ಕಾಲ ಮತ್ತು ದೇವತೆ
ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ. ದಕ್ಷಿಣಾಯನವು ದೇವರ ರಾತ್ರಿಯಾಗಿದ್ದು ಉತ್ತರಾಯಣವು ಹಗಲಾಗಿದೆ. ಕರ್ಕ ಸಂಕ್ರಾಂತಿಗೆ ಉತ್ತರಾಯಣವು ಪೂರ್ಣವಾಗುತ್ತದೆ ಮತ್ತು ದಕ್ಷಿಣಾಯನವು ಅಂದರೆ ದೇವರ ರಾತ್ರಿಯು ಪ್ರಾರಂಭವಾಗುತ್ತದೆ. ಕರ್ಕ ಸಂಕ್ರಾಂತಿಯು ಆಷಾಢ ಮಾಸದಲ್ಲಿ ಬರುತ್ತದೆ. ಆದುದರಿಂದಲೇ ಆಷಾಢ ಶುಕ್ಲ ಏಕಾದಶಿಯನ್ನು ‘ಶಯನೀ ಏಕಾದಶಿ ಎಂದು ಕರೆಯಲಾಗಿದೆ; ಏಕೆಂದರೆ ‘ಆ ದಿನ ದೇವರು ನಿದ್ರಿಸುತ್ತಾರೆ ಎನ್ನುವ ನಂಬಿಕೆಯಿದೆ. ಕಾರ್ತಿಕ ಶುಕ್ಲ ಏಕಾದಶಿಯಂದು ದೇವರು ನಿದ್ರೆಯಿಂದ ಏಳುತ್ತಾರೆ.
ಆದ್ದರಿಂದಲೇ ಅದನ್ನು ‘ಪ್ರಬೋಧಿನಿ (ಬೋಧಿನಿ, ದೇವೋತ್ಥಾನಿ) ಏಕಾದಶಿ ಎನ್ನುತ್ತಾರೆ. ವಾಸ್ತವದಲ್ಲಿ ದಕ್ಷಿಣಾಯನವು ಆರು ತಿಂಗಳುಗಳದ್ದಾಗಿದೆ. ಹಾಗಾಗಿ ದೇವರ ರಾತ್ರಿಯೂ ಅಷ್ಟೇ ಕಾಲಾವಧಿಯದ್ದಾಗಿರಬೇಕಾಗಿತ್ತು; ಆದರೆ ಬೋಧಿನಿ ಏಕಾದಶಿಯವರೆಗೆ ನಾಲ್ಕು ತಿಂಗಳು ಮಾತ್ರ ಪೂರ್ಣವಾಗುತ್ತವೆ. ಇದರ ಅರ್ಥ ಒಂದು ತೃತೀಯಾಂಶದಷ್ಟು ರಾತ್ರಿ ಕಾಲ ಬಾಕಿ ಇರುವಾಗಲೇ ದೇವತೆಗಳು ಎದ್ದು ತಮ್ಮ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸುತ್ತಾರೆ. ‘ಬ್ರಹ್ಮದೇವನನವಸೃಷ್ಟಿಯ ನಿರ್ಮಿತಿಯ ಕಾರ್ಯವು ನಡೆಯುತ್ತಿರುವಾಗ ಪಾಲನಕರ್ತನಾದ ವಿಷ್ಣುವು ನಿಷ್ಕ್ರಿಯನಾಗಿರುತ್ತಾನೆ; ಆದುದರಿಂದ ಚಾತುರ್ಮಾಸವನ್ನು ವಿಷ್ಣುಶಯನವೆಂದು ಕರೆಯಲಾಗಿದೆ. ಆಗ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ನಿದ್ರಿಸುತ್ತಾನೆಂದು ತಿಳಿಯಲಾಗುತ್ತದೆ. ಆಷಾಢ ಶುಕ್ಲ ಏಕಾದಶಿಯಂದು ವಿಷ್ಣುಶಯನವನ್ನು ಮತ್ತು ಕಾರ್ತಿಕ ಶುಕ್ಲ ಏಕಾದಶಿಯ ನಂತರ ಅಂದರೆ ದ್ವಾದಶಿಯಂದು ವಿಷ್ಣುಪ್ರಬೋಧೋತ್ಸವವನ್ನು ಆಚರಿಸುತ್ತಾರೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ)