ವೈಶಿಷ್ಟ್ಯಗಳು
ಅ. ಈ ಕಾಲಾವಧಿಯಲ್ಲಿ ಮಳೆಗಾಲವಿರುವುದರಿಂದ ಧರಣಿಯ ರೂಪವು ಬದಲಾಗಿರುತ್ತದೆ.
ಆ. ಮಳೆ ಹೆಚ್ಚಿರುವುದರಿಂದ ಬಹಳಷ್ಟು ಸ್ಥಳಾಂತರವಾಗುವುದಿಲ್ಲ. ಆದುದರಿಂದಲೇ ಚಾತುರ್ಮಾಸ ವ್ರತವನ್ನು ಒಂದೇ ಸ್ಥಳದಲ್ಲಿದ್ದು ಮಾಡಬೇಕೆಂಬ ರೂಢಿಯು ಬಂದಿದೆ.
ಇ. ಮನುಷ್ಯನ ಮಾನಸಿಕ ರೂಪವೂ ಬದಲಾಗಿರುತ್ತದೆ. ದೇಹದಲ್ಲಿನ ಜೀರ್ಣಾಂಗ ಇತ್ಯಾದಿಗಳ ಕಾರ್ಯವೂ ಭಿನ್ನರೀತಿ ಯಲ್ಲಿ ನಡೆದಿರುತ್ತದೆ. ಅದಕ್ಕನುಸಾರ ಈ ಕಾಲದಲ್ಲಿ ಗೆಡ್ಡೆ, ಬದನೆ, ಹುಣಸೇಹಣ್ಣು ಇತ್ಯಾದಿ ಖಾದ್ಯಪದಾರ್ಥಗಳನ್ನು ತಿನ್ನಬಾರದೆಂದು ಹೇಳಲಾಗಿದೆ.
ಈ. ಪರಮಾರ್ಥಕ್ಕೆ ಪೂರಕವಾಗಿರುವ ವಿಧಿವಿಧಾನಗಳು ಮತ್ತು ಪ್ರಪಂಚಕ್ಕೆ ಮಾರಕ ಸಂಗತಿಗಳ ನಿಷೇಧವು ಚಾತುರ್ಮಾಸದ ವೈಶಿಷ್ಟ್ಯವಾಗಿದೆ.
ಉ. ಚಾತುರ್ಮಾಸದಲ್ಲಿನ ಶ್ರಾವಣ ಮಾಸವು ವಿಶೇಷ ಮಹತ್ವದ್ದಾಗಿದೆ. ಭಾದ್ರಪದ ಕೃಷ್ಣ ಪಕ್ಷದಲ್ಲಿ ಮಹಾಲಯ ಶ್ರಾದ್ಧಗಳನ್ನು ಮಾಡುತ್ತಾರೆ.
ಊ. ಚಾತುರ್ಮಾಸದಲ್ಲಿ ಹಬ್ಬ ಮತ್ತು ವ್ರತಗಳು ಹೆಚ್ಚಿನ ಪ್ರಮಾಣದಲ್ಲಿರುವುದರ ಕಾರಣಗಳು : ಶ್ರಾವಣ, ಭಾದ್ರಪದ, ಆಶ್ವಯುಜ ಮತ್ತು ಕಾರ್ತಿಕ ಈ ನಾಲ್ಕು ತಿಂಗಳುಗಳಲ್ಲಿ (ಚಾತುರ್ಮಾಸದಲ್ಲಿ) ಪೃಥ್ವಿಯ ಮೇಲೆ ಬರುವ ಲಹರಿಗಳಲ್ಲಿ ತಮೋಗುಣವು ಹೆಚ್ಚಿರುವ ಯಮಲಹರಿಗಳ ಪ್ರಮಾಣವು ಅಧಿಕವಾಗಿರುತ್ತದೆ. ಅವುಗಳನ್ನು ಎದುರಿಸಲು ಸಾತ್ತ್ವಿಕತೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ. ಹಬ್ಬ ಮತ್ತು ವ್ರತಗಳ ಮೂಲಕ ಸಾತ್ತ್ವಿಕತೆಯು ಹೆಚ್ಚುವುದರಿಂದ ಚಾತುರ್ಮಾಸದಲ್ಲಿ ಹೆಚ್ಚು ಹಬ್ಬ ಮತ್ತು ವ್ರತಗಳಿವೆ. ಚಿಕಾಗೋ ಮೆಡಿಕಲ್ ಸ್ಕೂಲ್‌ನ ಸ್ತ್ರೀರೋಗತಜ್ಞರಾದ ಪ್ರೊಫೆಸರ್ ಡಾ. ಡಬ್ಲ್ಯು.ಎಸ್. ಕೋಗರ್‌ರು ನಡೆಸಿದ ಸಂಶೋಧನೆಯ ಪ್ರಕಾರ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಈ ನಾಲ್ಕು ತಿಂಗಳಿನಲ್ಲಿ, ವಿಶೇಷವಾಗಿ ಭಾರತದ ಸ್ತ್ರೀಯರಲ್ಲಿ ಗರ್ಭಕೋಶಕ್ಕೆ ಸಂಬಂಧಿಸಿದ ರೋಗಗಳು ಪ್ರಾರಂಭವಾಗುತ್ತವೆ ಅಥವಾ ಹೆಚ್ಚುತ್ತವೆ, ಎಂಬುದು ಕಂಡುಬಂದಿತು.
ಎ. ಚಾತುರ್ಮಾಸದಲ್ಲಿ ನಾಲ್ಕು ತಿಂಗಳುಗಳ ಕಾಲ ವ್ರತಸ್ಥರಾಗಿರಬೇಕಾಗಿರುತ್ತದೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)