಾತ್ಮಶಾಸ್ತ್ರ

೧ ಅ. ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿದ್ದ ಕನ್ನಡಕದ ಬಣ್ಣ ಹಳದಿಯಾಗಿರುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ : ಇಡೀ ವಿಶ್ವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಲು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವವು ಕಾರ್ಯನಿರತವಾಗಿದೆ ಎಂದು ನನಗೆ ಅರಿವಾಯಿತು. ಯಾವಾಗ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವಮಯ ಇಚ್ಛಾಶಕ್ತಿ ಕಾರ್ಯನಿರತವಾಗುತ್ತದೆಯೋ, ಆಗ ಇಡೀ ವಿಶ್ವದಲ್ಲಿನ ಒಳ್ಳೆಯ ಜೀವಗಳ ಮನಸ್ಸಿನಲ್ಲಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡುವ ಸಾತ್ತ್ವಿಕ ಇಚ್ಛೆ ಜಾಗೃತವಾಗುತ್ತದೆ. ಯಾವಾಗ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವಮಯ ಕ್ರಿಯಾಶಕ್ತಿ ಕಾರ್ಯನಿರತವಾಗುತ್ತದೆಯೋ, ಆಗ ಇಡೀ ವಿಶ್ವದಲ್ಲಿ ಸಾತ್ತ್ವಿಕ ಜೀವಗಳಿಂದ ಧರ್ಮರಕ್ಷಣೆಯ ಕಾರ್ಯ ಪ್ರಾರಂಭವಾಗಿ ಅವರಿಂದ ಪ್ರತ್ಯಕ್ಷ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಪ್ರಯತ್ನಗಳಾಗುತ್ತವೆ. ಯಾವಾಗ ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವಮಯ ಜ್ಞಾನಶಕ್ತಿ ಕಾರ್ಯನಿರತವಾಗುತ್ತದೆಯೋ, ಆಗ ಇಡೀ ವಿಶ್ವದಲ್ಲಿನ ಸಾತ್ತ್ವಿಕ ಜೀವಗಳಿಗೆ ಧರ್ಮ, ಅಧ್ಯಾತ್ಮ, ವಿವಿಧ ವಿದ್ಯೆಗಳು ಮತ್ತು ಕಲೆಗಳ ಜ್ಞಾನಪ್ರಾಪ್ತಿಯಾಗಿ ಅವುಗಳ ವಿಕಸನವಾಗುತ್ತದೆ. ಕಾಲಾನುಸಾರ ಸಂಪೂರ್ಣ ವಿಶ್ವದಲ್ಲಿ ಹಿಂದೂ ಧರ್ಮ ಮತ್ತು ಅಧ್ಯಾತ್ಮಶಾಸ್ತ್ರವನ್ನು ವಿಹಂಗಮ ಗತಿಯಲ್ಲಿ ಪ್ರಸಾರ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ವಿಷ್ಣುತತ್ತ್ವಮಯ ಜ್ಞಾನಶಕ್ತಿಯು ಕಾರ್ಯನಿರತವಾಗಿದೆ ಎಂದೂ ನನಗೆ ಅನಿಸಿತು. ಈ ಜ್ಞಾನಶಕ್ತಿಯು ಅವರ ಆಜ್ಞಾಚಕ್ರದಿಂದ ಇಡೀ ವಿಶ್ವದಲ್ಲಿ ನಿರ್ಗುಣ-ಸಗುಣ ಸ್ತರದಲ್ಲಿ ಪ್ರಕ್ಷೇಪಿಸುತ್ತದೆ. ಕಣ್ಣುಗಳು ಆಜ್ಞಾಚಕ್ರದ ಹತ್ತಿರ ಇರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಕಣ್ಣುಗಳಿಂದ ಸಗುಣ-ನಿರ್ಗುಣ ಸ್ತರದಲ್ಲಿನ ಜ್ಞಾನಶಕ್ತಿಯು ಹಳದಿ ಬಣ್ಣದ ಲಹರಿಗಳು ಸಂಪೂರ್ಣ ವಾತಾವರಣದಲ್ಲಿ ಪ್ರಕ್ಷೇಪಿಸುತ್ತವೆ. ಅವರು ಬಳಸುತ್ತಿದ್ದ ಕನ್ನಡಕದ ಮೇಲೆ ಈ ಜ್ಞಾನಲಹರಿಗಳ ಪರಿಣಾಮವಾಗಿರುವುದರಿಂದ ಅವರು ಉಪಯೋಗಿಸುತ್ತಿದ್ದ ಕನ್ನಡಕದ ಬಣ್ಣ ಹಳದಿಯಾಗಿದೆ.

೧ ಆ. ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿದ್ದ ಕನ್ನಡಕದ ಎಡಗಡೆಯ ಗಾಜಿನ ತುಲನೆಯಲ್ಲಿ ಬಲಗಡೆಯ ಗಾಜು ಅಧಿಕ ಪ್ರಮಾಣದಲ್ಲಿ ಹಳದಿಯಾಗಿರುವುದರ ಹಿಂದಿನ ಸೂಕ್ಷ್ಮ-ಪ್ರಕ್ರಿಯೆ ಮತ್ತು ಅದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ : ಚಂದ್ರ ಮತ್ತು ಸೂರ್ಯ ಇವು ವಿಶ್ವಪುರುಷನ ಅಥವಾ ವಿರಾಟಪುರುಷನ ಎರಡು ಕಣ್ಣುಗಳಾಗಿವೆ. ಪರಾತ್ಪರ ಗುರು ಡಾ. ಆಠವಲೆಯವರು ಈ ವಿರಾಟ ಪುರುಷನ ಪ್ರತಿರೂಪವಾಗಿದ್ದಾರೆ. ಆದುದರಿಂದ ಅವರ ಬಲಗಡೆಯ ಕಣ್ಣಿನಲ್ಲಿ ಸೂರ್ಯದೇವನ ಮತ್ತು ಎಡಗಡೆಯ ಕಣ್ಣಿನಲ್ಲಿ ಚಂದ್ರದೇವನ ಶಕ್ತಿ ಕಾರ್ಯನಿರತವಾಗಿರುತ್ತದೆ. ಯಾವಾಗ ಅವರಿಂದ ಸಂಪೂರ್ಣ ವಿಶ್ವದಲ್ಲಿ ವಿಷ್ಣುಮಯ ಜ್ಞಾನಶಕ್ತಿಯ ಪ್ರಕ್ಷೇಪಣೆಯಾಗುತ್ತದೆಯೋ, ಆಗ ಅವರ ಬಲಗಡೆಯ ಕಣ್ಣಿನಿಂದ ಸೂರ್ಯನ ತೇಜಸಮಾನ ದೈದಿಪ್ಯಮಾನ ತೇಜೋಮಯ ಹಳದಿ ಬಣ್ಣದ ಪ್ರಕಾಶ ಪ್ರಕ್ಷೇಪಿಸುತ್ತದೆ. ಅದರಂತೆ ಅವರ ಎಡಗಡೆಯ ಕಣ್ಣಿನಿಂದ ಚಂದ್ರಸಮಾನ ಶೀತಲವಾಗಿರುವ ಮಂದ ಸ್ವರೂಪದ ಹಳದಿ ಬಣ್ಣದ ಪ್ರಕಾಶ ಪ್ರಕ್ಷೇಪಿಸುತ್ತದೆ. ಎಡಗಡೆಯ ಕಣ್ಣಿನಲ್ಲಿ ಅಪ್ರಕಟ ಅವಸ್ಥೆಯಲ್ಲಿರುವ ಜ್ಞಾನಶಕ್ತಿ ಕಾರ್ಯನಿರತವಾಗಿದ್ದು, ಬಲಗಡೆಯ ಕಣ್ಣಿನಲ್ಲಿ ಪ್ರಕಟ ಸ್ವರೂಪದ ಜ್ಞಾನಶಕ್ತಿ ಕಾರ್ಯನಿರತವಾಗಿರುತ್ತದೆ. ಶಕ್ತಿಯ ಪ್ರಕಟೀಕರಣ ಎಷ್ಟು ಅಧಿಕ ಇರುತ್ತದೆಯೋ, ಅಷ್ಟೇ ಅದರ ಸಗುಣ ರೂಪದಲ್ಲಿನ ಘನೀಕರಣವೂ ಅಧಿಕ ಪ್ರಮಾಣದಲ್ಲಿ ಆಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಎಡಗಡೆಯ ಕಣ್ಣಿನ ತುಲನೆಯಲ್ಲಿ ಬಲಗಡೆಯ ಕಣ್ಣಿನಲ್ಲಿ ಜ್ಞಾನಶಕ್ತಿಯ ಘನೀಕರಣ ಅಧಿಕ ಪ್ರಮಾಣದಲ್ಲಿ ಆಗಿರುವುದರಿಂದ ಅವರು ಉಪಯೋಗಿಸುತ್ತಿದ್ದ ಕನ್ನಡಕದ ಎಡಗಡೆಯ ಗಾಜಿನ ತುಲನೆಯಲ್ಲಿ ಬಲಗಡೆಯ ಗಾಜು ಅಧಿಕ ಪ್ರಮಾಣದಲ್ಲಿ ಹಳದಿಯಾಗಿದೆ. ಅವರ ಎರಡೂ ಕಣ್ಣುಗಳಿಂದ ಜ್ಞಾನಶಕ್ತಿಯ ಲಹರಿಗಳು ಒಂದೇ ಸಮಯದಲ್ಲಿ ಪ್ರಕ್ಷೇಪಿತಗೊಳ್ಳುತ್ತವೆ. ಆದುದರಿಂದ ಅವರ ಕನ್ನಡಕವನ್ನು ನೋಡುವಾಗ ಸೂರ್ಯನ ಪ್ರತೀಕವಾಗಿರುವ ಅವರ ಬಲಗಡೆಯ ಕಣ್ಣಿನ ಎದುರಿಗಿರುವ  ಕನ್ನಡಕದ ಗಾಜಿನ ತೇಜೋಮಯ ಹಳದಿ ಬಣ್ಣವು ಸ್ಥೂಲದಿಂದ ಕಾಣಿಸುತ್ತದೆ ಮತ್ತು ಅವರ ಎಡಗಡೆಯ ಕಣ್ಣಿನ ಎದುರಿಗಿರುವ ಕನ್ನಡಕದ ಗಾಜನ್ನು ನೋಡಿದಾಗ ಮನಸ್ಸಿಗೆ ಶಾಂತಿ ಮತ್ತು ಶೀತಲತೆಯ ಅರಿವಾಗುತ್ತದೆ.

೧ ಇ. ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿದ್ದ ಕನ್ನಡಕದ ಗಾಜುಗಳ ಮುಂದಿನ ಭಾಗಕ್ಕಿಂತ ಅವುಗಳ ಹೊರಗಿನ ಭಾಗಗಳು ಅಧಿಕ ಪ್ರಮಾಣದಲ್ಲಿ ಹಳದಿ ಆಗಿರುವುದರ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ : ತೇಜತತ್ತ್ವವು ಸಗುಣ-ನಿರ್ಗುಣ ಸ್ತರದಲ್ಲಿ ಕಾರ್ಯನಿರತವಾಗಿರುತ್ತದೆ ಮತ್ತು ಪೃಥ್ವಿತತ್ತ್ವವು ಸಗುಣ ಸ್ತರದಲ್ಲಿ ಕಾರ್ಯನಿರತವಾಗಿರುತ್ತದೆ. ಯಾವುದೇ ಪಂಚತತ್ತ್ವದಲ್ಲಿನ ಸಗುಣ ತತ್ತ್ವದಿಂದ ಆ ತತ್ತ್ವದ ಘನೀಕರಣವು ಅಧಿಕ ಪ್ರಮಾಣದಲ್ಲಾಗಿ ಅದರ ಬಣ್ಣ ಮತ್ತು ರೂಪ ಸಾಕಾರಗೊಳ್ಳುತ್ತದೆ. ಕನ್ನಡಕದ ಗಾಜುಗಳಲ್ಲಿ ತೇಜತತ್ತ್ವ ಅಧಿಕ ಪ್ರಮಾಣದಲ್ಲಿರುವುದರಿಂದ ಅವು ಅಧಿಕ ಪಾರದರ್ಶಕ ಕಾಣಿಸುತ್ತಿವೆ. ಕನ್ನಡಕದ ಗಾಜುಗಳ ಹೊರಗಿನ ಭಾಗಗಳಲ್ಲಿ ಪೃಥ್ವಿತತ್ತ್ವ ಅಧಿಕ ಪ್ರಮಾಣದಲ್ಲಿರುವುದರಿಂದ ಅವು ಅಲ್ಪ ಪ್ರಮಾಣದಲ್ಲಿ ಪಾರದರ್ಶಕ ವಾಗಿ ಕಾಣಿಸುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರ ಕನ್ನಡಕದ ಗಾಜುಗಳ ಮುಂದಿನ ಭಾಗದಲ್ಲಿ ಮುಂದಿನ  ಭಾಗಕ್ಕೆ ನಿರ್ಗುಣ-ಸಗುಣ ಸ್ತರದಲ್ಲಿ ಮತ್ತು ಕನ್ನಡಕದ ಗಾಜುಗಳ  ಹೊರಗಿನ ಭಾಗಗಳಿಂದ ಹತ್ತೂ ದಿಕ್ಕುಗಳಿಗೆ ಸಗುಣ-ನಿರ್ಗುಣ ಸ್ತರದಲ್ಲಿ ಜ್ಞಾನಶಕ್ತಿ ಮತ್ತು ಚೈತನ್ಯ ಪ್ರಕ್ಷೇಪಿಸುತ್ತದೆ. ಆದುದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿದ್ದ ಕನ್ನಡಕದ ಗಾಜುಗಳ ಮುಂದಿನ ಭಾಗಕ್ಕಿಂತ ಅವುಗಳ ಹೊರಗಿನ ಭಾಗಗಳು  ಅಧಿಕ ಪ್ರಮಾಣದಲ್ಲಿ ಹಳದಿ ಬಣ್ಣದ್ದಾಗಿವೆ.

೨. ಪರಾತ್ಪರ ಗುರು ಡಾ. ಆಠವಲೆಯವರಿಂದ ಪೃಥ್ವಿ, ತೇಜ ಮತ್ತು ಆಕಾಶ ಈ ಮೂರು ತತ್ತ್ವಗಳ ಸ್ತರದಲ್ಲಿ ಸಂಪೂರ್ಣ ವಿಶ್ವದಲ್ಲಿ ಜ್ಞಾನಶಕ್ತಿ ಪ್ರಕ್ಷೇಪಿತಗೊಳ್ಳುವುದು

೨ ಅ. ಪರಾತ್ಪರ ಗುರು ಡಾ. ಆಠವಲೆಯವರ ದೇಹವು ಹೊರಗಿನಿಂದ ಮನುಷ್ಯರಂತೆ ಕಾಣಿಸುತ್ತಿದ್ದರೂ, ಅದರಲ್ಲಿ ಕಾರ್ಯನಿರತ ವಾಗಿರುವ ಈಶ್ವರೀ ಚೈತನ್ಯದಿಂದ, ನಿಜವಾದ ಅರ್ಥದಲ್ಲಿ ಅದು ದೈವೀ ದೇಹವಾಗಿದೆ. ಆದುದರಿಂದ ಯಾವಾಗ ಅವರಿಂದ ಸಾಧಕರಿಗೆ ಆವಶ್ಯಕವಿರುವ ಶಕ್ತಿಯ ಪ್ರಕ್ಷೇಪಣೆಯಾಗುತ್ತದೆಯೋ, ಆಗ ಅವರ ದಿವ್ಯತ್ವವನ್ನು ಪ್ರದರ್ಶಿಸುವ ದೈವೀ ಸುಗಂಧ ಮತ್ತು ದೈವೀ ಬಣ್ಣ ಅವರ ಸ್ಥೂಲ ದೇಹದ ಮೇಲೆ ಮತ್ತು ಅವರ ಸ್ಥೂಲ ದೇಹಕ್ಕೆ ಸಂಬಂಧಿಸಿದ ಘಟಕಗಳ ಮೇಲೆ, ಉದಾ. ಕನ್ನಡಕ, ಅವರು ವಾಸಿಸುತ್ತಿರುವ ಕೋಣೆ ಇತ್ಯಾದಿಗಳ ಮಾಧ್ಯಮದಿಂದ ಪ್ರಕಟವಾಗುತ್ತದೆ. ಹಾಗಾಗಿ ಪರಾತ್ಪರ ಗುರು ಡಾ. ಆಠವಲೆಯವರಿಂದ ಪೃಥ್ವಿತತ್ತ್ವದ ಸ್ತರದಲ್ಲಿ ಜ್ಞಾನಶಕ್ತಿಯ ಪ್ರಕ್ಷೇಪಣೆಯಾಗುವುದರಿಂದ ಅವರ ಕನ್ನಡಕಕ್ಕೆ ಅಷ್ಟಗಂಧದ ಸುಗಂಧ ಬರತೊಡಗಿದೆ.

೨ ಆ. ಪರಾತ್ಪರ ಗುರು ಡಾ. ಆಠವಲೆಯವರ ಶರೀರದಿಂದ ಪ್ರಕ್ಷೇಪಿಸುವ ಜ್ಞಾನಶಕ್ತಿಯು ತೇಜ ಮತ್ತು ಆಕಾಶ ಈ ತತ್ತ್ವಗಳ ಸ್ತರದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾರ್ಯ ಮಾಡುತ್ತದೆ. ಸಗುಣ ಸ್ತರದಲ್ಲಿನ ಜ್ಞಾನಶಕ್ತಿಯು ಜ್ಞಾನತೇಜದ ರೂಪದಲ್ಲಿ ಕಾರ್ಯನಿರತವಾಗಿರುತ್ತದೆ ಮತ್ತು ಆಕಾಶತತ್ತ್ವದ ಸ್ತರದಲ್ಲಿನ ಜ್ಞಾನಶಕ್ತಿಯು ಶಬ್ದ ಅಥವಾ ನಾದ ಇವುಗಳರೂಪದಲ್ಲಿ ಕಾರ್ಯನಿರತವಾಗಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸುತ್ತಿದ್ದ ಕನ್ನಡಕದ ಗಾಜುಗಳು ಸಗುಣ ಸ್ತರದಲ್ಲಿ ತೇಜೋಮಯ ಜ್ಞಾನಶಕ್ತಿಯ ಲಹರಿಗಳಿಂದ ಹಳದಿ ಬಣ್ಣದ್ದಾಗಿವೆ. ಹಾಗೆಯೇ ಪರಾತ್ಪರ ಗುರು ಡಾ. ಆಠವಲೆಯವರಿಂದ ಆಕಾಶತತ್ತ್ವದ ಸ್ತರದಲ್ಲಿ ಜ್ಞಾನಶಕ್ತಿಯ ಪ್ರಕ್ಷೇಪಣೆ ಆಗುತ್ತಿರುವುದರಿಂದ ಅವರ ಕೋಣೆಯಲ್ಲಿನ ಫ್ಯಾನ್, ಶೌಚಾಲಯದ ಫ್ಲಶ್ ಮತ್ತು ನಲ್ಲಿಗಳಿಂದ ಹರಿಯುವ ನೀರು, ಇಷ್ಟೇ ಅಲ್ಲದೇ ವಿವಿಧ ಸ್ಥಳಗಳಲ್ಲಿರುವ ಸನಾತನದ ಆಶ್ರಮಗಳು, ಸೇವಾಕೇಂದ್ರಗಳು ಮತ್ತು ಸಾಧಕರ ಮನೆಗಳಲ್ಲಿಯೂ ವಿವಿಧ ಪ್ರಕಾರದ ದೈವೀ ನಾದಗಳು ನಿರ್ಮಾಣವಾಗಿವೆ. ಅಲ್ಲದೇ ಪರಾತ್ಪರ ಗುರು ಡಾ. ಆಠವಲೆಯವರಿಂದ ಪ್ರಕ್ಷೇಪಿಸುವ ಜ್ಞಾನಶಕ್ತಿಯಿಂದ ಸಾಧಕರಲ್ಲಿ ಬ್ರಾಹ್ಮತೇಜ ಜಾಗೃತವಾಗಿ ಅವರಿಗೆ ಹಿಂದೂ ಧರ್ಮ ಮತ್ತು ಅಧ್ಯಾತ್ಮಶಾಸ್ತ್ರದ ಆಳವಾದ ಜ್ಞಾನ ಪ್ರಾಪ್ತವಾಗಿ ಅವರು ಆ ಸಂದರ್ಭದಲ್ಲಿನ ವಿಷಯವನ್ನು  ಪ್ರಭಾವಪೂರ್ಣವಾಗಿ ಮಂಡಿಸುತ್ತಿದ್ದಾರೆ ಅಥವಾ ಆ ವಿಷಯದಲ್ಲಿನ  ಲೇಖನಗಳನ್ನು ಬರೆಯುತ್ತಿದ್ದಾರೆ. ಅದೇ ರೀತಿ ಸನಾತನದ ಕೆಲವು ಸಾಧಕರಿಗೆ ಈಶ್ವರನಿಂದ ಪೃಥ್ವಿಯ ಮೇಲೆ ದುರ್ಲಭವಾಗಿರುವ ಈಶ್ವರೀ ಜ್ಞಾನ ಪ್ರಾಪ್ತವಾಗುತ್ತಿದೆ. ಇದರಿಂದ ಹಿಂದೂ ಧರ್ಮ ಮತ್ತು ಅಧ್ಯಾತ್ಮ ಇವುಗಳ ಆಚರಣೆಯ ಕೃತಿಗಳ ಸಂದರ್ಭದಲ್ಲಿನ ಶಾಸ್ತ್ರವನ್ನು ವಿವರಿಸುವ ಜ್ಞಾನವು ವಿವಿಧ ಗ್ರಂಥಗಳ ರೂಪದಲ್ಲಿ ಸಿದ್ಧವಾಗುತ್ತಿವೆ. ಈ ಜ್ಞಾನವು ವಿವಿಧ ಭಾಷೆಗಳಲ್ಲಿ ಭಾಷಾಂತರಗೊಂಡು ಅವು ಜಾಲತಾಣ ಮತ್ತು ಗ್ರಂಥಗಳ ಮಾಧ್ಯಮದಿಂದ ವಿಶ್ವಾದ್ಯಂತವಿರುವ ಜಿಜ್ಞಾಸುಗಳಿಗೆ ಉಪಲಬ್ಧವಾಗುತ್ತಿದೆ. ಇದರಿಂದ ಜ್ಞಾನಶಕ್ತಿಯ ಬಲದಲ್ಲಿ ಸಂಪೂರ್ಣ ವಿಶ್ವದಲ್ಲಿ ಹಿಂದೂ ಧರ್ಮ ಮತ್ತು ಅಧ್ಯಾತ್ಮಶಾಸ್ತ್ರ ಇವುಗಳ ವಿಹಂಗಮ ವೇಗದಿಂದ ಪ್ರಸಾರವಾಗಿ ವಿವಿಧ ದೇಶಗಳಲ್ಲಿನ ಅನೇಕರು ಈ ಜ್ಞಾನದಿಂದ ಪ್ರಭಾವಿತರಾಗಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ಪ್ರಾರಂಭಿಸಿದ್ದಾರೆ.

೩. ಶಕ್ತಿಯ ವಿಧಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸುಗಂಧ ಮತ್ತು ಬಣ್ಣ

ಈ ರೀತಿ ಪರಾತ್ಪರ ಗುರು ಡಾ. ಆಠವಲೆಯವರ ಮಾಧ್ಯಮದಿಂದ ಕಾರ್ಯನಿರತವಾಗಿರುವ ಜ್ಞಾನಶಕ್ತಿಯಿಂದಾಗಿ ಸಂಪೂರ್ಣ ವಿಶ್ವದಲ್ಲಿನ ಮನುಷ್ಯರಿಗೆ ಜ್ಞಾನಾಮೃತವು ದೊರೆತು ಅವರ ಜನ್ಮ ಸಾರ್ಥಕವಾಗುತ್ತಿದೆ. ಪರಾತ್ಪರ ಗುರು ಡಾ. ಆಠವಲೆ ಯವರು ಈ ಅಮೂಲ್ಯ ಜ್ಞಾನವನ್ನು ಕೊಟ್ಟು ಅನೇಕ ಜೀವಗಳ ಉದ್ಧಾರವನ್ನು ಮಾಡಿದ್ದಾರೆ. ಇದಕ್ಕಾಗಿ ಅವರ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅವು ಕಡಿಮೆಯೇ ಆಗಿವೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರೆತ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ (೨೩.೪.೨೦೨೧)

ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆಯನ್ನು ಮಾಡುವವರಿಗೆ ವಿನಂತಿ !

‘ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಬುದ್ಧಿಗೆ ಮೀರಿದ ಅನೇಕ ಘಟನೆಗಳು ಘಟಿಸುತ್ತಿರುತ್ತವೆ. ಇದರಲ್ಲಿನ ಒಂದು ಎಂದರೆ ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸಿದ ಕನ್ನಡಕ ಗಾಜುಗಳ ಬಣ್ಣ ಬದಲಾಗಿ ಅವು ಹಳದಿ ಆಗಿರುವುದು ಮತ್ತು ಅದಕ್ಕೆ ಅಷ್ಟಗಂಧದ ಸುಗಂಧ ಬರುವುದು ! ಕನ್ನಡಕದ ಬಣ್ಣ ಬದಲಾಗುವುದರ ಹಿಂದಿರುವ ವೈಜ್ಞಾನಿಕ ಕಾರಣವೇನು ? ಅದರ ಬಣ್ಣ ತಾನಾಗಿಯೇ ಹೇಗೆ ಬದಲಾಯಿತು ? ಅದನ್ನು ಯಾವ ವೈಜ್ಞಾನಿಕ ಉಪಕರಣಗಳ ಮೂಲಕ ಸಂಶೋಧನೆಯನ್ನು ಮಾಡಬಹುದು ? ಈ ಸಂದರ್ಭದಲ್ಲಿ ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ದೊರೆತರೆ ನಾವು ಅವರಿಗೆ ಕೃತಜ್ಞರಾಗಿರುವೆವು.

– ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ, ಗೋವಾ

(ಸಂಪರ್ಕ : ಶ್ರೀ ರೂಪೇಶ ಲಕ್ಷ್ಮಣ ರೇಡಕರ, ವಿ- ಅಂಚೆ ವಿಳಾಸ – [email protected]

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

* ಸೂಕ್ಷ್ಮಜ್ಞಾನದ ಪ್ರಯೋಗ : ಕೆಲವು ಸಾಧಕರು ಸೂಕ್ಷ್ಮವನ್ನು ತಿಳಿಯುವ ಕ್ಷಮತೆಯ ಅಧ್ಯಯನವೆಂದು ‘ಯಾವುದಾದರೊಂದು ವಸ್ತು, ಕೃತಿ, ಧಾರ್ಮಿಕ ವಿಧಿ, ವ್ಯಕ್ತಿ ಮುಂತಾದವುಗಳ ಬಗ್ಗೆ ಮನಸ್ಸು ಮತ್ತು ಬುದ್ಧಿಯ ಆಚೆಗೆ ಏನು ಅರಿವಾಗುತ್ತದೆ, ಎಂಬುದರ ಅಧ್ಯಯನ ಮಾಡುತ್ತಾರೆ. ಇದಕ್ಕೆ ‘ಸೂಕ್ಷ್ಮಜ್ಞಾನದ ಪ್ರಯೋಗ ಎನ್ನುತ್ತಾರೆ.

* ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ.

* ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು